ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ.ಸುರೇಶ್ ಹೆಸರಿನಲ್ಲಿ ಬಹು ಕೋಟಿ ವಂಚನೆ ಪ್ರಕರಣ ಸಂಬಂಧ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ ಸಿಐಡಿ ಧ್ವನಿ ಪರೀಕ್ಷೆಗೆ ಒಳಪಡಿಸಿದೆ.
- Home
- News
- State
- Karnataka News Live: ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ - ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ
Karnataka News Live: ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ - ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ

ಕೊಪ್ಪಳ: ಒಬ್ಬ ವಿದ್ಯಾರ್ಥಿನಿಯ ಪರೀಕ್ಷೆಗಾಗಿ ಹತ್ತು ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಸಿದ್ಧವಾಗಿದ್ದರು, ಆದರೆ ವಿದ್ಯಾರ್ಥಿನಿ ಪರೀಕ್ಷೆಗೆ ಬರಲೇ ಇಲ್ಲ. ಇದರಿಂದ ಸಿಬ್ಬಂದಿ ಸಮಯ ಮುಗಿಯುವವರೆಗೂ ಕಾದು ಪರೀಕ್ಷಾ ಕೇಂದ್ರ ಬಂದ್ ಮಾಡಿಕೊಂಡು, ವಾಪಸ್ಸಾದರು. ಹಿರೇಸಿಂದೋಗಿ ಮೊರಾರ್ಜಿ ವಸತಿ ಶಾಲೆಯ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಲಿಯಾ ಬುಧವಾರ ಉರ್ದು ವಿಷಯ ಪರೀಕ್ಷೆ ಬರೆಯಬೇಕಾಗಿತ್ತು.
ಓರ್ವ ವಿದ್ಯಾರ್ಥಿನಿಯ ಪರೀಕ್ಷೆ ಬರೆಯಲು ಹತ್ತು ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಪರೀಕ್ಷಾ ಸಮಯ ಹತ್ತು ಗಂಟೆಗೆ ಇದ್ದರೂ ವಿದ್ಯಾರ್ಥಿನಿ ಹತ್ತುವರೆಯಾದರೂ ಬರಲೇ ಇಲ್ಲ. ನಿಯಮಾನುಸಾರ ಅರ್ಧಗಂಟೆ ಮೀರಿದ ಮೇಲೆ ಪರೀಕ್ಷೆಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹತ್ತುವರೆ ಗಂಟೆಯವರೆಗೂ ಕಾಯ್ದು ಪರೀಕ್ಷಾ ಕೇಂದ್ರ ಬಂದ್ ಮಾಡಲಾಯಿತು.
Karnataka News Live 5 March 2026ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ - ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ
Karnataka News Live 5 March 2026ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಸರ್ಕಾರಕ್ಕೆ ಚಾಟಿ ಬೀಸುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಹೇಳಿದ್ದಾರೆ.
Karnataka News Live 5 March 2026ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ಭರ್ತಿ ಐತಿಹಾಸಿಕ ನಿರ್ಧಾರ - ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ 56 ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
Karnataka News Live 5 March 2026ಕರ್ನಾಟಕದ 8 ಸರ್ಕಾರಿ ಭ್ರಷ್ಟ ಅಧಿಕಾರಿಗಳ 42 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 8 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 42 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಸ್ಥಿರ ಮತ್ತು ಚರ ಆಸ್ತಿಗಳು ಪತ್ತೆಯಾಗಿದೆ.
Karnataka News Live 5 March 2026ಮಸಾಲೆ ಪಡ್ಡುಗೆ ಒಂದು ವಸ್ತು ಸೇರಿಸಿದ್ರೆ ಆಗುತ್ತೆ ಸೂಪರ್ ಟೇಸ್ಟಿ; ಮಕ್ಕಳ ಜೊತೆ ಇಡೀ ಮನೆಯವರು ಖುಷ್!
