Asianet Suvarna News Asianet Suvarna News

ಬ್ರೇಕಿಂಗ್‌ ನ್ಯೂಸ್‌ ಠುಸ್ - ದೊಡ್ದ ಸುದ್ದಿ ಕೊಡುತ್ತೇನೆ ಎಂದಿದ್ದ ಕಾಂಗ್ರೆಸ್ಸಿಗ, ಈಗೇನಾಯಿತು?

  • ಸುರ್ಜೇವಾಲಾ ಹೇಳಿದ್ದೆಲ್ಲ ಸುಳ್ಳು: ಬಿಜೆಪಿ
  • ಬ್ರೇಕಿಂಗ್‌ ನ್ಯೂಸ್‌ ಕೊಡುತ್ತೇನೆ ಎಂದಿದ್ದ ಕಾಂಗ್ರೆಸ್ಸಿಗ, ಈಗೇನಾಯಿತು?
  • ಇಂತಹ ಮ್ಯಾಜಿಕ್‌ ಶೋ ಜಾಸ್ತಿ ದಿನ ಓಡುವುದಿಲ್ಲ: ಬಿಜೆಪಿ ತಿರುಗೇಟು
bjp Leaders taunts surjewala on Bitcoin scam issue snr
Author
Bengaluru, First Published Nov 14, 2021, 9:47 AM IST
  • Facebook
  • Twitter
  • Whatsapp

ಬೆಂಗಳೂರು (ನ.14): ‘ಬ್ರೇಕಿಂಗ್‌ ನ್ಯೂಸ್‌ ಕೊಡುತ್ತೇನೆ ಎಂದು ಹೇಳಿದ್ದ ರಾಜ್ಯ ಕಾಂಗ್ರೆಸ್‌ (karnataka Congress) ಉಸ್ತುವಾರಿ ಸುರ್ಜೇವಾಲಾ (Randeep Surjewala) ಏನು ಹೇಳಿದಂತಾಯಿತು? ಈಗಾಗಲೇ ಸಾರ್ವಜನಿಕ ವಲಯದಲ್ಲಿರುವ ದಾಖಲೆಗಳನ್ನೇ ತಿರುಗಿಸಿ-ಮುರುಗಿಸಿ ಸುಳ್ಳನ್ನೇ ಸತ್ಯವಾಗಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಈ ಮ್ಯಾಜಿಕ್‌ ಶೋ (Magic Show) ಜಾಸ್ತಿ ದಿನ ಓಡುವುದಿಲ್ಲ’ ಎಂದು ರಾಜ್ಯ ಬಿಜೆಪಿ (BJP) ಕಿಡಿಕಾರಿದೆ.

ಈ ಸಂಬಂಧ ಟ್ವೀಟ್‌ (Tweet) ಮಾಡಿರುವ ಬಿಜೆಪಿ, ‘ದೇಶವ್ಯಾಪಿ ನಡೆದ ಉಪಚುನಾವಣೆಗಳಲ್ಲಿ (By Election) ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌ ಪಕ್ಷ (Congress Party) ಈ ಬಿಟ್‌ಕಾಯಿನ್‌ ವಿಚಾರ ಹಿಡಿದುಕೊಂಡು ಉಸಿರಾಡುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಳ್ಳಿನ ಮೊರೆ ಹೋಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ನಾಯಕರಿಗೆ, ಕಾರ್ಯಕರ್ತರಿಗೆ ಸುಳ್ಳು ಪಸರಿಸಲು ಸೂಚನೆ ನೀಡಿದೆ. ಬಿಟ್‌ಕಾಯಿನ್‌ ವಿಚಾರ ರಫೇಲ್‌ನಂತೆ ಕಾಂಗ್ರೆಸ್‌ ಸೃಷ್ಟಿಸಿದ ಒಂದು ಮರಿಚೀಕೆ. ಇಲ್ಲಿ ಆರಂಭಿಸುವವರೂ ಅವರೇ, ಸಿಲುಕಿ ಬೀಳುವವರೂ ಅವರೇ. ಎಲ್ಲವೂ ನಡೆದಿದ್ದು ಕಾಂಗ್ರೆಸ್‌ ಅವಧಿಯಲ್ಲಿ. ಸುಳ್ಳು ಪ್ರಚಾರದ ಮೂಲಕ ಬಿಜೆಪಿ ಮೇಲೆ ಆರೋಪಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಹೂ ಆರ್‌ ದಿ ಆ್ಯಕ್ಟರ್‌’ ಎಂದು ಪ್ರಶ್ನಿಸಿರುವ ಸುರ್ಜೇವಾಲಾ ಅವರು ಯಾಕೋ ಅನ್ಯರ ಕೈಗೊಂಬೆಯಂತೆ ಅಭಿನಯಿಸುತ್ತಿದ್ದಾರೆ. ದಾಖಲೆ ಇಲ್ಲದ ಕಲ್ಪಿತ ವಿಚಾರಗಳಿಗೆ ಸತ್ಯದ ಮುಖವಾಡ ತೊಡಿಸುವ ವಿಫಲ ಪ್ರಯತ್ನ ಇದು. ಟಾಪ್‌ ಸೀಕ್ರೆಟ್‌ ಬಾಟಮ್‌ ಓಪನ್‌ ಎಂಬಂತಾಯಿತು ಕಾಂಗ್ರೆಸ್‌ ಆರೋಪ. ಬಿಟ್‌ಕಾಯಿನ್‌ ಪ್ರಕರಣದ ಆರೋಪಿ ಶ್ರೀಕಿ ಬಂಧನವಾಗುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದರು. ಈ ಕಾರಣಕ್ಕೆ ಅವರೇ ಪ್ರಕರಣದ ನೈತಿಕ ಹೊಣೆ ಹೊರಬೇಕು ಎಂಬುದು ಕಾಂಗ್ರೆಸ್‌ ವಾದ. ಹಾಗಾದರೆ ದೇಶ ವಿಭಜನೆಯಾಗುವಾಗ ಪ್ರಧಾನಿ ಹುದ್ದೆಯಲ್ಲಿದ್ದ ಜವಹಾರ್‌ಲಾಲ್‌ ನೆಹರು ಆ ಪಾಪದ ನೈತಿಕ ಹೊಣೆ ಹೊರಬೇಕಲ್ಲವೇ?’ ಎಂದು ಬಿಜೆಪಿ ಹೇಳಿದೆ.

