Professor Recruitment Scam: ಕವಿವಿ ರಿಜಿಸ್ಟ್ರಾರ್‌ ಅರೆಸ್ಟ್‌ ಆಗಿ 5 ದಿನವಾದರೂ ಅಮಾನತಿಲ್ಲ..!

*  ಬಂಧನವಾದ 2 ದಿನದಲ್ಲಿ ಅಮಾನತು ಮಾಡಬೇಕು
*  ಅನುಮಾನ ಮೂಡಿಸಿದ ಸರ್ಕಾರದ ನಡೆ
*  ಸೌಮ್ಯ ಫೆಲೋಶಿಪ್‌ ತಡೆಗೆ ಕೇಂದ್ರಕ್ಕೆ ಪತ್ರ

Karnatak University Dharwad Registrar Not Yet Suspend After Arrest for 5 days grg

ಬೆಂಗಳೂರು(ಮೇ.03): ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ(Professor Recruitment Scam)  ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ(Karnatak University Dharwad) ಮೌಲ್ಯಮಾಪನ ಕುಲ ಸಚಿವ ಪ್ರೊ.ಎಚ್‌.ನಾಗರಾಜ್‌(Pro H Nagaraj) ಅವರನ್ನು ಪೊಲೀಸರು ಬಂಧಿಸಿ ಐದು ದಿನಗಳು ಕಳೆದರೂ ಸರ್ಕಾರದಿಂದ ಮಾತ್ರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದನ್ನು ಅಭ್ಯರ್ಥಿಗಳು ಗುಮಾನಿಯಿಂದ ನೋಡುವಂತಾಗಿದೆ.

ನಿಯಮಾನುಸಾರ ಯಾವುದೇ ಸರ್ಕಾರಿ ನೌಕರರು(Government Employees) 48 ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸ್‌(Police) ವಶದಲ್ಲಿದ್ದರೆ ತಕ್ಷಣ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು. ಆದರೆ, ಪ್ರೊ.ಎಚ್‌.ನಾಗರಾಜ್‌ ಅವರ ಬಂಧನವಾಗಿ(Arrest) ಐದು ದಿನಗಳಾದರೂ (ಏ.29ರಂದು ಬಂಧನವಾಗಿತ್ತು) ರಾಜ್ಯ ಉನ್ನತ ಶಿಕ್ಷಣ ಇಲಾಖೆಯಿಂದ ಸಂಬಂಧ ಯಾವುದೇ ಕ್ರಮಗಳಾಗಿಲ್ಲ.

Dharwad| ಕರ್ನಾಟಕ ವಿವಿ: ಸಹ-ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ..?

ಈ ಬಗ್ಗೆ ಧಾರವಾಡ ವಿವಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ನಾಗರಾಜ್‌ ಅವರನ್ನು ಮೌಲ್ಯಮಾಪನ ಕುಲಸಚಿವ ಸ್ಥಾನಕ್ಕೆ ಸರ್ಕಾರ ನೇಮಕ ಮಾಡಿರುವುದರಿಂದ ವಿವಿಯಿಂದ ಅವರನ್ನು ಅಮಾನತು ಮಾಡಲಾಗುವುದಿಲ್ಲ. ಸರ್ಕಾರವೇ ಮಾಡಬೇಕು. ಆದರೆ, ಸರ್ಕಾರದಿಂದ ಈ ಸಂಬಂಧ ಇದುವರೆಗೂ ಯಾವುದೇ ಆದೇಶ, ನಿರ್ದೇಶನ ನಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಪ್ರೊ.ನಾಗರಾಜ್‌ ಮೂಲತಃ ಮೈಸೂರು ವಿಶ್ವವಿದ್ಯಾಲಯದ(University Of Mysore) ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ. ಸರ್ಕಾರ ಅವರನ್ನು ನಿಯೋಜನೆ ಮೇಲೆ ಧಾರವಾಡ ವಿವಿ ಕುಲಸಚಿವ (ಮೌಲ್ಯಮಾಪನ) ಸ್ಥಾನಕ್ಕೆ ನೇಮಕ ಮಾಡಿತ್ತು. ಹಾಗಾಗಿ ಮೈಸೂರು ವಿವಿಯ ಅಧಿಕಾರಿಗಳೂ ಕೂಡ ನಾಗರಾಜ್‌ ಅವರನ್ನು ಸರ್ಕಾರ ಬೇರೆ ವಿವಿಯ ಅಧಿಕಾರಿ ಹುದ್ದೆಗೆ ನಿಯೋಜಿಸಿರುವುದರಿಂದ ವಿವಿಯಿಂದ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲ. ಸರ್ಕಾರವೇ ಕೈಗೊಳ್ಳಬೇಕಾಗುತ್ತದೆ ಎಂದು ಹೇಳುತ್ತಾರೆ.

ಇನ್ನು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರಿ ನೌಕರ/ಸಿಬ್ಬಂದಿ 48 ಗಂಟೆಗೂ ಹೆಚ್ಚು ಕಾಲ ಪೊಲೀಸ್‌ ವಶದಲ್ಲಿದ್ದರೆ ಅಂತಹವರು ಸ್ವಯಂ ಚಾಲಿತವಾಗಿ ಅಮಾನತು ಪ್ರಕ್ರಿಯೆಗೆ ಒಳಗಾಗುತ್ತಾರೆ. ಅಧಿಕೃತವಾಗಿ ಆದೇಶ ಆಗಬೇಕಷ್ಟೆ. ಅದು ಆಗಲಿದೆ ಎಂದು ಹೇಳುತ್ತಾರೆ.

Solar Scam in Karnatak University: ಕವಿವಿಯಲ್ಲಿ ಕೋಟಿ ಮೊತ್ತದ ಹಗರಣ

ಸೌಮ್ಯ ಫೆಲೋಶಿಪ್‌ ತಡೆಗೆ ಕೇಂದ್ರಕ್ಕೆ ಪತ್ರ

ಪ್ರಾಧ್ಯಾಪಕರ ಪರೀಕ್ಷಾ ಅಕ್ರಮದ ಮೊದಲ ಆರೋಪಿ ಮೈಸೂರು ವಿವಿ ಪಿಎಚ್‌ಡಿ ವಿದ್ಯಾರ್ಥಿನಿ ಸೌಮ್ಯ ಅವರಿಗೆ ಫೆಲೋಶಿಪ್‌ ತಡೆಹಿಡಿಯುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ವಿವಿಯು ಪತ್ರ ಬರೆದಿದೆ. ಈ ಸಂಬಂಧ ವಿವಿಯ ಉನ್ನತ ಅಧಿಕಾರಿಯೊಬ್ಬರನ್ನು ‘ಕನ್ನಡಪ್ರಭ’ಕ್ಕೆ ಖಚಿತ ಮಾಹಿತಿ ನೀಡಿದ್ದಾರೆ. ಸೌಮ್ಯ ಅವರಿಗೆ ಪ್ರಸ್ತುತ ಬಂಧನವಾಗಿರುವ ನಾಗರಾಜ್‌ ಅವರೇ ಪಿಎಚ್‌ಡಿ ಮಾರ್ಗದರ್ಶಕರಾಗಿದ್ದರು. ಫೆಲೋಶಿಪ್‌ ಕೋರಿ ಸೌಮ್ಯ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೌಮ್ಯ ವಿರುದ್ಧ ಪ್ರಾಧ್ಯಾಪಕ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಫೆಲೋಶಿಪ್‌ ತಡೆ ಹಿಡಿಯುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಉನ್ನತ ಅಧಿಕಾರಿ ಹೇಳುತ್ತಾರೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಮಾ.14ರಂದು ನಡೆದ ಭೌಗೋಳಿಕ ವಿಷಯದ ಪರೀಕ್ಷೆಯು ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದವು. ಸೌಮ್ಯ ಅವರ ಮೊಬೈಲ್‌ ವಾಟ್ಸ್‌ಅಪ್‌ನಿಂದ 18 ಪ್ರಶ್ನೆಗಳು ಸೋರಿಕೆಯಾಗಿರುವ ಬಗ್ಗೆ ಖಚಿತ ಮಾಹಿತಿ ಹಾಗೂ ಸಾಕ್ಷ್ಯಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೊಂದ ಅಭ್ಯರ್ಥಿಗಳು ದೂರು ಸಲ್ಲಿಸಿದ್ದರು. ಕೆಇಎ ಈ ದೂರನ್ನು ಪೊಲೀಸ್‌ ತನಿಖೆಗೆ ನೀಡಿತ್ತು. ತನಿಖೆ ನಡೆಸುತ್ತಿರುವ ಪೊಲೀಸರು ಸೌಮ್ಯ, ಪ್ರೊ. ನಾಗರಾಜ್‌ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
 

Latest Videos
Follow Us:
Download App:
  • android
  • ios