*  ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಎಸಿಬಿಗೆ ಆಗ್ರಹ*  ಸೋಲಾರ ಪ್ಯಾನಲ್‌ದಿಂದ 6 ವರ್ಷಗಳಲ್ಲಿ ಉತ್ಪಾದನೆಯಾದ ಒಂದೇ ಒಂದು ಯುನಿಟ್‌ ವಿದ್ಯುತ್‌*  ಮೇಲ್ನೋಟಕ್ಕೆ ಹಗರಣ ನಡೆದಿರುವುದು ಸಾಬೀತು  

ಧಾರವಾಡ(ಡಿ.05): ಕರ್ನಾಟಕ ವಿಶ್ವವಿದ್ಯಾಲಯದಲ್ಲಿ(Karnatak University) 2013-14ರಲ್ಲಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಚಾವಣಿ ಮೇಲೆ 1 ಕೋಟಿಗೂ ಹೆಚ್ಚು ಸಾರ್ವಜನಿಕ ಹಣ ವ್ಯಯಿಸಿ ಅಳವಡಿಸಲಾದ ಸೋಲಾರ ಪ್ಯಾನಲ್‌ ಹಿಂದೆ ವ್ಯಾಪಕ ಭ್ರಷ್ಟಾಚಾರ(Corruption) ನಡೆದಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮಾಜಿ ಸದಸ್ಯ ಜಯಂತ ಕೆ.ಎಸ್‌. ಆರೋಪಿಸಿದ್ದಾರೆ(Allegation).

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಭ್ರಷ್ಟಾಚಾರದ ಬಗ್ಗೆ ಕಳೆದ ಜನೇವರಿ ತಿಂಗಳಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿ ಕೇಳಲಾಗಿತ್ತು. ಈ ಸೋಲಾರ ಪ್ಯಾನಲ್‌(Solar Panel) ದಿಂದ 6 ವರ್ಷಗಳಲ್ಲಿ ಒಂದು ಯುನಿಟ್‌ ವಿದ್ಯುತ್‌(Electricity) ಕೂಡ ಉತ್ಪಾದನೆ ಆಗಿಲ್ಲ ಎಂದು ವಿಶ್ವವಿದ್ಯಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಅಂದಿನ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಲಪತಿ ಡಾ. ಕೆ.ಬಿ. ಗುಡಸಿ(Dr KB Gidasi) ಅವರನ್ನು ಒತ್ತಾಯಿಸಿದರೆ, ಈ ಹಿಂದಿನ ಅವಧಿಯಲ್ಲಿ ನಡೆದಿರುವ ಹಗರಣದ(Scam) ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ ಎಂದು ಕುಲಪತಿಗಳು ಮೌಖಿಕವಾಗಿ ಉತ್ತರಿಸುತ್ತಾರೆ. ಒಂದು ಕೋಟಿಗೂ ಅಧಿಕ ಸಾರ್ವಜನಿಕ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಈ ಹಗರಣದ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ತಪ್ಪಿತಸ್ಥರ ವಿರುದ್ಧ ಕುಲಪತಿಗಳು(Chancellor) ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಸಂಶಯಕ್ಕೆ ಕಾರಣವಾಗಿದೆ.

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಸೋಲಾರ್‌ ಹಗರಣದ(Solar Scam) ಕುರಿತು ಕಳೆದ ನವೆಂಬರ್‌ 17 ರಂದು ಕೈಗೊಂಡ ಕ್ರಮದ ಬಗ್ಗೆ ಕುಲಪತಿಗಳಿಗೆ ಮತ್ತೊಮ್ಮೆ ಪತ್ರ ಬರೆದು ವಿಚಾರಿಸಿದ ನಂತರ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ(Anti Corruption Bureau) ಪ್ರಕರಣ ದಾಖಲಿಸಿರುವ ಮಾಹಿತಿ ನೀಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು(Students) ಗೊತ್ತಿಲ್ಲದೇ ಮಾಡುವ ತಪ್ಪುಗಳಿಗೆ ಬೇಕಾ ಬಿಟ್ಟಿದಂಡ ವಿಧಿಸಿ ವಸೂಲಿ ಮಾಡುವ ಅಧಿಕಾರಿಗಳು ಕಣ್ಣೆದುರಿಗೆ ಕೋಟಿ ರೂಪಾಯಿಗಳ ಹಗರಣ ನಡೆದಿರುವುದು ಕಾಣುತ್ತಿದ್ದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸ.

