ರಾಜ್ಯದಲ್ಲಿ ಭಾನುವಾರ 456 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ ಆರು ಮಂದಿ ಮರಣವನ್ನಪ್ಪಿದ್ದಾರೆ. 330 ಮಂದಿ ಗುಣಮುಖರಾಗಿದ್ದಾರೆ.

 ಬೆಂಗಳೂರು(ಡಿ.06): ರಾಜ್ಯದಲ್ಲಿ ಭಾನುವಾರ 456 ಮಂದಿಯಲ್ಲಿ ಕೋವಿಡ್‌ (Covid ) ದೃಢ ಪಟ್ಟಿದೆ. ಆರು ಮಂದಿ ಮರಣ ವನ್ನಪ್ಪಿದ್ದಾರೆ. 330 ಮಂದಿ ಗುಣಮುಖರಾಗಿದ್ದಾರೆ. ಅಕ್ಟೋಬರ್‌ 28 ರಂದು 478 ಪ್ರಕರಣ ವರದಿಯಾದ ಬಳಿಕ ಮೊದಲ ಬಾರಿಗೆ ಇಷ್ಟೊಂದು ಪ್ರಕರಣ ದೃಢಪಟ್ಟಿವೆ. ಬೆಂಗಳೂರು ನಗರದಲ್ಲಿ (Bengaluru City) 256 ಪ್ರಕರಣ ಪತ್ತೆಯಾಗಿವೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿದ್ದು, 66 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಧಾರವಾಡ 20, ಕೊಡಗು 17, ಉತ್ತರ ಕನ್ನಡ 14, ದಕ್ಷಿಣ ಕನ್ನಡ 13, ಹಾಸನ 12, ಮೈಸೂರು 10 ಪ್ರಕರಣ ವರದಿಯಾಗಿವೆ.

Add Asianetnews Kannada as a Preferred SourcegooglePreferred

ಯಾದಗಿರಿ, ವಿಜಯಪುರ, ರಾಯಚೂರು, ರಾಮನಗರ, ಕೊಪ್ಪಳ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ (Karnataka Districts) ಹೊಸ ಪ್ರಕರಣ ವರದಿಯಾಗಿಲ್ಲ. ಉಳಿದ ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 1.10 ಲಕ್ಷ ಕೋವಿಡ್‌ ಪರೀಕ್ಷೆ (Covid Test) ನಡೆದಿದ್ದು ಶೇ.0.41 ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು (bengaluru) ನಗರದಲ್ಲಿ ಇಬ್ಬರು, ಬೆಂಗಳೂರು ಗ್ರಾಮಾಂತರ, ಮೈಸೂರು (Mysuru), ತುಮಕೂರು (Tumakur) ಮತ್ತು ಉಡುಪಿಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಭಾನುವಾರ 1.12 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

"

ಒಮಿಕ್ರಾನ್ ವಿದೇಶದಿಂದ ಬಂದಿಲ್ಲ :

 ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ (Covid 19 New Variant Omicron) ಕೇವಲ ವಿದೇಶದಿಂದ ಭಾರತಕ್ಕೆ ಬರಬೇಕಿಲ್ಲ. ಅದು ಈಗಾಗಲೇ ಇಲ್ಲಿ ಇದೆ ಮತ್ತು ದೇಶದ ಪ್ರಮುಖ ಎಲ್ಲಾ ನಗರಗಳಲ್ಲೂ ಇರುವ ಸಾಧ್ಯತೆ ದಟ್ಟವಾಗಿದೆ. ಯಾವುದೇ ಪ್ರವಾಸ ಇತಿಹಾಸವಿಲ್ಲದ ಬೆಂಗಳೂರಿನ ವ್ಯಕ್ತಿಗೆ ಸೋಂಕು ದೃಢ ಪಟ್ಟಿರುವುದು ಇದನ್ನು ಸ್ಪಷ್ಟಪಡಿಸುತ್ತದೆ ಎಂದು ಸಿಎಸ್‌ಐಆರ್‌ (CSIR) ಮಾಜಿ ಮುಖ್ಯಸ್ಥ ಡಾ.ರಾಕೇಶ್‌ ಮಿಶ್ರಾ (Dr Rakesh Mishra) ಹೇಳಿದ್ದಾರೆ.

