Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್‌ ಖುಷ್‌

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗೃಹಜ್ಯೋತಿ ಗ್ಯಾರಂಟಿ ಯೋಜನೆಯಡಿ ತುಮಕೂರಿನ ಜನರು ಬೆಸ್ಕಾಂನಿಂದ ಶೂನ್ಯ ವಿದ್ಯುತ್‌ ಬಿಲ್‌ ಪಡೆದುಕೊಂಡಿದ್ದಾರೆ.

Karnataka People get first zero current bill under Gruha Jyoti scheme Customers are fully happy sat

ತುಮಕೂರು (ಆ.01): ರಾಜ್ಯದಲ್ಲಿ ಕಾಂಗ್ರಸ್‌ ಸರ್ಕಾರ ಜಾರಿಗೊಳಿಸಿದಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ (ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌) ಯೋಜನೆಯು ಜುಲೈ ತಿಂಗಳಿಂದಲೇ ಅನ್ವಯವಾಗಿದ್ದು, ಆಗಸ್ಟ್‌ನಲ್ಲಿ ಬಂದ ಕರೆಂಟ್‌ ಬಿಲ್‌ ಶೂನ್ಯ ಬಿಲ್‌ ಎಂದು ನೀಡಲಾಗಿದೆ. ಆಗಸ್ಟ್ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಶೂನ್ಯ ಬಿಲ್‌ ಇರುವುದನ್ನು ನೋಡಿದ ಗ್ರಾಹಕರಿ ಸಂತಸ ಪಟ್ಟಿದ್ದಾರೆ. ಇಲ್ಲಿದೆ ನೋಡಿ ಶೂನ್ಯ ಬಿಲ್‌ ಮಾಹಿತಿ..

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಜ್ಯೋತಿ ಯೋಜನೆಯ ಮೊದಲ ಕರೆಂಟ್‌ ಬಿಲ್‌ ಬಂದಿದ್ದು, ಶೂನ್ಯ ಬಿಲ್‌ ಕೊಡಲಾಗಿದೆ. ತುಮಕೂರು ಜಿಲ್ಲೆಯ ಜನರಿಗೆ ಸಿಕ್ತು ಝಿರೋ ಕರೆಂಟ್ ಬಿಲ್ ನೀಡಲಾಗಿದೆ. ತುಮಕೂರಿನಲ್ಲಿ ಇಂದಿನಿಂದ ಮನೆ ಮನೆಗೆ ಕರೆಂಟ್ ಬಿಲ್ ವಿತರಣೆ ಮಾಡಲಾಗುತ್ತಿದ್ದು, ಬೆಸ್ಕಾಂ ಇಲಾಖೆ ಅಧಿಕಾರಿಗಳಿಂದ ಝಿರೋ ಲೈಟ್ ಬಿಲ್ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌ ಚುನಾವಣೆ ವೇಲೆ ನೀಡಿದ್ದ ಗ್ಯಾರಂಟಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಶೂನ್ಯ ಕರೆಂಟ್ ಬಿಲ್ ಪಡೆದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. 

ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್‌ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ

ಗೃಹಜ್ಯೋತಿ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದೇನು? ಗೃಹಜ್ಯೋತಿ ಯೋಜನೆಯ ಕುರಿತು ಮಾತನಾಡಿದ ಇಂಧನ ಸಚಿವ ಕೆ.ಜೆ, ಜಾರ್ಜ್‌ ಅವರು, ಇಂದು ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಬರುತ್ತಿದೆ. ನಾವು ಚುನಾವಣೆಗೆ ಹೋಗುವ ಮೊದಲೆ ಗ್ಯಾರಂಟಿ ಕಾರ್ಡ್ ನಲ್ಲಿ ಈ ಯೋಜನೆ ಘೋಷಣೆ ಮಾಡಿದ್ದೆವು. ಅದರಂತೆ ಆ ಗ್ಯಾರಂಟಿ ಕಾರ್ಡ್ ಗೆ ನಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ಅವರು ಸಹಿ ಮಾಡಿದ್ದರು. ಅದರಂತೆ ನಾವು ಯೋಜನೆ ಜಾರಿಗೆ ತಂದಿದ್ದೇವೆ. ಕುಟೀರಾ ಜ್ಯೋತಿ, ಅಮೃತ್ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಗಳನ್ನು ಈ ಯೋಜನೆಯೊಳಗೆ ತರಲಾಯಿತು ಎಂದು ಮಾಹಿತಿ ನೀಡಿದರು.

