ಸಿನಿಮಾ, ಕಾರ್ಯಕ್ರಮ, ಸರಿಗಮಪ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಗಿಟಾರ್ ಮೂಲಕ ಮ್ಯಾಜಿಕ್ ಮಾಡುತ್ತಿದ್ದ ಗಿಟಾರ್ ಮಾಂತ್ರಿಕ ಶ್ರೀನಿವಾಸ್ ನಿಧನರಾಗಿದ್ದಾರೆ. ಸಂಗೀತ ಪ್ರೇಮಿಗಳಿಗೆ ದೊಡ್ಡ ಆಘಾತ ನೀಡಿದೆ.

ಬೆಂಗಳೂರು (ನ.10) ಗಿಟಾರ್ ನಾದ ಮೂಲಕ ಕೋಟಿ ಕೋಟಿ ಮನಸ್ಸು ಗೆದ್ದಿದ್ದ ಗಿಟಾರ್ ಶ್ರನಿವಾಸ್ ನಿಧನರಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋನಲ್ಲಿ ಬೆರಳ ತುದಿಗಳಲ್ಲಿ ಗಿಟಾರ್ ನಾದ ಮೂಲಕ ಕೇಳುಗರಿಗೆ ಇಂಪು ನೀಡುತ್ತಿದ್ದ ಗಿಟಾರ್ ಶ್ರಿನಿವಾಸ್ ನಿಧನಕ್ಕೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ. ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದ ಹಿನ್ನೆಲೆ ಸಂಗೀತಕ್ಕೆ ತಮ್ಮ ಅದ್ಭುತ ಗಿಟಾರ್ ವಾದನದ ಮೂಲಕ ಜೀವ ತುಂಬುತ್ತಿದ್ದ ಖ್ಯಾತ ಸಂಗೀತ ಕಲಾವಿದ ಡಿ ಶ್ರೀನಿವಾಸ್ ಆಚಾರ್ ಅಗಲಿಗೆ ಸಹಕಲಾವಿದರಿಗೆ ಆಘಾತ ನೀಡಿದೆ.

ಕಳೆದ ಹಲವು ವರ್ಷಗಳಿಂದ 'ಸರಿಗಮಪ' ಸೇರಿದಂತೆ ದಕ್ಷಿಣ ಭಾರತದ ಹಲವಾರು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ ವಾದಕರಾಗಿ ಶ್ರೀನಿವಾಸ್ ಆಚಾರ್ ಕಾರ್ಯನಿರ್ವಹಿಸುತ್ತಿದ್ದರು. ವೇದಿಕೆಯ ಮೇಲೆ ಗಾಯಕರು ಹಾಡಲು ಶುರು ಮಾಡಿದಾಗ, ತಮ್ಮ ಗಿಟಾರ್‌ನ ನಾದದಿಂದಲೇ ಗಾಯನಕ್ಕೆ ಅಪಾರ ಮೆರುಗು ನೀಡುತ್ತಿದ್ದರು. ಅವರ ಬೆರಳ ತುದಿಯ ಮಾಂತ್ರಿಕತೆ ಅಪಾರ ಸಂಖ್ಯೆಯ ಸಂಗೀತ ಪ್ರೇಮಿಗಳ ಮನ ಗೆದ್ದಿತ್ತು. ಝೀ ವಾಹನಿ ಶ್ರದ್ಧಾಂಜಲಿ ಸಲ್ಲಿಸಿದೆ.

ಅಮೃತ ಖಂಜೀರಾ ಹಾಗೂ ಸಂಗೀತ ಲೋಕದ ಶೋಕ

ಶ್ರೀನಿವಾಸ್ ಆಚಾರ್ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಸಂಗೀತ ಕ್ಷೆತ್ರದ ದಿಗ್ಗಜರು ಹಾಗೂ ಸಹಕಲಾವಿದರು ತೀವ್ರ ಕಂಬನಿ ಮಿಡಿದಿದ್ದಾರೆ. ಖ್ಯಾತ ಕಂಜೀರಾ ವಾದಕ ಅಮೃತ್ ಸೇರಿದಂತೆ ಹಿರಿಯ ನುರಿತ ವಾದ್ಯಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಶೋಕ ಸಂದೇಶವನ್ನು ಹಂಚಿಕೊಂಡಿದ್ದಾರೆ. "ನಮ್ಮ ಪ್ರೀತಿಯ ಮತ್ತು ಕನ್ನಡಿಗರ ನೆಚ್ಚಿನ ಗಿಟಾರ್ ಮಾಂತ್ರಿಕ ಶ್ರೀನಿವಾಸ್ ಆಚಾರ್ ಅವರ ಹಠಾತ್ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ತಡೆಯುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಸಂಗೀತ ಸಹೋದ್ಯೋಗಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

'ಸರಿಗಮಪ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನೂರಾರು ಬಾಲ ಗಾಯಕರು ಹಾಗೂ ಯುವ ಸ್ಪರ್ಧಿಗಳ ಹಾಡಿಗೆ ಹಿನ್ನೆಲೆ ಧ್ವನಿಯಾಗಿ, ಅವರಿಗೆ ಮಾರ್ಗದರ್ಶನ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದ ಶ್ರೀನಿವಾಸ್ ಆಚಾರ್ ಅವರ ನಗುವಿನ ಮುಖ ಮತ್ತು ಲಯಬದ್ಧ ಗಿಟಾರ್ ನಾದ ಇನ್ನು ನೆನಪು ಮಾತ್ರ. ಕನ್ನಡ ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಕಚೇರಿಗಳ ರಂಗದಲ್ಲಿ ಶ್ರೀನಿವಾಸ್ ಅವರ ಕೊಡುಗೆ ಅಪಾರವಾಗಿದೆ.

View post on Instagram