Asianet Suvarna News Asianet Suvarna News

Bitcoin Scam ರಾಜ್ಯ ಪೊಲೀಸರಿಗೆ ಅವಮಾನ ಮಾಡಬೇಡಿ: ಸುಧಾಕರ್‌

  •  ರಾಜ್ಯ ಪೊಲೀಸರಿಗೆ ಅವಮಾನ ಮಾಡಬೇಡಿ: ಸುಧಾಕರ್‌ 
  • ಬಿಟ್‌ಕಾಯಿನ್‌ ಬಗ್ಗೆ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ
  • ಸುಳ್ಳಿನ ಕಂತೆಗಳನ್ನು ನಿಜ ಮಾಡಲು ಕಾಂಗ್ರೆಸ್‌ ವ್ಯರ್ಥ ಯತ್ನ
     
Bitcoin Scam Dont Embarrass karnataka Police Says minister sudhakar snr
Author
Bengaluru, First Published Nov 14, 2021, 9:13 AM IST
  • Facebook
  • Twitter
  • Whatsapp

ಬೆಂಗಳೂರು (ನ.14):  ‘ಬಿಟ್‌ ಕಾಯಿನ್‌ ಪ್ರಕರಣದ (Bitcoin scam) ಬಗ್ಗೆ ತನಿಖೆ ನಡೆಯುತ್ತಿದೆ. ದೇಶದಲ್ಲಿ ಕರ್ನಾಟಕ ಪೊಲೀಸರ (karnataka police) ಬಗ್ಗೆ ದೊಡ್ಡ ಗೌರವ ಇದೆ. ರಾಜಕಾರಣಿಗಳು ಅದಕ್ಕೆ ಅಪಮಾನ ಮಾಡಬಾರದು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತೀಕ್ಷ್ಣವಾಗಿ ಹೇಳಿದ್ದಾರೆ.

"

ಶನಿವಾರ ರಾತ್ರಿ ಸರ್ಕಾರದ ಪರವಾಗಿ ಪ್ರತಿಪಕ್ಷ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep surjewala) ಅವರ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಸುಧಾಕರ್‌, ದೊಡ್ಡ ಸುಳ್ಳಿನ ಕಂತೆಗಳನ್ನು ಹೇಗಾದರೂ ಮಾಡಿ ನಿಜವಾಗುವಂತೆ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರವು (karnataka Govt) ಪ್ರಕರಣದಲ್ಲಿ ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಯಾವುದೇ ಬಿಟ್‌ ಕಾಯಿನ್‌ ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯವನ್ನು ರಾಜಕೀಯ (politics) ನೆಲೆಗಟ್ಟಿನ ಮೇಲೆ ಹೋರಾಟ ನಡೆಸಬೇಕು. ಯಾವುದೇ ಕಾರಣಕ್ಕೂ ಯಾರ ಚಾರಿತ್ರ್ಯವನ್ನೂ ವಧೆ ಮಾಡಬಾರದು. ಅದು ಅಪರಾಧ. ಪಾರದರ್ಶಕವಾಗಿ ತನಿಖೆ ನಡೆಸಿ ಗುಣಮಟ್ಟದ ಸರ್ಕಾರ ನಿಭಾಯಿಸಲಾಗುತ್ತಿದೆ. ಜನಸಾಮಾನ್ಯರು ಮುಖ್ಯಮಂತ್ರಿಯಾಗಿದ್ದಕ್ಕೆ ಕಾಂಗ್ರೆಸ್‌ಗೆ (Congress) ಹೊಟ್ಟೆಕಿಚ್ಚು. ಬಿಳಿ ಶರ್ಟ್‌ ಮೇಲೆ ಇಂಕ್‌ ಹಾಕಬೇಕಾ? ಇಂತಹ ವ್ಯರ್ಥ ಪ್ರಯತ್ನ ನಡೆಯುವುದಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎನ್ನುತ್ತೇವೆ. ಅದನ್ನು ನೋಡಿಕೊಳ್ಳದಿದ್ದರೆ ಏನು ಮಾಡಲಾಗುತ್ತದೆ. ಇಲಿಯನ್ನು ಹೆಗ್ಗಣ ಮಾಡುತ್ತಿದ್ದಾರೆ. ಏನು ಇಲ್ಲದಿದ್ದರೂ ಎಲ್ಲವೂ ಇದೆ ಎಂದು ಮಾಡಲು ಹೊರಟಿದ್ದಾರೆ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಶ್ರೀಕಿ ಹೇಗೆ ಬಲೆಗೆ ಸಿಕ್ಕ, ಬಲೆಗೆ ಹಾಕಿದವರು ಯಾರು? ಕಾಂಗ್ರೆಸ್‌ ಸರ್ಕಾರ ಬಂಧಿಸಿತ್ತಾ? ನಮ್ಮ ಮುಖ್ಯಮಂತ್ರಿಗಳು ಗೃಹ ಸಚಿವರಾಗಿದ್ದ ವೇಳೆ ಮಾದಕ ವಸ್ತುಗಳ ವಿರುದ್ಧ ಆಂದೋಲನ ಕೈಗೊಂಡಿದ್ದರು. ಈ ವೇಳೆ ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದರೋ ಯಾರನ್ನೂ ಸಹ ಸರ್ಕಾರ ಬಿಟ್ಟಿಲ್ಲ. ವಿದ್ಯಾರ್ಥಿಗಳು (Students), ರಾಜಕಾರಣಿಗಳ ಸಹೋದರರು, ಮಕ್ಕಳು, ಸೆಲೆಬ್ರಿಟಿಗಳು ಯಾರೇ ಇದ್ದರೂ ದೊಡ್ಡ ಮಟ್ಟದ ತನಿಖೆ ನಡೆಸಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗಿದೆ. ಈಗ ಆಪಾದನೆ ಮಾಡುವವರು ಯಾವುದೇ ತನಿಖೆ ಕೈಗೊಂಡಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ತನಿಖೆ ಕೈಗೊಂಡಾಗಲೇ ಆರೋಪಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ತನಿಖೆ ಮಾಡಲು ಪ್ರಾರಂಭಿಸಿದಾಗ ಒಂದೊಂದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ಶ್ರೀಕಿ ಮಾದಕ ವಸ್ತುಗಳ ವ್ಯಸನಿಯಾಗಿದ್ದ. ಆತನೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆ ಸಂದರ್ಭದಲ್ಲಿಯೇ ಬಿಟ್‌ಕಾಯಿನ್‌ ಎಕ್ಸ್‌ಚೆಂಜ್‌ ಹ್ಯಾಕ್‌ ಬಗ್ಗೆ ಹೇಳಿಕೆ ನೀಡಿದ್ದ ಎಂದು ತಿಳಿಸಿದರು.