ಹೊಸ ವೈರಸ್‌ ಪತ್ತೆ ಹೊರತಾಗಿಯೂ ಸಮಾಧಾನಕರ ವಿಷಯವೆಂದರೆ ಸೋಂಕು ಸಮುದಾಯಕ್ಕೆ ಹರಡಿದ (Community Spread) ಹೊರತಾಗಿಯೂ ಅದು ಸೌಮ್ಯ ಸ್ವರೂಪದಲ್ಲೇ ಇದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಅಪಾಯಕಾರಿಯಾಗಿ ಹೊರಹೊಮ್ಮಿಲ್ಲ. ಗುರುವಾರ ಭಾರತದಲ್ಲಿ ಮೊದಲ ಒಮಿಕ್ರೋನ್‌ ಪ್ರಕರಣ ದಾಖಲಾಯಿತು. ಒಬ್ಬ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ (South Africa) ಬಂದಿದ್ದರೆ, ಮತ್ತೊಬ್ಬರು ಯಾವುದೇ ಪ್ರಯಾಣ ಮಾಡಿರಲಿಲ್ಲ. ಇದು ಹೊಸ ರೂಪಾಂತರಿ ಭಾರತದಲ್ಲೇ ಇತ್ತು ಎನ್ನುವುದನ್ನು ಸ್ಪಷ್ಟವಾಗುತ್ತದೆ. ಒಮಿಕ್ರಾನ್‌ ನಾವು ಊಹಿಸಿರುವ ವ್ಯಾಪ್ತಿಯಲ್ಲಷ್ಟೇ ಇಲ್ಲ. ಭಾರತದ ಮುಖ್ಯ ನಗರಗಳಲ್ಲಿ ಈ ರೂಪಾಂತರಿ ಈಗಾಗಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

Covid Vaccine: ಕೊರೋನಾ ಯೋಧರಿಗೂ 2ನೇ ಡೋಸ್‌ ಬೇಡ್ವಂತೆ..!

‘ಈ ಹೊಸ ರೂಪಾಂತರಿ ಭಾರತೀಯರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಇದರ ಲಕ್ಷಣಗಳು ಸೌಮ್ಯವಾಗಿರುವುದು ಅದೃಷ್ಟಎಂದೇ ಹೇಳಬೇಕು. ಇದನ್ನು ತಡೆಗಟ್ಟಲು ಕೋವಿಡ್‌ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ, ಲಸಿಕೆ ಪಡೆಯುವುದು ಹಾಗೂ ನೈರ್ಮಲ್ಯವನ್ನು ಕಾಪಾಡಬೇಕು. ಭಾರತದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗಾಗಿ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ಹಿಮಾಚಲದಲ್ಲಿ ಲಸಿಕೆ ವಿತರಣೆ ಪೂರ್ಣ

ರಾಜ್ಯದ ಎಲ್ಲಾ 53.86 ಲಕ್ಷ ಅರ್ಹ ವಯಸ್ಕರಿಗೆ ಕೋವಿಡ್‌ನ ಎರಡೂ ಡೋಸ್‌ ಲಸಿಕೆ (Corona Vaccine) ವಿತರಿಸುವ ಮೂಲಕ, ಇಂಥ ಸಾಧನೆ ಮಾಡಿದ ಮೊದಲ ರಾಜ್ಯವಾಗಿ ಹಿಮಾಚಲಪ್ರದೇಶ (Himachal Pradesh) ಹೊರಹೊಮ್ಮಿದೆ. ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಈವರೆಗೆ 53.86 ಲಕ್ಷ ಅರ್ಹ ವಯಸ್ಕರು ಎರಡೂ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಆಗಸ್ಟ್‌ ಅಂತ್ಯದಲ್ಲಿ ಶೇ.100ರಷ್ಟುವಯಸ್ಕರಿಗೆ ವಯಸ್ಕರಿಗೆ ಮೊದಲ ಡೋಸ್‌ ಲಸಿಕೆ ನೀಡಿದ ದೇಶದ ಮೊದಲ ರಾಜ್ಯ ಎಂಬ ಪ್ರಶಂಸೆಗೂ ರಾಜ್ಯ ಪಾತ್ರವಾಗಿತ್ತು ಎಂದು ತಿಳಿಸಿದೆ.