Asianet Suvarna News Asianet Suvarna News

ರೈತರಿಂದ ನ.26ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌ : ಎಲ್ಲೆಲ್ಲಿ..?

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಘೋಷಣೆ
  • ಮತ್ತೆರಡು ಕಾನೂನು ಹಿಂಪಡೆಯಲು ನ.26 ರಂದು ರಾಜ್ಯಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಬಂದ್‌ 
farmers calls National highway Bandh  In November 26
Author
Bengaluru, First Published Nov 21, 2021, 7:50 AM IST

 ಬೆಂಗಳೂರು (ನ.21): ಪ್ರಧಾನ ಮಂತ್ರಿ ನರೇಂದ್ರ ಮೋದಿ (prime Minister narendra modi) ಅವರು ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು (New farm law) ಹಿಂಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಹಾಗೂ ವಿದ್ಯುತ್‌ ಖಾಸಗೀಕರಣ (Electricity Privatisation) ಉತ್ತೇಜಿಸುವ ವಿದ್ಯುತ್‌ ಮಸೂದೆ -2020 ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನ.26 ರಂದು ರಾಜ್ಯಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಬಂದ್‌ (National Highway bandh) ಮಾಡುವುದಾಗಿ ‘ಸಂಯುಕ್ತ ಹೋರಾಟ-ಕರ್ನಾಟಕ’ ಒಕ್ಕೂಟ ಎಚ್ಚರಿಕೆ ನೀಡಿದೆ.

ರೈತರು (farmers), ಕಾರ್ಮಿಕರು ಹಾಗೂ ಜನ ಸಾಮಾನ್ಯರು ಒಂದು ವರ್ಷ ಸತತವಾಗಿ ನಡೆಸಿದ ಹೋರಾಟದ ಫಲವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ಕಾಯ್ದೆ ವಾಪಸು ಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ, ಈ ವೇಳೆ ಕೊರೋನಾ (Corona) ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಮಿಕರನ್ನು (labours) ಶೋಷಿಸುವ ಕಾರ್ಮಿಕ ತಿದ್ದು ಪಡಿ ಕಾನೂನು, ವಿದ್ಯುತ್‌ ಖಾಸಗೀಕರಣ ಬೆಂಬಲಿಸುವ ವಿದ್ಯುತ್‌ ಮಸೂದೆ- 2020 ಕಾಯ್ದೆ ಹಿಂಪಡೆದಿಲ್ಲ. ಕನಿಷ್ಠ ಬೆಂಬಲ ಕಾನೂನು ಜಾರಿ ಮಾಡುವುದಾಗಿ ಭರವಸೆ ನೀಡಿಲ್ಲ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ (Price rise) ನಿಯಂತ್ರಿಸಬೇಕು, ವಿವಾದಿತ ಕಾಯ್ದೆ ಹಿಂಪಡೆಯಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ತಡೆ ಹಾಕಬೇಕು ಎಂದು ಒತ್ತಾಯಿಸಿ ಹೆದ್ದಾರಿ ಬಂದ್‌ (Highway Bandh) ಮಾಡಲಾಗುವುದು. ಈ ವೇಳೆ ರಾಜ್ಯ ಸರ್ಕಾರಕ್ಕೆ ಕೂಡಲೇ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ (APMC) ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದೂ ಆಗ್ರಹಿಸಲಾಗುವುದು ಎಂದು ಸಂಯುಕ್ತ ಹೋರಾಟ - ಕರ್ನಾಟಕದ (karnataka) ಪದಾಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಶನಿವಾರ ಒಕ್ಕೂಟದ ಸಂಯೋಜಕರಾದ ಜೆ.ಸಿ. ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್‌, ಬಡಗಲಪುರ ನಾಗೇಂದ್ರ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನ.26 ರಂದು ಶುಕ್ರವಾರ ರೈತರು, ಕಾರ್ಮಿಕರು ಕುರಿ, ಧನಕರುಗಳು, ಟ್ರಾಕ್ಟರ್‌ಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಜೆ.ಸಿ.ಬಯ್ಯಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ (Govt of India) ಕೂಡಲೇ ನಾಲ್ಕು ಕಾರ್ಮಿಕ ತಿದ್ದುಪಡಿ ಕಾನೂನು ರದ್ದುಪಡಿಸಬೇಕು. ಅಗತ್ಯವ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ಬೆಳೆ ನಷ್ಟಪರಿಹಾರ ನೀಡಬೇಕು. ರೈತರು ಪ್ರತಿ ಲೀಟರ್‌ ಹಾಲು (Milk) ಉತ್ಪಾದಿಸಲು 35 ರು. ವೆಚ್ಚವಾಗುತ್ತಿದ್ದು, ಕೇವಲ 23 ರು. ಮಾತ್ರ ರೈತರಿಗೆ ನೀಡಲಾಗುತ್ತಿದೆ. ಹೀಗಾಗಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಬಡಗಲ ಪುರ ನಾಗೇಂದ್ರ ಮಾತನಾಡಿ, ಮೂರು ಕಾಯಿದೆ ಹಿಂಪಡೆಯುವುದಾಗಿ ಘೋಷಿಸಿರುವುದು ಕಾರ್ಪೊರೇಟ್‌ ಕಂಪೆನಿಗಳ ವಿರುದ್ಧ ಐಕ್ಯ ರೈತ ಚಳುವಳಿಗೆ ಸಿಕ್ಕಿದ ವಿಜಯ. ಇದರ ಜತೆಗೆ ರೈತರ ಹಿತಕ್ಕಾಗಿ ಇನ್ನಷ್ಟುಕೆಲಸಗಳು ಆಗಬೇಕು. ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಹಲವು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಬೆಂಬಲ ಬೆಲೆ, ನಷ್ಟಪರಿಹಾರ, ಅಗತ್ಯ ವಸ್ತುಗಳ ಬೆಲೆ ಇಳಿಕೆಯಂತಹ ಜನಸಾಮಾನ್ಯರ ಸಂಕಷ್ಟದ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ. ಇದೇ ವೇಳೆ ಈವರೆಗೆ ಬೆಂಬಲಿಸಿದವರಿಗೆ ಅಭಿನಂದನೆಯನ್ನೂ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಎಲ್ಲೆಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌?

ರಾಷ್ಟ್ರೀಯ ಹೆದ್ದಾರಿ ಹಾಗೂ ಹೆದ್ದಾರಿ ಬಂದ್‌ ಸ್ಥಳ

ಬೆಂಗಳೂರು -ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ - ಚದಲಪುರ ಕ್ರಾಸ್‌, ಚಿಕ್ಕಬಳ್ಳಾಪುರ

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ - ಶ್ರೀರಂಗಪಟ್ಟಣ

ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ - ತುಮಕೂರು ಟೋಲ್‌ ಗೇಟ್‌

ರಾಷ್ಟ್ರೀಯ ಹೆದ್ದಾರಿ 13 - ಹೊಸಪೇಟೆ ಜಂಕ್ಷನ್‌

Follow Us:
Download App:
  • android
  • ios