8ನೇ ಬಾರಿಗೆ ಖ್ಯಾತ ವೈದ್ಯ ಪುನರಾಯ್ಕೆ ಸಾಗರ,ಉತ್ತರ ಕನ್ನಡದಲ್ಲೂ ಪ್ರಾದೇಶಿಕ ಕೇಂದ್ರ: ಅಧ್ಯಕ್ಷ
ಬೆಂಗಳೂರು (ನ.7) : ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಖ್ಯಾತ ವೈದ್ಯ ಡಾ.ಗಿರಿಧರ್ ಕಜೆ ಎಂಟನೇ ಬಾರಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ. ನಗರದ ಮಲ್ಲೇಶ್ವರದ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ನಡೆದ 79ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಕಜೆ ಅವರನ್ನು ಪುನರಾಯ್ಕೆ ಮಾಡಲಾಯಿತು.
Havyaka Mahasabha: ಅವಕಾಶ ಬಳಸಿಕೊಂಡರೆ ಸಾಧನೆ, ಗಿರಿಧರ್ ಕಜೆ ಪುನರಾಯ್ಕೆ
ಉಳಿದಂತೆ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ, ಶ್ರೀಧರ ಜೆ. ಭಟ್ಟಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವೇಣು ವಿN್ನೕಶ ಸಂಪ, ಕಾರ್ಯದರ್ಶಿಯಾಗಿ ಪ್ರಶಾಂತ ಕುಮಾರ ಜಿ.ಭಟ್ಟಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಯಲಹಂಕ ಆಯ್ಕೆಯಾದರು.
ಅಡಕೆ ಕೃಷಿಕರ ಕಷ್ಟಕ್ಕೆ ಹವ್ಯಕ ಮಹಾಸಭೆ ಸ್ಪಂದಿಸಲಿದ್ದು, ಸೂಕ್ತ ಸಂಶೋಧನೆ ಹಾಗೂ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು. ಈ ತಿಂಗಳಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಕೃಷಿಕರನ್ನು ಸಂಘಟಿಸಿ ಅಡಕೆ ಕೃಷಿಕರ ಸಮಾವೇಶ ನಡೆಸಬೇಕು. ಕೃಷಿ ವಿಜ್ಞಾನಿಗಳನ್ನು ಕರೆಸಿ ಎಲೆಚುಕ್ಕಿ ರೋಗಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಎಲ್ಲ ಭಾಗಗಳ ಸ್ಥಳೀಯ ನಿರ್ದೇಶಕರಿಗೆ ಸೂಚಿಸಿದರು.
ಪ್ರಧಾನ ಕಾರ್ಯದರ್ಶಿ ಸಿ.ಎ.ವೇಣುವಿN್ನೕಶ ಸಂಪ ಸಭೆ ನಿರ್ವಹಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿದರು.‘ಹವ್ಯಕ’ ಮಾಸಪತ್ರಿಕೆ ಸಂಪಾದಕರಾಗಿ 18 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಹಾಗೂ ಪುತ್ತೂರು ಸಭಾಭವನದಲ್ಲಿ 12 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ರಾಮಕೃಷ್ಣ ಭಟ್ ಕೋಟಿಮೂಲೆ ಅವರನ್ನು ಪುರಸ್ಕರಿಸಲಾಯಿತು. ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿ ವಿವಿಧ ಪ್ರಾಂತಗಳ ಸದಸ್ಯರು ಭಾಗವಹಿಸಿದ್ದರು.
ಅಖಿಲ ಹವ್ಯಕ ಮಹಾಸಭಾಗೆ ಐಎಸ್‌ಒ ಪ್ರಮಾಣ ಪತ್ರ
ಸಾಗರ, ಉತ್ತರಕನ್ನಡದಲ್ಲಿ ಪ್ರಾದೇಶಿಕ ಕೇಂದ್ರ
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಗಿರಿಧರ್ ಕಜೆ ಅವರು, ಹವ್ಯಕರನ್ನು ಹೆಚ್ಚಿನ ಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ಪುತ್ತೂರಿನಂತೆ ಸಾಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಮಹಾಸಭೆಯ ಸಾಮಾಜಿಕ ಕಾರ್ಯಕ್ಕೆ ಇತರೆ ಸಮಾಜದವರೂ ಸಹಕಾರ ನೀಡುತ್ತಿರುವುದು, ನಮ್ಮ ಕೆಲಸ ಗುರುತಿಸುತ್ತಿರುವುದಕ್ಕೆ ನಿದರ್ಶನವಾಗಿದೆ. ಹವ್ಯಕರು ಪ್ರಮುಖ ವಾಗಿ ನೆಲೆಸಿರುವ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಭಾಗದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗುವ ದಿಸೆಯಲ್ಲಿ ಪುತ್ತೂರಿನಲ್ಲಿ ಮಹಾಸಭೆಯ ಪ್ರಾದೇಶಿಕ ಕೇಂದ್ರ ಕಾರ್ಯಾ ರಂಭ ಮಾಡಿದೆ. ಸಾಗರ ಹಾಗೂ ಉತ್ತರ ಕನ್ನಡ ದಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನ ನಡೆದಿದೆ ಎಂದು ಡಾ.ಗಿರಿಧರ್ ಕಜೆ ತಿಳಿಸಿದರು.
