Dharwad| ಕರ್ನಾಟಕ ವಿವಿ: ಸಹ-ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ..?
* ಸಹ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬೆಳಕಿಗೆ
* ಅಕ್ರಮ ನೇಮಕಾತಿ ವಿರುದ್ಧ ಕೋರ್ಟ್ ಆದೇಶ; ಇಬ್ಬರು ಪ್ರಾಧ್ಯಾಪಕರ ತಲೆದಂಡ
* ಮತ್ತಷ್ಟು ಹೆಚ್ಚಿದ ತಳಮಳ, 40ಕ್ಕೂ ಹೆಚ್ಚು ಪ್ರಾಧ್ಯಾಪಕರಿಗೆ ಆತಂಕ
ಧಾರವಾಡ(ಅ.09): ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ(Karnatak University) ಧಾರವಾಡದ(Dharwad) ಕರ್ನಾಟಕ ವಿಶ್ವವಿದ್ಯಾಲಯ. ಒಂದಿಲ್ಲೊಂದು ವಿವಾದಗಳಿಂದೇ ಹೆಸರಿನಲ್ಲಿರೋ ವಿಶ್ವವಿದ್ಯಾಲಯದಲ್ಲಿ ಇದೀಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬೆಳಕಿಗೆ ಬಂದಿದೆ. ಅದರಲ್ಲೂ ಪ್ರಾಧ್ಯಾಪಕ ನೇಮಕಾತಿಯಲ್ಲಿಯೇ(Appointment) ಹಣ ಹೊಡೆದಿರೋದು ಪತ್ತೆಯಾಗಿದ್ದು, ಇಬ್ಬರ ಪ್ರಾಧ್ಯಾಪಕರ ತಲೆದಂಡವಾಗಿದೆ. ಇನ್ನು ಕೆಲವು ಪ್ರಾಧ್ಯಾಪಕರಿಗೆ ನಡುಕ ಹುಟ್ಟಿಸಿದೆ.
"
ಡಾ. ಶ್ರೀದೇವಿ ಪಿ.ಜಿ ಹಾಗೂ ಡಾ.ಎಂ. ಡೇವಿಡ್. ಓರ್ವರು ಇಂಗ್ಲೀಷ್(English) ವಿಭಾಗದ ಸಹ ಪ್ರಾಧ್ಯಾಪಕಿಯಾದ್ರೆ, ಇನ್ನೋರ್ವರು ಪ್ರಾಣಿಶಾಸ್ತ್ರ(Zoology) ವಿಭಾಗದ ಸಹ ಪ್ರಾಧ್ಯಾಪಕರು(Professors). ಇಬ್ಬರು ಕರ್ನಾಟಕ ವಿಶ್ವವಿದ್ಯಾಲಯದ 2000 ದಲ್ಲಿ ರಚಿಸಲ್ಪಟ್ಟ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಹೀಗಾಗಿ 2014 ರಿಂದ ಇಬ್ಬರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಮಾಡಿದ್ದಾರೆ. ಆದ್ರೆ, ಇವರ ಆಯ್ಕೆಯನ್ನು ಪ್ರಶ್ನಿಸಿ ಇವರ ಪ್ರತಿಸ್ಪರ್ಧಿಗಳು ನ್ಯಾಯಲಯದ ಮೇಟ್ಟಿಲೇರಿದ್ದು, ಇದೀಗ ಇಬ್ಬರನ್ನು ಕರ್ತವ್ಯದಿಂದ ಅನುರ್ಜಿತಗೊಳಿಸುವಂತೆ ನ್ಯಾಯಾಲಯ(Court) ಆದೇಶ ಹೊರಡಿಸಿದೆ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಆಫ್‌ಲೈನ್ ಘಟಿಕೋತ್ಸವಕ್ಕೆ ವಿದ್ಯಾರ್ಥಿಗಳ ಆಗ್ರಹ
2014 ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಶ್ರೀದೇವಿ, ಡೇವಿಡ್ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಪ್ರತಿ ತಿಂಗಳು ಯುಜಿಸಿ ಗೈಡ್ ಲೈನ್ ಅನುಸಾರ ಸಂಬಳ ಪಡೆದುಕೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಆಗಿನ ಕುಲಪತಿಯಾಗಿದ್ದ ಡಾ. ಎಚ್.ಬಿ ವಾಲೀಕಾರ್(Dr HB Walikar) ಅವಧಿಯಲ್ಲಿ ಈ ನೇಮಕಾತಿ ನಡೆದಿದ್ದು, ಇದರಲ್ಲಿ ಅಕ್ರಮ ನಡೆದಿರೋ ಬಗ್ಗೆ ಗುಮಾನಿ ಹರಡಿದೆ. ಇನ್ನು ನ್ಯಾಯಾಲಯದ ಆದೇಶದ ಬಗ್ಗೆ ಸೆಪ್ಟೆಂಬರ್ 11 ರಂದು ನಡೆದ ಸಭೆಯಲ್ಲಿ ಸಹ ಪ್ರಾಧ್ಯಾಪಕಿ ಶ್ರೀದೇವಿ ಅವರ ಪರವಾಗಿ ಕೆಲವು ಸಿಂಡಿಕೇಟ್ ಸದಸ್ಯರು ಚರ್ಚೆ ನಡೆಸಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಠರಾವು ಹೊರಡಿಸಿದ್ದಾರೆ. ಆದಾದ ಹತ್ತು ದಿನಗಳಲ್ಲಿ ಮತ್ತೆ ದೀಢಿರ್ ಸಭೆ ಕರೆದ ಸಿಂಡಿಕೇಟ್ ಸದಸ್ಯರು ಏಕಾಏಕಿ ಕರ್ತವ್ಯದಿಂದ ತೆಗೆದು ಹಾಕಲು ಆದೇಶಿಸಿದ್ದಾರೆ. ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಕೆ.ಬಿ ಗುಡಸಿ ಅವರನ್ನು ಕೇಳಿದ್ರೆ, ಸಹ ಪ್ರಾಧ್ಯಾಪಕರ ಆಯ್ಕೆಯ ಬಗ್ಗೆ ನ್ಯಾಯಾಲಯ ಆದೇಶವನ್ನು ಪಾಲಿಸುವ ಕೆಲಸ ಮಾಡುತ್ತಿದ್ದೇವೆ ಅಂತಾರೆ ಎಂದು ಕುರುಬ ಸಮಾಜದ ಮುಖಂಡ ಮಲಕಾರಿ ಅವರು ತಿಳಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರೋ ಈ ಬೆಳವಣಿಗೆ ಸದ್ಯ ಎಲ್ಲಾ ವಿಭಾಗದ ಪ್ರಾಧ್ಯಾಪಕರಲ್ಲೂ ಆತಂಕ ಹುಟ್ಟಿಸಿದೆ. ನೇರವಾಗಿ ಆಯ್ಕೆಯಾಗಿರೊ ಪ್ರಾಧ್ಯಾಪಕರ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ದೊಡ್ಡ ದೊಡ್ಡ ಹುದ್ದೆಯಲ್ಲಿರೋ ಪ್ರೊಫೆಸರ್‌ಗಳು ಆಯ್ಕೆ ಹಿಂದೆಯೂ ಅಕ್ರಮ ನಡೆದಿರೋ ವಾಸನೆ ಬರುತ್ತಿರೋದಂತು ಸತ್ಯ.