- Home
- News
- State
- Karnataka News Live: ಬೆಲೆ ಏರಿಕೆ ಹೊರೆ ತಡೆಯಲೆಂದೇ ‘ಗ್ಯಾರಂಟಿ ’ ಕೊಡ್ತಿರೊದು: ಡಿಕೆ ಶಿವಕುಮಾರ್
LIVE NOW
Karnataka News Live: ಬೆಲೆ ಏರಿಕೆ ಹೊರೆ ತಡೆಯಲೆಂದೇ ‘ಗ್ಯಾರಂಟಿ ’ ಕೊಡ್ತಿರೊದು: ಡಿಕೆ ಶಿವಕುಮಾರ್

ಸಾರಾಂಶ
ಹಾಸನ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭಾರದಿಂದ ಜನರನ್ನು ತಪ್ಪಿಸಲು ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾನುವಾರ ಹಾಸನದಲ್ಲಿ ಬೆಲೆ ಏರಿಕೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೆಲೆ ಏರಿಕೆಯಿಂದ ಜನರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾರಂಟಿ ಯೋಜನೆಯು ಲಕ್ಷಾಂತರ ಜನರಿಗೆ ಸೇರುತ್ತಿದೆ. ವಿಪಕ್ಷಗಳು ವಿನಾಃ ಕಾರಣ ಟೀಕೆ ಮಾಡುತ್ತಿದೆ ಎಂದು ಆರೋಪಿಸಿದರು. ಜೊತೆಗೆ ಬೆಲೆ ಏರಿಕೆಯ ಹೊಡೆತದ ಸಂದರ್ಭದಲ್ಲಿ ಜನರ ಕೈಗೆ ಹಣ ಸೇರಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಜಾರಿಗೆ ತರಲಾಗಿದೆ. ಒಂದು ಕಡೆ ಜನರಿಗೆ ನೆರವು ನೀಡುತ್ತಿದ್ದೇವೆ. ಮತ್ತೊಂದು ಕಡೆ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೇವೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಜನರಿಗೆ ಏನು ಕೊಡುಗೆ ನೀಡಿದೆ ಎಂಬುದನ್ನು ಅವರು ಹೇಳಬೇಕು ಎಂದರು.