ಸಾಮಾನ್ಯ ಪಡ್ಡು ಹಿಟ್ಟಿಗೆ ಒಂದು ವಸ್ತು ಸೇರಿಸುವುದರಿಂದ ಅದರ ರುಚಿ ಹೆಚ್ಚುತ್ತದೆ. ಹಾಗೆಯೇ ಈರುಳ್ಳಿಯನ್ನು ಹುರಿದು ಹಿಟ್ಟಿಗೆ ಸೇರಿಸಿದರೆ ಪಡ್ಡು ಹೊರಗಿನಿಂದ ಗರಿಗರಿಯಾಗಿ ಮತ್ತು ಒಳಗಿನಿಂದ ಮೃದುವಾಗಿ ಬರುತ್ತದೆ, ಇದು ಉತ್ತರ ಕರ್ನಾಟಕದ ವಿಶೇಷ ವಿಧಾನವಾಗಿದೆ.
Karnataka News Live 5 March 2026ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೀತಿದೆಯಾ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ!
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದೆ. ಗಂಡನಿಗೆ ಕಿಡ್ನಿ ದಾನ ಮಾಡಿದ ಪತ್ನಿಗೆ ಈ ದುರಂತದ ವಿಷಯ ಇನ್ನೂ ತಿಳಿದಿಲ್ಲ.
Karnataka News Live 5 March 2026Karnataka Budget 2026–27 - ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಇದೇ ಮೊದಲ ಬಾರಿಗೆ ರಾಜ್ಯದ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾರ್ಚ್ 6 ರಿಂದ 230 ಬಸ್ ನಿಲ್ದಾಣಗಳಲ್ಲಿನ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಿದೆ.
Karnataka News Live 5 March 2026ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್? ನಟ ದರ್ಶಿತ್ ಗೌಡ ಫೋಟೋ ಇಲ್ಲಿವೆ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಸಮರ್ಥ್ ಪಾತ್ರಧಾರಿ ನಟ ದರ್ಶಿತ್ ಗೌಡ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇದು ನಿಜವಾದ ಮದುವೆಯೇ ಅಥವಾ ಕೇವಲ ಶೂಟಿಂಗಿನ ಭಾಗವೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.
Karnataka News Live 5 March 2026ಕೊಲ್ಲಿ ಸಂಘರ್ಷ - ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ!
ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ. ರಂಜಾನ್ ಹಿನ್ನೆಲೆಯಲ್ಲಿ ಸಾಕಷ್ಟು ದಾಸ್ತಾನು ಇರುವುದರಿಂದ ದರ ಸ್ಥಿರವಾಗಿದ್ದರೂ, ಯುದ್ಧ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮದು ಸ್ಥಗಿತಗೊಂಡು ಬೆಲೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
Karnataka News Live 5 March 2026ಬಿಜೆಪಿ ಅನುದಾನವನ್ನು ತಾನು ನೀಡಿದ್ದು ಎಂದು ದಾರಿತಪ್ಪಿಸುವ ಕಾಂಗ್ರೆಸ್ - ವೇದವ್ಯಾಸ್ ಕಾಮತ್ ಆರೋಪ
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
Karnataka News Live 5 March 2026ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ - ಡಿ.ಕೆ.ಶಿವಕುಮಾರ್
ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
Karnataka News Live 5 March 2026ಸಿಎಂ, ಶಾಸಕರ ಸಂಬಳ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ, ಆದ್ರೆ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನಕ್ಕೆ ಯಾಕೆ ವಿಳಂಬ?
2022ರಲ್ಲಿ ಪರಿಷ್ಕರಿಸಬೇಕಿದ್ದ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಇನ್ನೂ ಜಾರಿಗೆ ತರದ ಕಾರಣ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸಿನಂತೆ ವೇತನವನ್ನು ತಕ್ಷಣ ಪರಿಷ್ಕರಿಸಬೇಕು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
Karnataka News Live 5 March 2026Viral Video - ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ!
