Asianet Suvarna News Asianet Suvarna News

Bitcoin scam : ಸುಪ್ರೀಂ ನೇತೃತ್ವದ ಎಸ್‌ಐಟಿ ತನಿಖೆಗೆ ಕಾಂಗ್ರೆಸ್‌ ಆಗ್ರಹ

  • ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್‌ ಹಗರಣ
  •  ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಹಗರಣ
Bitcoin scam Congress Demands Investigation Under Supreme Court snr
Author
Bengaluru, First Published Nov 14, 2021, 8:05 AM IST

 ನವದೆಹಲಿ (ನ.14):  ರಾಜ್ಯ ರಾಜಕೀಯದಲ್ಲಿ (politics) ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್‌ (Bitcoin) ಹಗರಣವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ. ಸ್ವತಂತ್ರ ಭಾರತದ (India) 75 ವರ್ಷಗಳ ಇತಿಹಾಸದಲ್ಲೇ (History) ಇದೊಂದು ಬಹುದೊಡ್ಡ ಹಗರಣವಾಗಿದ್ದು (Scam), ಈ ಕುರಿತು ಸುಪ್ರೀಂ ಕೋರ್ಟ್‌ (Supreme court) ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಎಸ್‌ಐಟಿ (SIT) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ (Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep surjewala) ಆಗ್ರಹಿಸಿದ್ದಾರೆ.

"

ನವದೆಹಲಿಯಲ್ಲಿ(Delhi)  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಟ್‌ ಕಾಯಿನ್‌ (bitcoin) ಹಗರಣಕ್ಕೆ ಸಂಬಂಧಿಸಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಕರ್ನಾಟಕದಲ್ಲಿ ಭಾರತದ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣ ಬೆಳಕಿಗೆ ಬಂದಿದೆ. ಇದೊಂದು ಅಂತಾರಾಷ್ಟ್ರೀಯ ಹಗರಣ. ಈ ಹಗರಣದ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ರಾಜ್ಯ ಬಿಜೆಪಿ (bJp) ಸರ್ಕಾರವು ಅದನ್ನು ಮುಚ್ಚಿಹಾಕುವ ಕಾರ್ಯಾಚರಣೆಗಿಳಿದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಇದು ಕೇವಲ ಅಕ್ರಮ ಹಣ (Money) ವರ್ಗಾವಣೆಯ ಪ್ರಕರಣವಷ್ಟೇ ಅಲ್ಲ, ಅದರ ಜತೆಗೆ ಅಂತಾರಾಷ್ಟ್ರೀಯ ಅಪರಾಧವೂ ಹೌದು. ಈ ಕುರಿತು ಇ.ಡಿ(ಜಾರಿ ನಿರ್ದೇಶನಾಲಯ) ಹಾಗೂ ಕರ್ನಾಟಕ ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಲಿದ್ದಾರೆಂಬ ವಿಶ್ವಾಸ ಇಲ್ಲ. ಹೀಗಾಗಿ ಈ ಹಗರಣದ ಹಿಂದಿನ ಸತ್ಯ ಬಯಲಿಗೆಳೆಯಲು ಎಸ್‌ಐಟಿ(ವಿಶೇಷ ತನಿಖಾ ತಂಡ) ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದ ಅವರು, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ರಚನೆಯಾಗುವ ಎಸ್‌ಐಟಿಯಲ್ಲಿ ಇಂಟರ್‌ಪೋಲ್‌, ರಿಸವ್‌ರ್‍ ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರೆ ತಜ್ಞರು ಇರಬೇಕು ಎಂದು ಹೇಳಿದರು.

ಮೋದಿಗೂ ಮುಜುಗರ:  ಇದೇ ವೇಳೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಮೌನವನ್ನೂ ಪ್ರಶ್ನಿಸಿದ ಸುರ್ಜೇವಾಲಾ ಅವರು, ಇತ್ತೀಚೆಗೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ವೇಳೆ ಅವರಿಗೆ ಅಲ್ಲಿನ ತನಿಖಾ ಸಂಸ್ಥೆಯಾದ ಎಫ್‌ಬಿಐನಿಂದ ಹಗರಣದ ಕುರಿತು ಮಾಹಿತಿ ನೀಡಲಾಗಿತ್ತು. ಈ ವೇಳೆ ಮೋದಿ ಅವರಿಗೂ ಮುಜುಗರ ಆಗಿತ್ತು. ಇದೊಂದು ಬಹುರಾಷ್ಟ್ರೀಯ ಹಗರಣವಾಗಿದ್ದು, ಈ ವಿಚಾರದಲ್ಲಿ ಸತ್ಯ ಹೊರಬರಲೇಬೇಕು ಎಂದರು.

ಈ ಹಗರಣದಲ್ಲಿ ಕಾಂಗ್ರೆಸ್‌ (Congress) ನಾಯಕರು ಭಾಗಿಯಾಗಿದ್ದರೆ ಅವರನ್ನು ನೇಣಿಗೆ ಹಾಕಬಹುದು. ಯಾರಿದ್ದರೂ ಬಿಡಬಾರದು. ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ರಾಜಕೀಯ ಪ್ರತಿಷ್ಠೆ ಕುರಿತು ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಅವರು ಪ್ರಾಮಾಣಿಕರಾಗಿದ್ದರೆ ಖುದ್ದು ಎಸ್‌ಐಟಿ ತನಿಖೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರಬರೆಯಬೇಕು ಎಂದು ಸುರ್ಜೇವಾಲ ಆಗ್ರಹಿಸಿದರು.

