ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯಗೆ ಚಿತ್ರಹಿಂಸೆ ನೀಡ್ತಿದ್ದಾರೆ: ಯತ್ನಾಳ್

ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬದಲಾವಣೆ ವಿಚಾರದ ತಮ್ಮ ಹೇಳಿಕೆಗೆ ಗರಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಮೂಲಕ ಯತ್ನಾಳ್ ತಿರುಗೇಟು ನೀಡಿದರು.

Karnataka CM Change issue MLA Basanagowda patil yatnal statement at chamarajanagar today rav

ಚಾಮರಾಜನಗರ (ನ.6): ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ನವರೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬದಲಾವಣೆ ವಿಚಾರದ ತಮ್ಮ ಹೇಳಿಕೆಗೆ ಗರಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಮೂಲಕ ಯತ್ನಾಳ್ ತಿರುಗೇಟು ನೀಡಿದರು.

ಹೈಕಮಾಂಡ್ ಹೂಂ ಅಂದ್ರೆ ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಸಚಿವ ಪ್ರಿಯಾಂಕ ಖರ್ಗೆ ಒಂದು ಕಡೆ ಹೇಳಿದರೆ, ಸಿದ್ದರಾಮಯ್ಯರಿಗೆ ಮಾನಸಿಕವಾಗಿ ಚಿತ್ರ ಹಿಂಸೆ ಕೊಟ್ಟರೆ ನಾವು ಡಾ.ಪರಮೇಶ್ವರವರನ್ನು ಶಿಫಾರಸ್ಸು ಮಾಡುತ್ತೇವೆ ಎಂದು ಸಚಿವ ರಾಜಣ್ಣನವರೇ ಮತ್ತೊಂದು ಕಡೆ ಹೇಳಿದ್ದಾರೆ ಎಂದರು.

ತಾವು ತಾವೇ ಹೊಡಿದಾಡಿ ಸಾಯಲಿಕ್ಕತ್ಯಾರ ಇನ್ನ ದಲಿತರನ್ನ ಹೆಂಗ ಸಿಎಂ ಮಾಡ್ತಾರ?: ಕಾಂಗ್ರೆಸ್ ವಿರುದ್ಧ ಸಂಸದ ಜಿಗಜಿಣಗಿ ಕಿಡಿ

5 ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಹೇಳಿದವರು ಈಗ ಯಾಕೆ ಪರಮೇಶ್ವರ್ ಹೆಸರನ್ನ ತೆಗೆದು ಕೊಂಡರು? 2013 ರ ಚುನಾವಣೆಯಲ್ಲಿ ಪರಮೇಶ್ವರ್ ರನ್ನು ಸೋಲಿಸಿದವರು ಯಾರು? ಪರಮೇಶ್ವರ್ ಮನೆಗೆ ತೆರಳಿ ಮಾಡಿಕೊಂಡ ಒಳ ಒಪ್ಪಂದ ಏನಾಯ್ತು? ಹಾಗೇ ಉಪಾಹಾರ ಮಾಡಬೇಕಿದ್ರೆ ಎಲ್ಲಾ ಸಚಿವರನ್ನ ಕರೆಯಬೇಕಿತ್ತಲ್ವಾ? ನೀವು ಡಿಕೆಶಿ ಇಬ್ಬರೂ ಕೂಡ ಕರೆದು ಮುಖ್ಯಮಂತ್ರಿ ವಿಚಾರ ಕುರಿತು ಮಾತನಾಡಬಾರದು ಎಂದು ವಾರ್ನಿಂಗ್ ನೀಡಿದರೂ ಮದ್ದೂರು ಶಾಸಕ ಉದಯ್ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಅಂತ ಯಾಕೆ ಹೇಳಿದ್ರು? ಎಂದು ಸಿಎಂ ಸಿದ್ದರಾಮಯ್ಯನವರಿಗೆ ಯತ್ನಾಳ ತಿರುಗೇಟು ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಹಿಂದೂ ವಿರೋಧಿ ಹೇಳಿಕೆ:

ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು.

ತಾಲೂಕಿನ ಸೀಗೇವಾಡಿ ಗ್ರಾಮದ ರೈತ ಮರಿದಾಸನಾಯಕ ಅವರ ಜಮೀನಿನಲ್ಲಿ ಬರ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಸಾಣೇಹಳ್ಳಿ ಶ್ರೀಗಳ ಹೇಳಿಕೆಯ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್‌ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಅವರ ಉದ್ದೇಶ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂಬುದಾಗಿದೆ ಎಂದು ವ್ಯಂಗ್ಯವಾಡಿದರು.

ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್‌

ಹಿಂದೂ ಧರ್ಮದ ವಿರುದ್ದ ಮಾತನಾಡಲಿಕ್ಕೆ ಕೆಲವೊಂದು ಜನ ಪೇಯಿಡ್‌ ಸಾಹಿತಿಗಳಿದ್ದಾರೆ.ಇವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಾಂತರ ರು. ಅನುದಾನ ಸಿಗುತ್ತದೆ. ಪಾಪಾ ಆ ಸ್ವಾಮೀಜಿಯವರು ನಕ್ಸಲರಾಗಿರಬೇಕಿತ್ತು ಖಾವಿ ಹಾಕಿದ ಕಮ್ಯುನಿಸ್ಟ ಆಗಿದ್ದಾರೆ ಎಂದು ಸ್ವಾಮೀಜಜಿಯ ವಿರುದ್ಧ ಹರಿಹಾಯ್ದರು.

Latest Videos
Follow Us:
Download App:
  • android
  • ios