ಕಾಂಗ್ರೆಸ್‌ ಮಾದಕ ವಸ್ತುಗಳ ವ್ಯಸನಿಯ ಮಾತುಗಳಿಗೆ ಇಷ್ಟೆಲ್ಲಾ ಪ್ರಾಮುಖ್ಯತೆ ನೀಡುತ್ತಿರುವುದು ಆಶ್ಚರ್ಯ ತಂದಿದೆ. ಆತನ ಚರಿತ್ರೆ ತಿಳಿದುಕೊಂಡರೆ ಅಪರಾಧದ ಇತಿಹಾಸವೇ ಹೇಳುತ್ತದೆ. ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ನಲ್ಲಿ ಹ್ಯಾಕ್‌ ಅಕ್ರಮ ಎಸಗಿದ್ದಾನೆ. ಆತ ಮಾಡಿರುವ ಅವ್ಯವಹಾರದ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸುಧಾಕರ್‌ ಹೇಳಿದರು.

ಆರೊಪ ಬಾಲಿಶತನದ್ದು :  ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ 100 ದಿನ ಆಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ. ಇದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ವಿರೋಧ ಪಕ್ಷಗಳಿಗಂತೂ ಇದು ತಡೆಯಲಿಕ್ಕೆ ಆಗುತ್ತಿಲ್ಲ. ಹಾಗಾಗಿ ಸಿಎಂ ವಿರುದ್ಧ ಆಧಾರ ರಹಿತ ಬಿಟ್‌ ಕಾಯಿನ್‌ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ. ಉತ್ತರ ಕೊಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದರು.

