ಡಿಜಿಪಿ ರಾಮಚಂದ್ರರಾವ್ ಅವರ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಆದರೆ, ಸಂತ್ರಸ್ತೆಯಿಂದ ದೂರು ದಾಖಲಾಗಿಲ್ಲ. ಈ ಪ್ರಕರಣದ ಜೊತೆಗೆ ಅವರ ಹಿಂದಿನ ಆರೋಪಗಳು ಮತ್ತು ವೈರಲ್ ಆಡಿಯೋದ ವಿವರಗಳೂ ಇಲ್ಲಿವೆ.

ಬೆಂಗಳೂರು: ಡಿಜಿಪಿ ರಾಮಚಂದ್ರರಾವ್‌ ಪ್ರಕರಣದಲ್ಲಿ ದೂರುದಾರರೇ ಇಲ್ಲ. ಅಶ್ಲೀಲ ವಿಡಿಯೋ ಮತ್ತು ಆಡಿಯೋ ವೈರಲ್‌ ಸಂಬಂಧ ಇದುವರೆಗೂ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆಯೇ ಹೊರತು ವಿಡಿಯೋದಲ್ಲಿರುವ ಸಂತ್ರಸ್ತೆಯಾಗಲಿ ಅದಕ್ಕೆ ಸಂಬಂಧಪಟ್ಟವರು ಈವರೆಗೂ ದೂರು ನೀಡಿಲ್ಲ. ಆದರೆ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಯೇ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಹಿನ್ನೆಲೆಯಲ್ಲಿ ಇಲಾಖಾ ಕ್ರಮ ಹೊರತು ಪಡಿಸಿ ಬೇರೆ ರೀತಿಯ ಕ್ರಮಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾರಾದರೂ ದೂರು ನೀಡಿದರೆ, ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಮಾಜಿಕ ಕಾರ್ಯಕರ್ತ ದಿನೇಶ್‌ರಿಂದ ದೂರು ಸಲ್ಲಿಕೆ

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಮಚಂದ್ರರಾವ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆಗೆ ದೂರು ನೀಡಿದ್ದಾರೆ. ರಾಮಚಂದ್ರರಾವ್‌ ಅವರು ಸಮವಸ್ತ್ರದಲ್ಲೇ ಸರ್ಕಾರಿ ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದರಿಂದ ಪೊಲೀಸ್ ಇಲಾಖೆಗೆ ಭಾರೀ ಮುಜುಗರ ಉಂಟು ಮಾಡಿದೆ. ಹೀಗಾಗಿ ಅವರ ವಿರುದ್ಧ ಆಲ್‌ ಇಂಡಿಯಾ ಸರ್ವೀಸ್ ರೂಲ್-1969ರ ಅಡಿಯಲ್ಲಿ ಕೂಡಲೇ ಅವರನ್ನು ಅಮಾನತು ಮತ್ತು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿರುವ ದಿನೇಶ್‌ ಕಲ್ಲಹಳ್ಳಿ, ಸಮವಸ್ತ್ರದಲ್ಲೇ ಸರ್ಕಾರಿ ಕಚೇರಿ ದುರುಪಯೋಗ ಪಡಿಸಿಕೊಂಡು ಮಹಿಳೆಯರ ಜತೆ ರಾಸಲೀಲೆಯಲ್ಲಿ ತೊಡಗಿರುವ ಡಿಜಿಪಿ ರಾಮಚಂದ್ರರಾವ್‌ ಅವರ ವಿರುದ್ಧ ಇಲಾಖಾ ಕ್ರಮದ ಜತೆಗೆ ಶಿಸ್ತು ಕ್ರಮಕೈಗೊಳ್ಳಬೇಕು. ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಮಚಂದ್ರರಾವ್ ಮೇಲಿನ ಆರೋಪಗಳು

8 ವರ್ಷಗಳ ಹಿಂದೆ ರಾಮಚಂದ್ರರಾವ್‌ ವಿರುದ್ಧ ಮೈಸೂರಿನಲ್ಲಿ ಡಿಐಜಿಪಿಯಾಗಿದ್ದಾಗ ಚಿನ್ನ ಕಳ್ಳತನ ಆರೋಪಿಗೆ ನೆರವು ನೀಡಿ ಹಣ ಪಡೆದ ಆರೋಪ ಕೇಳಿ ಬಂದಿತ್ತು. 2026ರಲ್ಲಿ ಮಲಪುತ್ರಿ ನಟಿ ರನ್ಯಾರಾವ್‌ಗೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ನೆರವು ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಈಗಲೂ 'ನನಗೆ ಗೊತ್ತಿಲ್ಲ' ಎನ್ನುವುದು ಉತ್ತರವಾಗಬಾರದು: ಡಿಜಿಪಿ ವಿರುದ್ಧ ಕ್ರಮಕ್ಕೆ ಸುರೇಶ್‌ಕುಮಾರ್‌ ಒತ್ತಾಯ!

ಆಡಿಯೋದಲ್ಲಿ ಏನಿದೆ?

ಡಿಜಿಪಿ ರಾಮಚಂದ್ರರಾವ್‌ ಅವರ ಧ್ವನಿಯನ್ನೇ ಹೊಲುವ ಐದು ಮತ್ತು ನಾಲ್ಕುವರೆ ನಿಮಿಷದ ಎರಡು ಆಡಿಯೋಗಳು ವೈರಲ್ ಆಗಿವೆ. ಈ ಆಡಿಯೋದಲ್ಲಿ ರಾಮಚಂದ್ರರಾವ್‌ ಮತ್ತು ಮಹಿಳೆ ಖಾಸಗಿಯಾಗಿ ಮಾತನಾಡಿದ್ದಾರೆ. ಪರಸ್ಪರ ತಮ್ಮ ಭಾವನೆ ಹೇಳಿಕೊಂಡಿದ್ದು, ಭೇಟಿಯಾಗೋಣ, ನೋಡುವಂತಾಗಿದೆ. ನೀವು ನಮ್ಮ ಮನೆಗೆ ಬನ್ನಿ... ಎಂದೆಲ್ಲ ಮಾತಾಡಿದ್ದಾರೆ.

ಇದನ್ನೂ ಓದಿ: ರಾಸಲೀಲೆ ರಾಮಚಂದ್ರನನ್ನು ಗೇಟಿನ ಬಾಗಿಲಲ್ಲೇ ವಾಪಸ್ ಕಳಿಸಿದ ಪರಮೇಶ್ವರ! ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ!