ಚಲನಚಿತ್ರಗಳಲ್ಲಿ ಅಮಾಯಕರ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕುವುದನ್ನು ನೋಡಿದ್ದೇವು. ಈಗ ರಿಯಲ್‌ನಲ್ಲೇ ನೋಡುವಂತಾಗಿದೆ. ಇನ್ನು ಮುಂದೆ ಸುಳ್ಳು ಕೇಸ್ ದಾಖಲಾದರೆ ಇನ್‌ಸ್ಪೆಕ್ಟರ್‌ಗಳು ಮಾತ್ರವಲ್ಲ ಎಸಿಪಿ ಹಾಗೂ ಉನ್ನತ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಜೂ.6) ಚಲನಚಿತ್ರಗಳಲ್ಲಿ ಅಮಾಯಕರ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕುವುದನ್ನು ನೋಡಿದ್ದೇವು. ಈಗ ರಿಯಲ್‌ನಲ್ಲೇ ನೋಡುವಂತಾಗಿದೆ. ಇನ್ನು ಮುಂದೆ ಸುಳ್ಳು ಕೇಸ್ ದಾಖಲಾದರೆ ಇನ್‌ಸ್ಪೆಕ್ಟರ್‌ಗಳು ಮಾತ್ರವಲ್ಲ ಎಸಿಪಿ ಹಾಗೂ ಉನ್ನತ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪಶ್ಚಿಮ ವಿಭಾಗದ ಉನ್ನತಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಆ ವಿಭಾಗದ ಇನ್‌ಸ್ಪೆಕ್ಟರ್‌ಗಳ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದಾಖಲಾಗಿದ್ದ ಸುಳ್ಳು ದರೋಡೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಚಿಕ್ಕಮಗಳೂರಲ್ಲಿ ಹಾಲಿ- ಮಾಜಿ ಶಾಸಕರ ಫೈಟ್: ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲು
ಠಾಣೆಗಳಿಗೆ ನ್ಯಾಯ ಅರಸಿ ಬರುವ ನಾಗರಿಕರ ನೋವಿಗೆ ಸ್ಪಂದಿಸಬೇಕು. ಶ್ರೀಮಂತ ಹಾಗೂ ಬಡವ ಎಂಬ ಬೇಧವಿಲ್ಲದೆ ಸರ್ವರನ್ನು ಪೊಲೀಸರು ಸಮನವಾಗಿ ಕಾಣಬೇಕು. ಚಲನಚಿತ್ರಗಳಲ್ಲಿ ಅಮಾಯಕರ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕುವುದನ್ನು ನೋಡಿದ್ದೇವು. ಆದರೀಗ ರಿಯಲ್‌ನಲ್ಲಿ ಸಹ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದನ್ನು ಕಾಣುವಂತಾಗಿದೆ. ಈ ರೀತಿಯ ಅನ್ಯಾಯವೆಸಗಿದರೆ ಸಹಿಸುವುದಿಲ್ಲ. ಅಪರಾಧ ಪ್ರಕರಣ ದಾಖಲಾತಿ ಪ್ರಕ್ರಿಯೆಯಲ್ಲಿ ಲೋಪವಾದರೆ ಇನ್‌ಸ್ಪೆಕ್ಟರ್‌ಗಳು ಮಾತ್ರವಲ್ಲ ಎಸಿಪಿ ಹಾಗೂ ಉನ್ನತಾಧಿಕಾರಿಗಳೂ ಹೊಣೆಗಾರರಾಗಬೇಕಾಗುತ್ತದೆ ಎಂದು ಆಯುಕ್ತರು ಕಟು ಪದಗಳಲ್ಲಿ ತಾಕೀತು ಮಾಡಿರುವುದಾಗಿ ಮೂಲಗಳು ಹೇಳಿವೆ.
ತಮ್ಮ ಠಾಣಾ ವ್ಯಾಪ್ತಿಯಲ್ಲಿ ರೌಡಿಸಂ, ಜೂಜಾಟ ಹಾಗೂ ಡ್ರಗ್‌್ಸ ಸೇರಿದಂತೆ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಇನ್‌ಸ್ಪೆಕ್ಟರ್‌ಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಎರಡು ಗಂಟೆಗಳಿಗೆ ಅಧಿಕ ಹೊತ್ತು ನಡೆದ ಸಭೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ಹಾಗೂ ಸಮಸ್ಯೆಗಳ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಇನ್‌ಸ್ಪೆಕ್ಟರ್‌ಗಳಿಂದ ಆಯುಕ್ತರು ಮಾಹಿತಿ ಪಡೆದಿದ್ದಾರೆ. ಈ ಸಭೆಯಲ್ಲಿ ಹೆಚ್ಚುವರಿ ಆಯುಕ್ತ (ಪಶ್ಚಿಮ) ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹಾಜರಾಗಿದ್ದರು.
ನೊಂದವರ ಕಣ್ಣೀರು ಒರೆಸೋದೇ ನನ್ನ ವಿಷನ್: ಬೆಂಗ್ಳೂರು ನೂತನ ಪೊಲೀಸ್ ಆಯುಕ್ತ ದಯಾನಂದ್
ಠಾಣೆಗಳಲ್ಲಿ ಜನ ಸ್ನೇಹಿ ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಸಿಪಿಗಳು ಆಗಾಗ್ಗೆ ಠಾಣೆಗಳಿಗೆ ತೆರಳಿ ಜನರನ್ನು ಭೇಟಿಯಾಗಬೇಕು. ಠಾಣಾ ಮಟ್ಟದಲ್ಲಿ ಜನರ ಸಮಸ್ಯೆಗಳು ಬಗೆಹರಿಯಬೇಕು. ಹಿರಿಯ ಅಧಿಕಾರಿಗಳ ಬಳಿಗೆ ಜನರ ಅಹವಾಲು ಹೊತ್ತು ಬರಬಾರದು.
-ಬಿ.ದಯಾನಂದ್, ಪೊಲೀಸ್ ಆಯುಕ್ತ.
