Asianet Suvarna News Asianet Suvarna News

Omicron Threat: ಬೆಂಗ್ಳೂರಿಗರೇ ಎಚ್ಚರ: ಕೊರೋನಾ ಸೋಂಕು ಮತ್ತೆ ಏರಿಕೆ..!

*  256 ಹೊಸ ಕೇಸ್‌ ಪತ್ತೆ, 2 ಸಾವು
*  214 ಮಂದಿ ಗುಣಮುಖ
*  5136 ಕೋವಿಡ್‌ ಸಕ್ರಿಯ ಕೇಸ್‌
 

Coronavirus Cases Again Increasing in Bengaluru grg
Author
Bengaluru, First Published Dec 6, 2021, 6:55 AM IST

ಬೆಂಗಳೂರು(ಡಿ.06):  ನಗರದಲ್ಲಿ(Bengaluru) ಭಾನುವಾರ ಕೊರೋನಾ(Coronavirus) ಪ್ರಕರಣದಲ್ಲಿ ಮತ್ತೆ ಏರಿಕೆಯಾಗಿದ್ದು, 134 ಪುರುಷರು ಮತ್ತು 122 ಮಹಿಳೆಯರು ಸೇರಿ ಒಟ್ಟು 256 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಪುರುಷರು ಸಾವಿಗೀಡಾಗಿದ್ದಾರೆ(Death).

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,57,498ಕ್ಕೆ ಏರಿಕೆ ಆಗಿದೆ. ಇಬ್ಬರ ಸಾವಿನಿಂದ ಒಟ್ಟು ಸಾವಿನ ಸಂಖ್ಯೆ 16,346 ತಲುಪಿದೆ. ಇದೇ ವೇಳೆ 117 ಪುರುಷರು ಮತ್ತು 97 ಮಂದಿ ಮಹಿಳೆಯರು ಸೇರಿ 214 ಮಂದಿ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 12,36,016ಕ್ಕೆ ಏರಿಕೆ ಆಗಿದೆ. ಸಕ್ರಿಯವಾಗಿರುವ 5,136 ಕೋವಿಡ್‌ ರೋಗಿಗಳಿಗೆ(Covid Patients) ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ(Department of Health) ತಿಳಿಸಿದೆ.

"

Covid Vaccination : 2022ರ ಜನವರಿಯೊಳಗೆ ಲಸಿಕಾಕರಣ ಪೂರ್ಣ

ಬಿಬಿಎಂಪಿಯ(BBMP) ಒಟ್ಟು ಎಂಟು ವಲಯಗಳ ಪೈಕಿ ಏಳು ವಲಯಗಳಲ್ಲಿ ಒಟ್ಟು 75 ಕಂಟೈನ್ಮೆಂಟ್‌ ವಲಯಗಳು(Containment Zones) ಸಕ್ರಿಯವಾಗಿದ್ದು, ದಾಸರಹಳ್ಳಿ ಕಂಟೈನ್ಮೆಂಟ್‌ ಮುಕ್ತವಾಗಿದೆ. ಬೊಮ್ಮನಹಳ್ಳಿಯಲ್ಲಿ 27, ದಕ್ಷಿಣ ವಲಯ 7, ಪೂರ್ವ 11, ಪಶ್ಚಿಮ 6, ಯಲಹಂಕ 7, ಮಹದೇವಪುರ 14, ಆರ್‌ಆರ್‌ ನಗರದಲ್ಲಿ 3 ಕಂಟೈನ್ಮೆಂಟ್‌ ವಲಯಗಳು ಇವೆ. ದಾಸರಹಳ್ಳಿ ಮತ್ತು ಆರ್‌.ಆರ್‌.ನಗರ ವಲಯಗಳು ಕಂಟೈನ್ಮೆಂಟ್‌ ವಲಯದಿಂದ ಮುಕ್ತವಾಗಿದೆ ಎಂದು ಬಿಬಿಎಂಪಿಯ ಕೊರೋನಾ ವರದಿ ತಿಳಿಸಿದೆ.

ಆನೇಕಲ್‌ ತಾಲೂಕಲ್ಲಿ ಕೊರೋನಾ ಸ್ಫೋಟ

ಆನೇಕಲ್‌(Anekal): ತಾಲೂಕಿನಲ್ಲಿ ಕೊರೋನಾ ಸ್ಫೋಟವಾಗಿದ್ದು, ಶಾಲೆ-ಕಾಲೇಜಿನ(School-College) 12 ವಿದ್ಯಾರ್ಥಿಗಳು(Students) ಸೇರಿ ಒಟ್ಟು 27 ಕೊರೋನಾ ಪಾಸಿಟಿವ್‌ ಕಂಡುಬಂದಿದೆ. ಇನ್ನು ಕಂಪನಿಯ ಸಭೆಯೊಂದರಲ್ಲಿ ಮೂವರಲ್ಲಿ ಪಾಸಿಟಿವ್‌ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತಾಲೂಕು ಆಡಳಿತ, ವೈದ್ಯಾಧಿಕಾರಿಗಳು ಖಚಿತ ಪಡಿಸಿಲ್ಲ.