ಸ್ವತಃ ಪ್ರಕರಣದ ಆರೋಪಿ ಶ್ರೀಕೃಷ್ಣ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ವಿದೇಶಗಳ ಹಣಕಾಸು ಸಂಸ್ಥೆಗಳು ಸೇರಿ ಹಲವು ಭಾರತದ ಪೋರ್ಟಲ… ಹ್ಯಾಕ್‌ ಮಾಡಿರುವುದಾಗಿ ಹೇಳಿಕೆ ದಾಖಲಿಸಿದ್ದಾನೆ. ಜೊತೆಗೆ ಎಷ್ಟೆಷ್ಟುಬಿಟ್‌ಕಾಯಿನ್‌ ಕಳವು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಹೀಗಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಯಾರಿಗೂ ಹೇಳದೇ ಮುಚ್ಚಿಟ್ಟಿದೆ ಎಂದು ಆರೋಪಿಸಿದರು.

ಇದು .5,240 ಕೋಟಿ ಹಗರಣ, ಇದರ ಹಿಂದೆ ಯಾರದ್ದೋ ಕೈವಾಡ ಇದೆ. ಇ.ಡಿ. ಅವರು ಕೇಳಿದ ನಂತರ ಒಂದು ತಿಂಗಳ ಬಳಿಕ ಎಫ್‌ಐಆರ್‌ ದಾಖಲಾಗಿದೆ. ಐದು ತಿಂಗಳಾದರೂ ಪ್ರಕರಣವನ್ನು ಮುಚ್ಚಿಡಲಾಗಿದೆ ಎಂದು ಇದೇ ವೇಳೆ ಸುರ್ಜೇವಾಲ ಆರೋಪಿಸಿದರು.

ಸುರ್ಜೇವಾಲ ಆರೋಪಗಳು

1 ಆಗ ಗೃಹ ಸಚಿವರು ಈಗ ಸಿಎಂ: ಆರೋಪಿ ಶ್ರೀಕಿ ಐದು ಪ್ರಕರಣಗಳಲ್ಲಿ 100 ದಿನ ಬೆಂಗಳೂರು ಪೊಲೀಸರ ವಶದಲ್ಲಿದ್ದ. ಕಳೆದ ವರ್ಷ ನ.14, ಇದೇ ವರ್ಷ ಏ.14ರಂದು ಶ್ರೀಕೃಷ್ಣ ಬಂಧನವಾಗಿದೆ. ಆಗ ಇದೇ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದರು. ಈಗ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೂ ಈ ಪ್ರಕರಣದ ಮಾಹಿತಿಯನ್ನು ಯಾಕೆ ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಹಂಚಿಕೊಳ್ಳಲಿಲ್ಲ.

2 ಆರೋಪಿಯೇ ಒಪ್ಪಿಕೊಂಡಿದ್ದಾನೆ: ಸ್ವತಃ ಆರೋಪಿ ಶ್ರೀಕೃಷ್ಣನೇ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ವಿದೇಶಿ ಹಣಕಾಸು ಸಂಸ್ಥೆಗಳು ಹಾಗೂ ಭಾರತದ ಪೋರ್ಟಲ… ಹ್ಯಾಕ್‌ ಮಾಡಿರುವುದಾಗಿ ಹೇಳಿದ್ದಾನೆ. ಜೊತೆಗೆ ಕೆಲ ಸಂಸ್ಥೆಗಳಿಂದ ಎಷ್ಟೆಷ್ಟುಬಿಟ್‌ ಕಾಯಿನ್‌ ಕಳವು ಮಾಡಲಾಗಿದೆ ಎನ್ನುವ ಮಾಹಿತಿಯನ್ನೂ ಕೊಟ್ಟಿದ್ದಾನೆ. ಹೀಗಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಈ ಕುರಿತು ಯಾರಿಗೂ ಹೇಳದೇ ಮುಚ್ಚಿಟ್ಟಿದ್ದು ಯಾಕೆ?

3 ಇ.ಡಿ. ಕೇಳಿದ್ದಕ್ಕೆ ಮಾಹಿತಿ ಕೊಟ್ಟಿದ್ದಾರೆ: ಇ.ಡಿ.ಗೆ ಕರ್ನಾಟಕ ಸರ್ಕಾರ ಮಾಹಿತಿ ಸ್ವಯಂ ಆಗಿ ಕಳುಹಿಸಿ ಕೊಟ್ಟಿಲ್ಲ. ಬದಲಿಗೆ ಇ.ಡಿ.ಯವರು ಕೇಳಿದ ಬಳಿಕ ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ನಂತರ ಎಫ್‌ಐಆರ್‌ ದಾಖಲಿಸಿದ್ದಾರೆ.

4 ಮೋದಿ ಮೌನವಾಗಿದ್ದಾರೆ: ಮೋದಿ ಅವರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ವೇಳೆ ಅಲ್ಲಿನ ತನಿಖಾ ಸಂಸ್ಥೆಯೇ ಈ ಕುರಿತು ಮಾಹಿತಿ ನೀಡಿದೆ. ಆದರೂ ಮೋದಿ ಯಾಕೆ ಈ ವಿಚಾರದಲ್ಲಿ ಮೋದಿ ಮೌನವಹಿಸಿದ್ದಾರೆ.

5 ಇ.ಡಿ.ಯಿಂದ ನ್ಯಾಯ ಸಾಧ್ಯವಿಲ್ಲ: ಇದು .5,240 ಕೋಟಿ ಹಗರಣ, ಇ.ಡಿಯಾಗಲಿ, ಕರ್ನಾಟಕ ಪೊಲೀಸರಾಗಲಿ ಈ ಕುರಿತು ನ್ಯಾಯಸಮ್ಮತ ತನಿಖೆ ನಡೆಸುತ್ತಾರೆಂದು ನಮಗೆ ಅನಿಸುತ್ತಿಲ್ಲ.

Follow Us:
Download App:
  • android
  • ios