ಉಚಿತ ವಿದ್ಯತ್‌ ಪಡೆಯುವ ಮಾನದಂಡಗಳು: ಮುಖ್ಯಮಂತ್ರಿಗಳ ಸಲಹೆ ಮೇರೆಗೆ 12 ತಿಂಗಳ ಸಾರಸರಿಯನ್ನು ತೆಗೆದುಕೊಂಡು ಪ್ರೀ ಕರೆಂಟ್ ನೀಡಿದ್ದೇವೆ. ಜುಲೈ ತಿಂಗಳಿಂದಲೇ 200 ಯುನಿಟ್ ಗೆ ನಾವು ಫ್ರೀ ನೀಡುತ್ತಿದ್ದೇವೆ. ಈ ಯೋಜನಗೆ ಅಧಿಕೃತವಾಗಿ ಔಪಚಾರಿಕವಾಗಿ ಚಾಲನೆ ನೀಡಲಾಗುತ್ತಿದೆ. ಕಲ್ಬುರ್ಗಿಯಲ್ಲಿ ಆಗಸ್ಟ್‌ 5 ರಂದು ಚಾಲನೆ ನೀಡಲಿದ್ದೇವೆ. ಈ ಕಾರ್ಯಕ್ರಮ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಮುಖ್ಯ ಮಂತ್ರಿಗಳು , ಸಚಿವರುಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಹಲವು ನ್ಯೂನತೆಗಳನ್ನು ಸರಿಪಡಿಸಿಕೊಂಡು ಹೋಗುತ್ತಿದ್ದೇವೆ. ಮುಂದೆಯೂ ಎಲ್ಲ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಯೋಜನೆ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆ: ಜೂನ್‌.25ರ ನಂತರ ನೋಂದಣಿ ಮಾಡಿದವರಿಗೆ ಫ್ರೀ ಬಿಲ್‌ ಇಲ್ಲ..!

ಈವರೆಗೆ 1.42 ಕೋಟಿ ಗ್ರಾಹಕರಿಂದ ಅರ್ಜಿ ಸಲ್ಲಿಕೆ: ರಾಜ್ಯದಲ್ಲಿ ಈವರೆಗೆ 1.42 ಕೋಟಿ ಹೆಚ್ಚು ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 200ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರು. ಅರ್ಹತೆ ಮಿತಿಯಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸಿಗಲಿದೆ. ಜುಲೈ 27 ರೊಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳು ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯುತ್ತಾರೆ. ನಂತರ ಸಲ್ಲಿಸಿದವರು ಮುಂಬರುವ ತಿಂಗಳಲ್ಲಿ ಯೋಜನೆ ಲಾಭ ಪಡೆಯಲಿದ್ದಾರೆ. ಗೃಹಜ್ಯೋತಿ ಯೋಜನೆಗೆ ಡೆಡ್ ಲೈನ್ ಇಲ್ಲ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಮತ್ತು ಅಮೃತ ಜ್ಯೋತಿ ಯೋಜನೆಯನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ 40ಯೂನಿಟ್ ಯಿಂದ 53 ಯೂನಿಟ್ ಹಾಗೂ ಶೇ‌ 10ರಷ್ಟು ಹೆಚ್ಚುವರಿ ಉಚಿತ ನೀಡಲಾಗುತ್ತದೆ. ಅಮೃತ ಜ್ಯೋತಿ ಗೆ 75 ಯೂನಿಟ್ ಶೇ 10 ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದರು. 

Karnataka People get first zero current bill under Gruha Jyoti scheme Customers are fully happy sat

Latest Videos
Follow Us:
Download App:
  • android
  • ios