ತಾಲೂಕಿನ ದೊಮ್ಮಸಂದ್ರದ ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಆರ್‌ಟಪಿಸಿಆರ್‌(RTPCR) ವರದಿ ಬಂದಿದ್ದು, ಮತ್ತೆ ಐವರಲ್ಲಿ ಎ ಸಿಂಪ್ಟಮಾಟಿಕ್‌ ಪತ್ತೆಯಾಗಿದೆ. ಇನ್ನು ಮರಸೂರಿನ ಸ್ಫೂರ್ತಿ ನರ್ಸಿಂಗ್‌ ಕಾಲೇಜಿನ 7 ವಿದ್ಯಾರ್ಥಿಗಳ ವರದಿಯಲ್ಲಿ ಎ ಸಿಂಪ್ಟಮ್ಯಾಟಿಕ್‌ ಕಂಡು ಬಂದಿದ್ದು, ಅವರನ್ನು ಜಿಗಣಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ(Covid Care Center) ದಾಖಲಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವಿನಯ್‌ ತಿಳಿಸಿದರು. ಉಳಿದಂತೆ ವಿವಿಧ ಪ್ರಾಥಮಿಕ ಕೇಂದ್ರಗಳ ವ್ಯಾಪಿಯಲ್ಲಿ 15 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದರು.

ಇನ್ನು ದಕ್ಷಿಣ ಆಫ್ರಿಕಾದಿಂದ(South Africa) ಬಂದಿದ್ದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈತ ಆನೇಕಲ್‌ ತಾಲೂಕಿನ ಬೊಮ್ಮಸಂದ್ರ ಆಡ್ಕಾಕ್‌ ಇನ್ಗಾಮ್‌ ಕಂಪನಿಯ ಸಭೆಯಲ್ಲಿ ಭಾಗಿಯಾಗಿದ್ದ. ಅದೇ ಸಭೆಯಲ್ಲಿ ಭಾಗವಸಿದ್ದ ಇತರ ಮೂರು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

Covid Vaccine: ಕೊರೋನಾ ಯೋಧರಿಗೂ 2ನೇ ಡೋಸ್‌ ಬೇಡ್ವಂತೆ..!

ಕೊರೋನಾ 3ನೇ ಅಲೆ ಮತ್ತು ಒಮಿಕ್ರೋನ್‌(Omicron) ಆತಂಕದ ನಡುವೆಯೇ ಶಾಲೆ ಕಾಲೇಜುಗಳಲ್ಲಿ ಕೊರೋನಾ ಸೋಂಕು ತಗಲುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾನುವಾರ ಮತ್ತೆ ರಾಜ್ಯದ ಎರಡು ಕಡೆ ಒಟ್ಟು 74 ವಿದ್ಯಾರ್ಥಿಗಳು, ಬೋಧಕರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಕಳೆದ 12 ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿನ ಒಟ್ಟು 501 ಮಂದಿಗೆ ಸೋಂಕು ತಗಲಿದಂತಾಗಿದೆ.

ಭಾನುವಾರ ಚಿಕ್ಕಮಗಳೂರು(Chikkamagalur) ಜಿಲ್ಲೆ ಬಾಳೆಹೊನ್ನೂರು ಸಮೀಪದ ಸೀಗೋಡು ಜವಾಹರ್‌ ನವೋದಯ ವಿದ್ಯಾಲಯದಲ್ಲಿ 62 ಮಂದಿಗೆ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸ್ಫೂರ್ತಿ ನರ್ಸಿಂಗ್‌ ಕಾಲೇಜಿನಲ್ಲಿ 7 ಮತ್ತು ದಿ ಇಂಟರ್‌ನ್ಯಾಶನಲ್‌ ಸ್ಕೂಲಿನಲ್ಲಿ 5 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಸೀಗೋಡು ನವೋದಯ ವಿದ್ಯಾಲಯದಲ್ಲಿ ಶುಕ್ರವಾರ 1 ಹಾಗೂ ಶನಿವಾರ 7 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ ಒಟ್ಟು 418 ಜನರ ಗಂಟಲು ದ್ರವವನ್ನು ಕೊರೋನಾ ಪರೀಕ್ಷೆಗಾಗಿ ಚಿಕ್ಕಮಗಳೂರಿಗೆ ಕಳುಹಿಸಲಾಗಿತ್ತು. ಭಾನುವಾರ ದೊರೆತ ಒಟ್ಟು 62 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಇನ್ನುಳಿದವರಿಗೆ ನೆಗೆಟಿವ್‌ ಫಲಿತಾಂಶ ಬಂದಿದೆ.
 

Follow Us:
Download App:
  • android
  • ios