Asianet Suvarna News Asianet Suvarna News

Electricity | ಬಿಪಿಎಲ್‌ ಕುಟುಂಬಕ್ಕೆ ಉಚಿತ ‘ಬೆಳಕು’ ವಿದ್ಯುತ್‌ ಸಂಪರ್ಕ

  • ರಾಜ್ಯ ಸರ್ಕಾರ ನೂತನವಾಗಿ ಬಿಡುಗಡೆ ಮಾಡಿರುವ ‘ಬೆಳಕು’ ಯೋಜನೆಯಡಿ ವಿದ್ಯುತ್‌ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ
  •  ಇಲಾಖೆ ವತಿಯಿಂದ  ಉಚಿತವಾಗಿ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದು ಬೀರೂರು ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದೀಶ್‌ ಹೇಳಿಕೆ
Free Electricity Service TO BPL families in Birur snr
Author
Bengaluru, First Published Nov 20, 2021, 10:58 AM IST

 ಬೀರೂರು (ನ.20):  ರಾಜ್ಯ ಸರ್ಕಾರ (karnataka Govt) ನೂತನವಾಗಿ ಬಿಡುಗಡೆ ಮಾಡಿರುವ ‘ಬೆಳಕು’ ಯೋಜನೆಯಡಿ (Belaku Project) ವಿದ್ಯುತ್‌ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ (Families) ಉಚಿತವಾಗಿ ವಿದ್ಯುತ್‌ ಸಂಪರ್ಕವನ್ನು (Free Electricity Service) ಇಲಾಖೆ ವತಿಯಿಂದ ನೀಡಲಾಗುವುದು ಎಂದು ಬೀರೂರು ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದೀಶ್‌ ಹೇಳಿದರು. ಪಟ್ಟಣದ ಮೆಸ್ಕಾಂ (MESCOM) ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಪಿಎಲ್‌ ಕಾರ್ಡ್‌ (BPL Card) ಹೊಂದಿದ ನಾಗರಿಕರು ಈ ಯೋಜನೆ ಸದುಪಯೋಗ ಪಡೆದುಕೊಂಡಲ್ಲಿ ಇಲಾಖೆ ನೇರವಾಗಿ ನಿಮ್ಮ ಮನೆಗೆ ವಿದ್ಯುತ್‌ ಸಂಪರ್ಕವನ್ನು ಉಚಿತವಾಗಿ ನೀಡಲಿದೆ. ಆದರೆ ಬರುವ ಮಾಸಿಕ ಬಿಲ್‌ (Monthly Bill) ಮೊತ್ತವನ್ನು ಮನೆ ಮಾಲೀಕರು ಪಾವತಿಸಬೇಕು ಎಂದರು.

ಬೀರೂರು (Biroor) ವ್ಯಾಪ್ತಿಯಲ್ಲಿ ಈಗಾಗಲೇ ನಿರಂತರ ಜ್ಯೋತಿ ವಿದ್ಯುತ್‌ ಸಂಪರ್ಕ ಜಾರಿಯಾಗಿದೆ. ಇತ್ತೀಚೆಗೆ ಜೋಡಿ ತಿಮ್ಮಾಪುರ, ದೊಡ್ಡಘಟ್ಟ, ಭಾಗದ ಕಾಮಗಾರಿ ಮುಗಿದು ಕಳೆದ 15 ದಿನಗಳ ಹಿಂದಷ್ಟೆ ನಿರಂತರ ಜ್ಯೋತಿ ವಿದ್ಯುತ್‌ ನೀಡಲಾಗುತ್ತಿದೆ. ಆದರೆ ಬಳ್ಳಿಗನೂರು ವ್ಯಾಪ್ತಿಗೆ ಕೆಲವು ಅಡಚಡಣೆಗಳಿದ್ದು, ಈ ಮಳೆ ಮುಗಿದು ರೈತರ (Farmers) ಕೊಯ್ಲು ಮುಗಿದ ಬಳಿಗ ಸಂಪೂರ್ಣವಾಗಿ ಬೀರೂರು ವ್ಯಾಪ್ತಿಗೆ ನಿತಂತರ ಜ್ಯೋತಿ ವಿದ್ಯುತ್‌ ವಿತರಣೆ ಸಮರ್ಪಕವಾಗಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಜೆಡಿಎಸ್‌ (JDs) ಬೀರೂರು ಘಟಕದ ಅಧ್ಯಕ್ಷ ಬಾವಿಮನೆ ಮಧು ಮಾತನಾಡಿ, ವಾರ್ಡ್‌ ನಂ.21ರ ಹೌಸಿಂಗ್‌ ಬೋರ್ಡ್‌ (Housing  Board) ಬಡಾವಣೆಯಲ್ಲಿ ಟಿ.ಸಿ. ಅನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಅಳವಡಿಸಲಾಗಿದ್ದು, ಇದು ಇಲ್ಲಿ ಸಂಚರಿಸುವ ನಾಗರಿಕರಿಗೆ ತೊಂದರೆಯಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಎಇಇ (AEE) ನಂದೀಶ್‌ ಕಳೆದ ಬಾರಿಯೇ ಈ ಸಮಸ್ಯೆ ಬಗ್ಗೆ ದೂರು ಬಂದಿದ್ದು ಈಗಾಗಲೇ ಎಸ್ಟಿಮೇಟ್‌ ತಯಾರಿಸಿದ್ದು ಮುಂದಿನ ದಿನಗಳಲ್ಲಿ ಶೀಘ್ರವಾಗಿ ಬದಲಾಯಿಸಿ ಕೊಡಲಾಗುವುದು ಎಂದರು.

ಪುರಸಭೆ 13ನೇ ವಾರ್ಡ್‌ ಸದಸ್ಯ ಲಕ್ಷ್ಮಣ್‌ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ವಾರ್ಡಿನಲ್ಲಿ ಕಂಬಗಳಲ್ಲಿ ತಾಮ್ರದ ತಂತಿಗಳ  ಮೂಲಕ ವಿದ್ಯುತ್‌ ಸರಬರಾಜಾಗಿವೆ. ತಂತಿಗಳು ಹಳೆಯದಾದ ಪರಿಣಾಮ ಇಲ್ಲಿನ ಬೀದಿ ದೀಪಗಳು (Street Light) ಪದೇ ಪದೇ ಕೆಟ್ಟು ಹೋಗುತ್ತಿವೆ. ಅವುಗಳು ಬದಲಾವಣೆಗೆ ಕೋರಿದ ಅವರು, ಹೊಸ ವಿದ್ಯುತ್‌ ಲೈನ್‌ ಅಳವಡಿಸಬೇಕು. ವಾರ್ಡ್‌ನ 3 ಕಬ್ಬಿಣದ ಕಂಬಗಳನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಹಲವು ದೂರುಗಳು ಬಂದ ಹಿನ್ನೆಲೆ ಉತ್ತರಿಸಿದ ಎಇಇ ನಂದೀಶ್‌, ಸದ್ಯ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ. ಕೆಲವು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮಳೆ ಅಡ್ಡಿ ಆಗಿರುವ ಪರಿಣಾಮ ಗ್ರಾಹಕರು ಮತ್ತು ರೈತರು ಸಹಕರಿಸಬೇಕು. ಮಳೆ ಕಡಿಮೆಯಾದ ನಂತರ ಮೆಸ್ಕಾಂ ಇಲಾಖೆ ನಿಮ್ಮ ಸಮಸ್ಯೆ ಬಗೆಹರಿಸಲು ಸದಾ ನಿಮ್ಮೊಂದಿಗೆ ಇರುತ್ತದೆ. ಸಹಕಾರ ಅಗತ್ಯ ಎಂದರು.

23ನೇ ವಾರ್ಡ್‌ನ ಗಂಟೆ ಕುಮಾರ್‌  ಗಿರಿಯಾ ಪುರದ ಷಡಾಕ್ಷರಯ್ಯ, ಜೋಡಿತಿಮ್ಮಾಪುರ ಓಂಕಾರಪ್ಪ, ನವೀನ್‌ ಶಾಸ್ತಿ್ರ ಮತ್ತಿತರರು ತಮಗಾಗಿದ್ದ ತೊಂದರೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಅದನ್ನು ಎಇಇ ಬಗೆಹರಿಸುವ ಮುನ್ಸೂಚನೆ ನೀಡಿದರು.

ಬೀರೂರು ಜೆಇ ಜೆ.ಟಿ.ರಮೇಶ್‌, ಹಿರೇನಲ್ಲೂರು ಜೆಇ ಕಿಶೋರ್‌ ಕುಮಾರ್‌, ಸಹಾಯಕ ಲೆಕ್ಕಾ​ಕಾರಿ ಪ್ರಭಾಕರ್‌, ಸಹಾಯಕ ತಾಂತ್ರಿಕ ಎಂಜಿನಿಯರ್‌ ಸುಧಾ, ಯಗಟಿ ಶಾಖಾ​ಧಿಕಾರಿ ಬಿ.ಜಿ.ವಿನಾಯಕ್‌, ಕುಸುಮ, ಪಾಟೀಲ್‌ ಸೇರಿದಂತೆ ಜನಸಂಪರ್ಕ ಸಭೆಯಲ್ಲಿ ಮತ್ತಿತರ ಗ್ರಾಹಕರು ಇದ್ದರು.

Follow Us:
Download App:
  • android
  • ios