ಮೇಲ್ನೋಟಕ್ಕೆ ಹಗರಣ ನಡೆದಿರುವುದು ಸಾಬೀತಾಗುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಕೇವಲ ದೂರು ದಾಖಲು ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ವಿಚಾರಣೆಗೆ(Investigation) ಅಗತ್ಯಇರುವ ದಾಖಲೆಗಳನ್ನು ಕೂಡಲೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ACB) ನೀಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಜಯಂತ ಅವರು ಆಗ್ರಹಿಸಿದ್ದಾರೆ.

ಕರ್ನಾಟಕ ವಿವಿ: ಸಹ-ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ..?

ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ಧಾರವಾಡದ(Dharwad) ಕರ್ನಾಟಕ ವಿಶ್ವವಿದ್ಯಾಲಯ. ಒಂದಿಲ್ಲೊಂದು ವಿವಾದಗಳಿಂದೇ ಹೆಸರಿನಲ್ಲಿರೋ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬೆಳಕಿಗೆ ಬಂದಿತ್ತು. ಅದರಲ್ಲೂ ಪ್ರಾಧ್ಯಾಪಕ ನೇಮಕಾತಿಯಲ್ಲಿಯೇ(Appointment) ಹಣ ಹೊಡೆದಿರೋದು ಪತ್ತೆಯಾಗಿದ್ದು, ಇಬ್ಬರ ಪ್ರಾಧ್ಯಾಪಕರ ತಲೆದಂಡವಾಗಿತ್ತು. 

ಧಾರವಾಡ: ಕರ್ನಾಟಕ ವಿವಿ ಪ್ರೊಫೆಸರ್‌ ಮೊಬೈಲ್‌ ಹ್ಯಾಕ್‌, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

ಡಾ. ಶ್ರೀದೇವಿ ಪಿ.ಜಿ ಹಾಗೂ ಡಾ.ಎಂ. ಡೇವಿಡ್‌. ಓರ್ವರು ಇಂಗ್ಲೀಷ್(English) ವಿಭಾಗದ ಸಹ ಪ್ರಾಧ್ಯಾಪಕಿಯಾದ್ರೆ, ಇನ್ನೋರ್ವರು ಪ್ರಾಣಿಶಾಸ್ತ್ರ(Zoology) ವಿಭಾಗದ ಸಹ ಪ್ರಾಧ್ಯಾಪಕರು(Professors). ಇಬ್ಬರು ಕರ್ನಾಟಕ ವಿಶ್ವವಿದ್ಯಾಲಯದ 2000ದಲ್ಲಿ ರಚಿಸಲ್ಪಟ್ಟ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಹೀಗಾಗಿ ‌2014 ರಿಂದ ಇಬ್ಬರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಮಾಡಿದ್ದಾರೆ. ಆದ್ರೆ, ಇವರ ಆಯ್ಕೆಯನ್ನು ಪ್ರಶ್ನಿಸಿ ಇವರ ಪ್ರತಿಸ್ಪರ್ಧಿಗಳು ನ್ಯಾಯಲಯದ ಮೇಟ್ಟಿಲೇರಿದ್ದು, ಇದೀಗ ಇಬ್ಬರನ್ನು ಕರ್ತವ್ಯದಿಂದ ಅನುರ್ಜಿತಗೊಳಿಸುವಂತೆ ನ್ಯಾಯಾಲಯ(Court) ಆದೇಶ ಹೊರಡಿಸಿದೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ‌ ನಡೆದಿರೋ ಈ ಬೆಳವಣಿಗೆ ಸದ್ಯ ಎಲ್ಲಾ ವಿಭಾಗದ ಪ್ರಾಧ್ಯಾಪಕರಲ್ಲೂ ಆತಂಕ‌ ಹುಟ್ಟಿಸಿದೆ. ನೇರವಾಗಿ ಆಯ್ಕೆಯಾಗಿರೊ ಪ್ರಾಧ್ಯಾಪಕರ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ದೊಡ್ಡ ದೊಡ್ಡ ಹುದ್ದೆಯಲ್ಲಿರೋ ಪ್ರೊಫೆಸರ್‌ಗಳು ಆಯ್ಕೆ ‌ಹಿಂದೆಯೂ ಅಕ್ರಮ ನಡೆದಿರೋ ವಾಸನೆ ಬರುತ್ತಿರೋದಂತು ಸತ್ಯ.