ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್‌

ಭಾರತ ಇನ್ನೊಂದು ಇಸ್ರೇಲ್ ಆಗಬಾರದು. ಅದಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಬಿಜೆಪಿಯನ್ನು ಮತ್ತೆ ಗೆಲ್ಲಿಸಬೇಕು, ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.

Mla Basanagouda Patil Yatnal Talks Over Sanatana Dharma At Kalaburagi gvd

ಆಳಂದ (ಅ.11): ಭಾರತ ಇನ್ನೊಂದು ಇಸ್ರೇಲ್ ಆಗಬಾರದು. ಅದಕ್ಕಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಬಿಜೆಪಿಯನ್ನು ಮತ್ತೆ ಗೆಲ್ಲಿಸಬೇಕು, ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. ಪಟ್ಟಣದಲ್ಲಿನ ಹಿಂದೂ ಮಹಾಗಣಪತಿಯ ವಿಸರ್ಜನೆ ಮೆರವಣಿಗೆ ಹಾಗೂ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರವರು ಇಸ್ಲಾಂನಲ್ಲಿ ಸಹೋದರತ್ವ ಇಲ್ಲ ಎಂಬ ನಿರ್ಧಾರವನ್ನು ಬಹಿರಂಗವಾಗಿಯೇ ಹೇಳಿದರು. ಪಾಕಿಸ್ತಾನಕ್ಕೆ ಭಾರತದ ಮುಸ್ಲಿಂರಿಗೆ ಕಳಿಸಿ, ಭಾರತಕ್ಕೆ ಪಾಕಿಸ್ತಾನದಲ್ಲಿನ ಹಿಂದೂಗಳನ್ನು ತೆಗೆದುಕೊಂಡು ಬರಲು ಹೇಳಿದ್ದರು. 1942ರಲ್ಲಿಯೇ ಭವಿಷ ನುಡಿದಿದ್ದರು. ಭಂಡಾರಾ ಕ್ಷೇತ್ರದಲ್ಲಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ಸಿಗರು ಸೋಲಿಸಿದರು. ಸಂಸತ್ತಿನಲ್ಲಿ ಅಂಬೇಡ್ಕರ್ ಭಾವಚಿತ್ರ, ಜನತಾಪಕ್ಷ ಅಧಿಕಾರದಲ್ಲಿದಾಗ ಹಾಕಲಾಯಿತು. ಅಂಬೇಡ್ಕರ್ ಅವರಿಗೆ ಯಾವುದೇ ಪ್ರಶಸ್ತಿ ಕೊಡಲಿಲ್ಲ. ಬದಲಾಗಿ ನೆಹರ, ಇಂದಿರಾಗಾಂಧಿ, ರಾಜೀವ ಗಾಂಧಿ ಅವರೇ ಪ್ರಶಸ್ತಿ ಪಡೆದುಕೊಂಡರು ಎಂದು ಕಾಂಗ್ರೆಸ್‌ ಅಂಬೇಡ್ಕರ್‌ ವಿರೋಧಿ ಎಂದು ಛೇಡಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸಲು ಬೈಕ್‌ ರ್‍ಯಾಲಿ: ಚಕ್ರವರ್ತಿ ಸೂಲಿಬೆಲೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ಆ ಪಕ್ಷದಲ್ಲಿಯೇ ಸಾಕಷ್ಟು ಅತೃಪ್ತಿ ಇದೆ. ಜಾತಿ ಇದರಲ್ಲಿ ಹೋಗುವುದಿಲ್ಲ. ವೀರಶೈವ ಮಹಾಸಭೆ ಲಿಂಗಾಯತರಿಗೆ ಉದ್ದಾರ ಮಾಡಿಲ್ಲ. ಒಂದೆರಡು ಕುಟುಂಬಗಳ ಆಸ್ತಿಯಾಗಿದೆ. ಲಿಂಗಾಯತರಿಗೆ ಮೀಸಲಾತಿ ಕೊಡಬೇಕು ಎಂದು ಹೋರಾಟ ಮಾಡಿದ್ದೇವು. ಆಗ ಮಹಾಸಭೆ ಕೇಲವ ಪತ್ರವನ್ನು ಕೊಟ್ಟಿದೆ. 20. ಲಿಂಗಾಯತರು ಮತ ಹಾಕಿದ್ದಾರೆ. ಏಳು ಜನ ಸಚಿವರನ್ನಾಗಿ ಮಾಡಿದ್ದಾರೆ, ನೂರಕ್ಕೆ ನೂರರಷ್ಟು ಮುಸ್ಲಿಂರು ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ಇಸ್ರೇಲ್ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಜನರು ಚಿಂತಿಸಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಆಯ್ಕೆ ಮಾಡಲಿ ಎಂದರು.

ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ

ಪೋಲೀಸರಿಂದಲೇ ರಾಘವಚೈತನ್ಯ ಲಿಂಗಕ್ಕೆ ಮುಕ್ತಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದಂತೆ ಮುಂದಿನ ದಿನಗಳಲ್ಲಿ ಪೊಲೀಸರಿಂದಲೇ ರಾಘವಚೈತನ್ಯ ಲಿಂಗಕ್ಕೆ ಮುಕ್ತಿ ಕೊಡಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆದ್ದು ಹಿಂದೂಗಳ ಸ್ಥಳವೆಂದು ಘೋಷಿಸುತ್ತೇವೆ'' ಎಂದು ಯಾತ್ನಾಳ್‌ ಹೇಳಿದರು. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರ್ಮಕ್ಕೆ ಸರ್ಕಾರ ಬಿದ್ದು, ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ರಾಘವ ಚೈತನ್ಯ ಲಿಂಗಕ್ಕೆ ಮುಕ್ತಿ ಕೊಡುತ್ತೇವೆ' ಎಂದರು. ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಮಹೇಶ ಗೌಳಿ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಇದ್ದರು.

Latest Videos
Follow Us:
Download App:
  • android
  • ios