ನಟಿ ಕಾವ್ಯಾ ಗೌಡರ ಕೌಟುಂಬಿಕ ಆಸ್ತಿ ಕಲಹವು ಇದೀಗ ಬೀದಿ ರಂಪಾಟವಾಗಿ ಮಾರ್ಪಟ್ಟಿದೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಕಾವ್ಯಾ, ಇದೀಗ ತಾವೇ ಮಾವನಿಗೆ ತೊಡೆ ತಟ್ಟಿ ದರ್ಪ ತೋರಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
Karnataka News Live 5 March 2026ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣವಾದ ಪಬ್ ಕಟ್ಟಡ ಸಂಬಂಧ ಭಾರೀ ಭ್ರಷ್ಟಾಚಾರ ಹಗರಣ, 5 ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ
ಬೆಂಗಳೂರಿನ ಬೃಹತ್ ಬಾರ್ ಮತ್ತು ರೆಸ್ಟೋರೆಂಟ್ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ನಕ್ಷೆ ಮಂಜೂರಾತಿಯಿಂದ ಹಿಡಿದು ಮದ್ಯ ಪರವಾನಗಿ ನೀಡುವವರೆಗೆ ಹಲವು ಇಲಾಖೆಗಳ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ.
Karnataka News Live 5 March 2026ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ, ಅತ್ತು ನಾಟಕ ಮಾಡಲ್ಲ - ಡಿ.ಕೆ.ಸುರೇಶ್ ವಾಗ್ದಾಳಿ
ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ, ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Karnataka News Live 5 March 2026ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ
ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಹತರಾದ ಇರಾನ್ ನಾಯಕ ಅಯತೊಲ್ಲಾ ಖಮೇನಿ ಸಾವಿಗೆ ಭಾರತ ಸರ್ಕಾರವು 5 ದಿನಗಳ ನಂತರ ಸಂತಾಪ ಸೂಚಿಸಿದೆ. ಭಾರತ ಸರ್ಕಾರ ಸಂತಾಪ ಸೂಚಿಸದ ಬಗ್ಗೆ ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದವು.
Karnataka News Live 5 March 2026Celebrities Home - ದುಬೈನಲ್ಲಿ ಸ್ವಂತ ಮನೆ ಹೊಂದಿರುವ 8 ಭಾರತೀಯ ಸೆಲೆಬ್ರಿಟಿಗಳಿವರು!
Celebrities Home: ಸಲ್ಮಾನ್ ಖಾನ್‌ನಿಂದ ಶಾರುಖ್ ಖಾನ್‌ವರೆಗೆ, ದುಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ದುಬೈನ ಐಷಾರಾಮಿ ಜೀವನಶೈಲಿ, ತೆರಿಗೆ ವಿನಾಯಿತಿಗಳು ಭಾರತದ ಸ್ಟಾರ್‌ಗಳನ್ನು ಆಕರ್ಷಿಸುತ್ತಿವೆ. ಬೀಚ್‌ಫ್ರಂಟ್ ವಿಲ್ಲಾಗಳಿಂದ ಹಿಡಿದು ಗಗನಚುಂಬಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.
Karnataka News Live 5 March 2026ಮೀಸಲಾತಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು - ಸಂಸದ ಕಾರಜೋಳ ಆರೋಪ
ಮೀಸಲಾತಿ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕಾನೂನಾತ್ಮಕ ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದೆ.
Karnataka News Live 5 March 2026ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ - ಆದ್ರೆ ಕ್ಲೈಮ್ಯಾಕ್ಸ್ ಮಾತ್ರ ಸಕತ್ ಇಂಟರೆಸ್ಟಿಂಗ್!
ನಟ ಪುನೀತ್ ರಾಜ್‌ಕುಮಾರ್ ಅವರು ಸೃಜನ್ ಲೋಕೇಶ್ ಅವರೊಂದಿಗಿನ ಸಂದರ್ಶನದಲ್ಲಿ ಚಿತ್ರಾನ್ನ ಮಾಡುವ ವಿಧಾನವನ್ನು ತಮಾಷೆಯಾಗಿ ವಿವರಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಪ್ಪು, ಅಡುಗೆಗೆ ಬೇಕಾದ ಪ್ರಮುಖ ಸಾಮಗ್ರಿ ಮರೆತು ಹೇಳಿದ್ದು, ತಮಾಷೆಯ ಕ್ಷಣವನ್ನು ನೆನಪಿಸುತ್ತದೆ.