ಸುಪ್ರೀಂ ನೇತೃತ್ವದಲ್ಲಿ ತನಿಖೆಗೆ ಆಗ್ರಹ

 

ರಾಜ್ಯ ರಾಜಕೀಯದಲ್ಲಿ (politics) ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್‌ (Bitcoin) ಹಗರಣವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಸ್ವತಂತ್ರ ಭಾರತದ (India) 75 ವರ್ಷಗಳ ಇತಿಹಾಸದಲ್ಲೇ (History) ಇದೊಂದು ಬಹುದೊಡ್ಡ ಹಗರಣವಾಗಿದ್ದು (Scam), ಈ ಕುರಿತು ಸುಪ್ರೀಂ ಕೋರ್ಟ್‌ (Supreme court) ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ (SIT) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ (Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep surjewala) ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ(Delhi)  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಟ್‌ ಕಾಯಿನ್‌ (bitcoin) ಹಗರಣಕ್ಕೆ ಸಂಬಂಧಿಸಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಕರ್ನಾಟಕದಲ್ಲಿ ಭಾರತದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ ಬೆಳಕಿಗೆ ಬಂದಿದೆ. ಇದೊಂದು ಅಂತಾರಾಷ್ಟ್ರೀಯ ಹಗರಣ. ಈ ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ರಾಜ್ಯ ಬಿಜೆಪಿ (bJp) ಸರ್ಕಾರವು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಗಿಳಿದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಇದು ಕೇವಲ ಅಕ್ರಮ ಹಣ (Money) ವರ್ಗಾವಣೆಯ ಪ್ರಕರಣವಷ್ಟೇ ಅಲ್ಲ, ಅದರ ಜತೆಗೆ ಅಂತಾರಾಷ್ಟ್ರೀಯ ಅಪರಾಧವೂ ಹೌದು. ಈ ಕುರಿತು ಇ.ಡಿ(ಜಾರಿ ನಿರ್ದೇಶನಾಲಯ) ಹಾಗೂ ಕರ್ನಾಟಕ ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಲಿದ್ದಾರೆಂಬ ವಿಶ್ವಾಸ ಇಲ್ಲ. ಹೀಗಾಗಿ ಈ ಹಗರಣದ ಹಿಂದಿನ ಸತ್ಯ ಬಯಲಿಗೆಳೆಯಲು ಎಸ್‌ಐಟಿ(ವಿಶೇಷ ತನಿಖಾ ತಂಡ) ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದ ಅವರು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ರಚನೆಯಾಗುವ ಎಸ್‌ಐಟಿಯಲ್ಲಿ ಇಂಟರ್‌ಪೋಲ್‌, ರಿಸವ್‌ರ್‍ ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರೆ ತಜ್ಞರು ಇರಬೇಕು ಎಂದು ಹೇಳಿದರು.

Follow Us:
Download App:
  • android
  • ios