ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ, ಗ್ಯಾಸ್ ಅಭಾವದ ನಡುವೆಯೇ ಭಾರತ್ ಗ್ಯಾಸ್ ಏಜೆನ್ಸಿಯ ಮುಂದೆ ಇಟ್ಟಿದ್ದ ಗೃಹ ಬಳಕೆಯ ಸಿಲಿಂಡರ್ ಕಳ್ಳತನವಾಗಿದೆ. ಮಲ್ಲಿಕಾರ್ಜುನ್ ಎಂಬುವವರು ಸಿಲಿಂಡರ್ ಪಡೆದು ಚೀಟಿ ತರಲು ಕಚೇರಿಗೆ ಹೋದಾಗ ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ಯಾಸ್ ಏಜೆನ್ಸಿ ಮುಂದೆಯೇ ಕಳ್ಳರ ಕೈಚಳ: ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಗ್ಯಾಸ್ ಸಿಲಿಂಡರ್ ಮಾಯ
ಬೀದರ್: ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ದೇಶದಲ್ಲಿ ಗ್ಯಾಸ್‌ನ ಅಭಾವ ತಲೆ ದೋರಿದ್ದು, ಇದೇ ಸಮಯದಲ್ಲಿ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಹೌದು ಒಂದೆಡೆ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಆಗದೇ ಜನ ಪರದಾಡುತ್ತಿದ್ದರೆ ಮತ್ತೊಂದೆಡೆ ಜನರಿಗೆ ಕಳ್ಳರ ಕಾಟ ಎದುರಾಗಿದೆ. ಈಗ ಗ್ಯಾಸ್ ಬುಕ್ಕಿಂಗ್ ಮಾಡೋದೆ ಒಂದು ಸಾಹಸವಾಗಿದ್ದರೆ ಅದರ ನಡುವೆ ಬುಕ್ ಆಗಿದ್ದ ಗ್ಯಾಸ್‌ನ್ನು ಇನ್ನೇನು ಗ್ಯಾಸ್ ಏಜೆನ್ಸಿಯಿಂದ ಮನೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಗ್ಯಾಸ್ ಏಜೆನ್ಸಿ ಮುಂದೆಯೇ ಕಳ್ಳರು ಕೈಚಳಕ ತೋರಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿಯ ಗೋದಾಮಿನ ಬಳಿ ಈ ಘಟನೆ ನಡೆದಿದೆ. ಗೃಹ ಬಳಕೆಯ ಗ್ಯಾಸ್ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ಭಾಲ್ಕಿ ನಿವಾಸಿ ಮಲ್ಲಿಕಾರ್ಜುನ್ ಎಂಬುವವರು ಈ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದರು. ಗ್ಯಾಸ್ ಸಿಲಿಂಡರ್ ಪಡೆದ ಬಳಿಕ ಅವರು ಅದನ್ನು ಏಜೆನ್ಸಿ ಹೊರಗೆ ಪಕ್ಕದಲ್ಲಿ ಇಟ್ಟು ಆಫೀಸ್ ಒಳಗೆ ಚೀಟಿ ತರಲು ಹೋಗಿದ್ರು, ವಾಪಸ್ ಬರುವಷ್ಟರಲ್ಲಿ ಅವರು ಬುಕ್ ಮಾಡಿದ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನಾಪತ್ತೆಯಾಗಿದೆ.
ಇದನ್ನೂ ಓದಿ: ತೋಟದಲ್ಲಿ ಕೆಲಸ ಮಾಡುವ ವೇಳೆ ಜೇನು ನೊಣಗಳ ದಾಳಿ: ಕೃಷಿಕ ಸಾವು
ಇದರಿಂದ ಕಂಗೆಟ್ಟ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿ ಸಿಲಿಂಡರ್ ಕದ್ದೊಯ್ದಿದ್ದಾರೆ ಎಂದು ಅವರು ಭಾಲ್ಕಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದು ಹೋದ ಗ್ಯಾಸ್ ಸಿಲಿಂಡರ್ ಹುಡುಕಿ ಕೊಡುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ: ಹೆಣ್ಣು ಮರಿಗಳಿಗೆ ಜನ್ಮ ನೀಡಿದ ಕೋಕಿಲಾ, ಕಾವೇರಿ