ಬಿಟ್‌ ಕಾಯಿನ್‌ ವ್ಯವಹಾರ ಹಿಂದಿನ ಸರ್ಕಾರ ಇದ್ದಾಗಲೇ ನಡೆದಿರುವುದು ಪಾಪ ಅವರಿಗೆ ಆಗಿರಲಿಲ್ಲ ಎಂದು ವಿರೋಧಪಕ್ಷಗಳ ವಿರುದ್ಧ ವ್ಯಂಗ್ಯವಾಡಿದರು. ಬಿಟ್‌ ಕಾಯಿನ್‌ ಬಗ್ಗೆ ಏನೇನು ದಾಖಲೆ ವೆ, ಯಾರ ಯಾರ ಕಾಲದಲ್ಲಿ ಇದಾಗಿದೆ. ಬಿಟ್‌ ಕಾಯಿನ್‌ ಬಗ್ಗೆ ನಾನು ಕೂಡ ಗಮನಿಸಿದ್ದೇನೆ. ಅನೇಕರು ಅನೇಕ ರೀತಿಯ ವ್ಯಖ್ಯಾನ ಮಾಡುತ್ತಿದ್ದಾರೆ. ಇಡೀ ಆಡಳಿತ ವ್ಯವಸ್ಥೆ ಆದರಲ್ಲಿ ಭಾಗಿಯಾಗಿದೆ ಎನ್ನುವ ಅರ್ಥ ಬರುವ ರೀತಿಯಲ್ಲಿ ಆರೋಪಿಸುತ್ತಿದ್ದಾರೆ ಎಂದರು.

ದೇಶದಲ್ಲೂ ಡಿಜಿಟಲ್‌ ಕರೆನ್ಸಿ ಬರಲಿದೆ

ಇದು ಅತ್ಯಂತ ಬಾಲಿಶತನದ ಅಪಾದನೆ ಎಂದು ಸಚಿವ ಸುಧಾಕರ್‌ ಗರಂ ಆದರು. ಯಾವುದೇ ರೀತಿಯ ಸಾಬೂಬು, ಯಾವುದೇ ಸಾಕ್ಷಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ಬಿಟ್‌ ಕಾಯಿನ್‌ ರೀತಿಯಲ್ಲಿ ಸುಮಾರು 7000 ಸಾವಿರ ಕರೆನ್ಸಿ ವಿಶ್ವದಲ್ಲಿವೆ. ವಿಶ್ವದಲ್ಲಿ ಒಂದೇ ದೇಶ ಮಾತ್ರ ಇದನ್ನು ಅಧಿಕೃತಗೊಳಿಸಿದೆ. ಹಾಗಂತ ಬೇರೆ ದೇಶಗಳಲ್ಲಿ ಇದು ಚಲಾವಣೆ ಆಗುತ್ತಿಲ್ಲ ಅಂತ ಹೇಳಕ್ಕೆ ಹೋಗುವುದಿಲ್ಲ. ಭಾರತ ಸರ್ಕಾರ ಕೂಡ ಭವಿಷ್ಯ ಇಷ್ಟರಲ್ಲಿಯೆ ಡಿಜಿಟಲ್‌ ಕರೆನ್ಸಿಗೆ (ಬಿಟ್‌ ಕಾಯಿನ್‌) ಆರ್‌ಬಿಐ ಗ್ರೌಂಡ್‌ ಕರೆನ್ಸಿ ತರುತ್ತಿದೆ ಎಂದರು.

ಚೀನಾದಲ್ಲಿ ಡಿಜಿಟಲ್‌ ಕರೆನ್ಸಿ ತರುವ ಪ್ರಯತ್ನ ಮಾಡಲಾಗುತ್ಯತಿದೆ. ಅದು ಮಾಡಿದ ಮೇಲೆ ಎಲ್ಲವೂ ಅಧಿಕೃತವಾಗಲಿದೆ. ಯಾರು ಇದನ್ನು ಹ್ಯಾಕ್‌ ಮಾಡಿದ್ದಾರೆ. ಹ್ಯಾಕ್‌ ಮಾಡಿರುವ ಕರೆನ್ಸಿ ಯಾರು ಬಳಕೆ ಮಾಡಿದ್ದಾರೆ. ಇದೆಲ್ಲಾ ಬೆಳಕಿಗೆ ಬರಲಿ. ನಾವು ಕೂಡ ಅದನ್ನು ಎಲ್ಲ ರೀತಿಯಲ್ಲಿ ತನಿಖೆ ನಡೆಸಲು ಸಿದ್ದರಿದ್ದೇವೆ. ತನಿಖೆಗೆ ಆದೇಶಿಸಿದ್ದೇ ನಮ್ಮ ಸರ್ಕಾರ. ಇದು ನಡೆದಿದ್ದು ಹಿಂದಿನ ಸರ್ಕಾರದಲ್ಲಿ, ಅವರಿಗೆ ಪಾಪ ಏನು ಗೊತ್ತಿಲ್ಲ. ತನಿಖೆಗೆ ಆದೇಶಿಸಿದ ಸರ್ಕಾರದ ಮೇಲೆ ಸಂದೇಶ ವ್ಯಕ್ತಪಡಿಸುತ್ತಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದ ಸಚಿವ ಸುಧಾಕರ್‌, ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.

Follow Us:
Download App:
  • android
  • ios