ಕೊಪ್ಪಳದಲ್ಲಿನ ಹಿಂದು-ಮುಸ್ಲಿಂ ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಪಟ್ಟ ಕಟ್ಟಲಾಗುತ್ತಿದ್ದು, ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಎಲ್ಲಾ ಪ್ರೇಮ ಪ್ರಕರಣಗಳು ಲವ್ ಜಿಹಾದ್ ಅಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
- Home
- News
- State
- Karnataka News Live: ಪ್ರೇಮ ಪ್ರಕರಣಗಳೆಲ್ಲಾ ಲವ್ ಜಿಹಾದ್‌ಗಳಲ್ಲ - ಬಿಜೆಪಿ ಆರೋಪಕ್ಕೆ ಸಂಸದ ಹಿಟ್ನಾಳ ತಿರುಗೇಟು
Karnataka News Live: ಪ್ರೇಮ ಪ್ರಕರಣಗಳೆಲ್ಲಾ ಲವ್ ಜಿಹಾದ್‌ಗಳಲ್ಲ - ಬಿಜೆಪಿ ಆರೋಪಕ್ಕೆ ಸಂಸದ ಹಿಟ್ನಾಳ ತಿರುಗೇಟು

ದಾವಣಗೆರೆ: ವಚನಾನಂದ ಸ್ವಾಮೀಜಿಗೆ ನೈತಿಕತೆ ಇದ್ದರೆ ತಕ್ಷಣವೇ ಹರಿಹರ ಪಂಚಮಸಾಲಿ ಮಠವನ್ನು ತೊರೆಯಲಿ. ಇಲ್ಲದಿದ್ದರೆ ಮಠದಿಂದ ಹೇಗೆ ಖಾಲಿ ಮಾಡಿಸಬೇಕೆಂಬುದೂ ನಮಗೆ ಗೊತ್ತಿದೆ. ಕಾದು ನೋಡಿ ಎಂದು ಪೀಠದ ಟ್ರಸ್ಟಿ ಚಂದ್ರಶೇಖರ ಪೂಜಾರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ವಚನಾನಂದ ಶ್ರೀಗಳ ಆಚಾರ, ವಿಚಾರ, ನಡೆ, ನುಡಿಗಳನ್ನು ತಿದ್ದಿಕೊಳ್ಳಲು ಹಲವಾರು ಸಲ ಹೇಳಿದ್ದರೂ ಕಿವಿಗೊಡದ ಹಿನ್ನೆಲೆಯಲ್ಲಿ ಪೀಠದಿಂದ ಉಚ್ಚಾಟಿಸಿದ್ದು, ತಕ್ಷಣವೇ ಮಠದಿಂದ ಜಾಗ ಖಾಲಿ ಮಾಡಬೇಕು ಎಂದರು.
Karnataka News Live 15 April 2026ಪ್ರೇಮ ಪ್ರಕರಣಗಳೆಲ್ಲಾ ಲವ್ ಜಿಹಾದ್‌ಗಳಲ್ಲ - ಬಿಜೆಪಿ ಆರೋಪಕ್ಕೆ ಸಂಸದ ಹಿಟ್ನಾಳ ತಿರುಗೇಟು
Karnataka News Live 15 April 2026Karnataka cabinet reshuffle - 'ಸಿಎಂ ಆರ್ಥಿಕ ಸಲಹೆಗಾರ' ಎಂದು ಸುಮ್ನೆ ಹುದ್ದೆ ಕೊಟ್ಟಿದ್ದಾರೆ - ರಾಯರಡ್ಡಿ
Karnataka News Live 15 April 2026₹7.50 ಲಕ್ಷ ಮೌಲ್ಯದ ₹2000 ಖೋಟಾ ನೋಟು ಬದಲಿಸಿಕೊಳ್ಳಲು ಬೆಂಗಳೂರಿನ RBIಗೆ ಬಂದ; ಮುಂದೇನಾಯ್ತು?
ಚಲಾವಣೆ ಸ್ಥಗಿತಗೊಂಡಿರುವ ₹2000 ಮುಖಬೆಲೆಯ ಖೋಟಾ ನೋಟುಗಳನ್ನು ಆರ್‌ಬಿಐನಲ್ಲಿ ಬದಲಿಸಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹7.50 ಲಕ್ಷ ಮೌಲ್ಯದ 375 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
Karnataka News Live 15 April 2026ಕಾಂಗ್ರೆಸ್ ಪದಾಧಿಕಾರಿ ಪಟ್ಟಿಯಲ್ಲಿ ಆರೆಎಸ್ಸೆಸ್ ಕಾರ್ಯಕರ್ತರ ಹೆಸರು! ಹೇಗೆ ಸೇರಿದವು? ಯಾರ ಬೆಂಬಲಿಗರು?
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಸರುಗಳು ಕಾಣಿಸಿಕೊಂಡು ಭಾರೀ ವಿವಾದ ಸೃಷ್ಟಿಯಾಗಿದೆ. ಬಿಜೆಪಿಯಿಂದ ಉಚ್ಛಾಟಿತರಾದ ಇವರ ನೇಮಕಾತಿಗೆ ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಜಿಲ್ಲಾಧ್ಯಕ್ಷರು ಈ ನೇಮಕಾತಿಗೆ ತಡೆ ನೀಡಿದ್ದಾರೆ.
Karnataka News Live 15 April 2026ಏನೇ ಪುಂಗಿ ಬಾರಿಸಿದರೂ 2 ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲುವುದು; ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ. ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು.