Asianet Suvarna News Asianet Suvarna News

LIVE: ಚಾಮರಾಜನಗರ 2024 Elections: ಜಿಲ್ಲೆಯಲ್ಲಿ ಶೇ. 54.82ರಷ್ಟು ಮತದಾನ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲ ಮತದಾನ ಚುರುಕುಗೊಂಡಿದೆ. ಡಿಸಿ ಶಿಲ್ಪಾ ನಾಗ್‌ ಚುನಾವಣಾ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
 

Karnataka lok sabha election 2024 Chamarajanagara consistency san
Author
First Published Apr 26, 2024, 9:02 AM IST

ಚಾಮರಾಜನಗರ: ಜಿಲ್ಲೆಯಲ್ಲಿ ಮತದಾನ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 54.82ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 39.57 ರಷ್ಟು ಮತದಾನವಾಗಿತ್ತು.  ಬೆಳಗ್ಗೆ 9 ಗಂಟೆಯ ವೇಳೆಗೆ ಅತೀ ಕಡಿಮೆ ಶೇ. 7.70ರಷ್ಟು ಮತದಾನವಾಗಿತ್ತು. ಆದರೆ, ನಂತರ ಮತದಾನ ಬಿರುಸು ಪಡೆದುಕೊಂಡಿದೆ.  ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 22.81ರಷ್ಟು ಮತದಾನ ಈ ಕ್ಷೇತ್ರದಲ್ಲಾಗಿತ್ತು.

ಬಿಜೆಪಿ ಅಭ್ಯರ್ಥಿ ಬಾಲರಾಜು ಮತದಾನ: ಬಿಜೆಪಿ ಅಭ್ಯರ್ಥಿ  ಸ್ವಗ್ರಾಮ ಮದ್ದೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಲೆ ಮಹದೇಶ್ವರನ ದರ್ಶನ ಪಡೆದು ಮತದಾನ ಮಾಡಿದರು. ಈ ಬಾರಿ 100 ಕ್ಕೆ 200 ರಷ್ಟು ನನ್ನ ಗೆಲುವು ನಿಶ್ಚಿತ. ನನಗೆ ಮಲೆ ಮಹದೇಶ್ವರನ ಅನುಗ್ರಹವಿದೆ. ಮಹಿಳೆಯರು ಕೂಡ ನನಗೆ ಅಶಿರ್ವಾದ ಮಾಡ್ತಾರೆ.. ಪ್ರತಿ ಪಕ್ಷದವರು ಸೋಲುವ ಭಯದಲ್ಲಿ ಹಣ, ಹೆಂಡ ಹಂಚ್ತಿದ್ದಾರೆ. ಅದ್ರೆ ಮತದಾರರು ಜಾಗೃತರಾಗಿದ್ದಾರೆ ಹಾಗಾಗಿ ನನಗೆ ಮತ ನೀಡ್ತಾರೆ ಎನ್ನುವ ಮೂಲಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್  ಸ್ವಗ್ರಾಮ ಹದಿನಾರು ಗ್ರಾಮದಲ್ಲಿ ಮತದಾನ ಮಾಡಿದರು. ವರುಣ ಕ್ಷೇತ್ರ ವ್ಯಾಪ್ತಿಗೆ ಬರುವ ಹದಿನಾರು ಗ್ರಾಮದಲ್ಲಿ ಸಚಿವ ಮಹದೇವಪ್ಪ ಕೂಡ ಮತದಾನ ಮಾಡಿದರು.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್ 

ಚಾಮರಾಜನಗರ ಲೋಕಸಭಾ ಎಸ್.ಸಿ ಮೀಸಲು ಕ್ಷೇತ್ರದ ಚುನಾವಣೆಗೆ  ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 80 ರಲ್ಲಿಜಿಲ್ಲಾ ಚುನಾವಣಾಧಿಕಾರಿ ಹಕ್ಕು ಚಲಾಯಿಸಿದ್ದಾರೆ. ಚಾಮರಾಜನಗರ ಪಿಡಬ್ಲೂಡಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸಿ ಮತದಾನ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ  ಖುದ್ದು ತಮ್ಮ ಹೆಸರನ್ನು ಶಿಲ್ಪಾ ನಾಗ್‌ ಹುಡುಕಿದ್ದರು. ಮತದಾನದ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ. ಚುನಾವಣೆ ಪರ್ವ ದೇಶದ ಗರ್ವ ಎಂಬ ಟ್ಯಾಗ್ ಲೈನ್ ಮುದ್ರಿಸಿದ ಸೀರೆ . ಡಿಸಿ ಶಿಲ್ಪಾನಾಗ್, ಜಿ.ಪಂ.ಉಪಾಧ್ಯಕ್ಷೆ ಲಕ್ಷ್ಮೀ,ಆಹಾರ ಮತ್ತು ನಾಗರೀಕ ಇಲಾಖೆ ಉಪ ನಿರ್ದೇಶಕಿ ಸವಿತಾ ಇದೇ ರೀತಿಯ ಟ್ಯಾಗ್‌ಲೈನ್‌ ಇರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ.

ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!

ಎಸ್‌ಸಿ ಕ್ಷೇತ್ರವಾಗಿರುವ ಚಾಮರಾಜನಗರದಲ್ಲಿ ಬಿಜೆಪಿಯಿಂದ ಎಸ್‌.ಬಾಲರಾಜ್‌ ಹಾಗೂ ಕಾಂಗ್ರೆಸ್‌ನಿಂದ ಸಚಿವ ಎಚ್‌ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಕಣದಲ್ಲಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದು, 17,78,310 ಮಂದಿ ಮತದಾರರಿದ್ದಾರೆ. 8.78 ಲಕ್ಷ ಪುರುಷ ಹಾಗೂ 8.99 ಲಕ್ಷ ಮಹಿಳಾ ಮತದಾರರಿದ್ದಾರೆ. 36 ಸಾವಿರ ಹೊಸ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ಸ್ವಕ್ಷೇತ್ರ ವರುಣಾ ಒಳಗೊಂಡಿರುವ ಕಾರಣಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಳೆದ ಬಾರಿ ವಿ.ಶ್ರೀನಿವಾಸ್‌ ಪ್ರಸಾದ್‌ ಬಿಜೆಪಿಗೆ ಗೆಲುವು ನೀಡಿದ್ದರು. ಈ ಬಾರಿ ಬಿಜೆಪಿ ಈ ಕ್ಷೇತ್ರ ಉಳಿಸಿಕೊಳ್ಳುವ ಹೋರಾಟದಲ್ಲಿದೆ.
 

Follow Us:
Download App:
  • android
  • ios