Asianet Suvarna News Asianet Suvarna News

Tumkur-Bangalore Fast Passenger: ಪ್ರಯಾಣಿಕರಿಂದ ರೈಲಿಗೆ ಹುಟ್ಟುಹಬ್ಬ ಆಚರಣೆ!

ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಿ ಆ.3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಿದರು.

Birthday celebration for the train by passengers at tumakuru bengaluru fast rain rav
Author
First Published Aug 3, 2023, 1:18 PM IST | Last Updated Aug 3, 2023, 1:22 PM IST

ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್,  ತುಮಕೂರು. 

ತುಮಕೂರು (ಆ.3) :  ಬೆಂಗಳೂರು ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಿ ಆ.3ಕ್ಕೆ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ನಗರ ರೈಲು ನಿಲ್ದಾಣದಲ್ಲಿ ಇಂದು ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಹುಟ್ಟು ಹಬ್ಬವನ್ನಾಚರಿಸಿ ಸಂಭ್ರಮಿಸಿದರು.

ಪ್ರತಿನಿತ್ಯ ಬೆಳಗ್ಗೆ 8.15 ಗಂಟೆಗೆ ತುಮಕೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಫಾಸ್ಟ್‌ ಪ್ಯಾಸೆಂಜರ್‌ ರೈಲು ಸಂಚಾರ ಆರಂಭವಾಗಿ 10 ವರ್ಷ ಸಂದಿರುವ ಸಂಭ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ವೇದಿಕೆಯಿಂದ ವಿಶೇಷವಾಗಿ ಆಚರಿಸಲಾಯಿತು.

Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್‌ ಖುಷ್‌

 ರೈಲನ್ನು ಬಾಳೆ ಕಂದು, ಮಾವಿನ ತೋರಣ, ಬಲೂನ್‌ ಹಾಗೂ ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ರೈಲ್ವೆ ಲೋಕೋ ಪೈಲೆಟ್‌ಗಳಿಂದ (ಚಾಲಕರು) ಕೇಕ್‌ ಕತ್ತರಿಸಿ, ನೆರೆದಿದ್ದ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು.

ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಉದ್ಯೋಗ, ವ್ಯಾಪಾರ ಮತ್ತಿತರೆ ಉದ್ದೇಶಗಳಿಗಾಗಿ ಪ್ರಯಾಣಿಸುತ್ತಾರೆ. ಬೆಳಗ್ಗೆ 8.15ಕ್ಕೆ ಹೊರಡುವ ಈ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಬಹಳಷ್ಟು ಉಪಯೋಗವಾಗಿದೆ. ನಿತ್ಯದ ಜಂಜಾಟದ ನಡುವೆ ಫಾಸ್ಟ್‌ ಪ್ಯಾಸೆಂಜರ್‌ ರೈಲಿನ ಸಂಭ್ರಮಾಚರಣೆ ಮಾಡುತ್ತಿರುವುದು ಪ್ರಯಾಣಿಕರಲ್ಲಿ ಉತ್ಸಾಹ, ಸಂತೋಷ ಉಂಟು ಮಾಡಿದೆ.

ಬೆಂಗಳೂರು-ಹೈದ್ರಾಬಾದ್‌ಗೆ ವಂದೇ ಭಾರತ್‌; ತಿಂಗಳಾಂತ್ಯದೊಳಗೆ ಸಂಚಾರ ಶುರು?

ಈ ಹಿಂದೆ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರು ರೈಲ್ವೆ ಸಚಿವರಾಗಿದ್ದಾಗ  ಈ ಫಾಸ್ಟ್‌ ಪ್ಯಾಸೆಂಜರ್‌ ರೈಲು(Fast passenger train) ಸೇವೆಯನ್ನು ಒದಗಿಸಿಕೊಟ್ಟಿದ್ದರು. ಅದರ ನೆನಪಿನ ಅಂಗವಾಗಿ ವಾರ್ಷಿಕ ಸಂಭ್ರಮಾಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಇಂದು 10ನೇ ವರ್ಷದ ಸಂಭ್ರಮಾಚರಣೆ ಆಚರಿಸಿರುವುದು ಪ್ರಯಾಣಿಕರಲ್ಲಿ ಹೊಸ ಚೈತನ್ಯ, ಹರ್ಷ, ಸಂತೋಷ ಉಂಟುಮಾಡಿದೆ.

Latest Videos
Follow Us:
Download App:
  • android
  • ios