ಬೆಂಗ್ಳೂರಲ್ಲಿ ಲೂಟಿಗಿಳಿದ ಮನೆ ಮಾಲೀಕರು, ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಅಂತಿದಾರೆ ಬಾಡಿಗೆದಾರರು!

ಕೋರೋನಾವೈರಸ್‌ ಆತಂಕ ಮುಗಿದ ಬೆನ್ನಲ್ಲಿಯೇ ಉದ್ಯಾನಗರಿ ಬೆಂಗಳೂರಿನಲ್ಲಿ ಮನೆಗಳಿಗೆ ಅಪಾರ ಬೇಡಿಕೆ ವ್ಯಕ್ತವಾಗಿದೆ. ಇದರ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿರುವ ಬೆಂಗಳೂರಿನ ಮನೆ ಮಾಲೀಕರು ಲೂಟಿಗೆ ಇಳಿದಿದ್ದಾರೆ. 

Bengaluru landlord Real estate Rent Hike tenant post in twitter san

ಬೆಂಗಳೂರು (ಏ.5): ಉದ್ಯಾನನಗರಿ ಬೆಂಗಳೂರು ಎಂದರೆ ಎಲ್ಲರಿಗೂ ಆಕರ್ಷಣೆ. ಬಹುಶಃ ದೇಶದ ಯಾವುದೇ ರಾಜ್ಯದ ರಾಜಧಾನಿಯಲ್ಲಿ ಇರದೇ ಇರುವ ನೆಮ್ಮದಿಯ ವಾತಾವರಣ ಬೆಂಗಳೂರಿನಲ್ಲಿದೆ. ಅದರೊಂದಿಗೆ ಲೆಕ್ಕವಿಲ್ಲದಷ್ಟು ಅವಕಾಶಗಳು, ಟೆಕ್‌ ಸಿಟಿ ಬೆಂಗಳೂರಿನ ಬೆರಗನ್ನು ಇನ್ನಷ್ಟು ಇಮ್ಮಡಿ ಮಾಡಿದೆ. ಆದರೆ, ಬೆಂಗಳೂರಿನಲ್ಲಿ ಒಂದು ಮನೆ ಮಾಡೋದು ಅಷ್ಟು ಸುಲಭವಿಲ್ಲ. ಮನೆ ಮಾಡಿದ್ರೂ ಮನೆ ಮಾಲೀಕರ ಕಿರುಕುಳ ತಡೆದುಕೊಂಡು ಇರೋದು ಇನ್ನೊಂದು ಸಾಹಸ. ಇಡಿ ಬೆಂಗಳೂರಿನ ಮನೆ ಮಾಲೀಕರಿಗೆ ನಿಜವಾದ ಸಮಸ್ಯೆ ಎದುರಾಗಿದ್ದು ಕೊರೋನಾ ಕಾಲದಲ್ಲಿ. ಊರಿಂದೂರಿಗೆ ಕೆಲಸ ಅರಸಿಕೊಂಡು ಬಂದಿದ್ದ ಎಲ್ಲರೂ, ಒಂದೇ ಕ್ಷಣಕ್ಕೆ ಎಲ್ಲರೂ ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ಸ್ವಂತ ಊರಿಗೆ ಮರಳಿದ್ದ ಹೆಚ್ಚಿನವರು ಮತ್ತೆ ನಗರಕ್ಕೆ ವಾಪಸಾಗುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳುವ ಯೋಚನೆಯಲ್ಲಿರುವ ಬೆಂಗಳೂರಿನ ಮನೆ ಮಾಲೀಕರು ಅಕ್ಷರಶಃ ಲೂಟಿಗೆ ಇಳಿದಿದ್ದಾರೆ. ಮನೆಯಲ್ಲಿ ಈಗಾಗಲೇ ಬಾಡಿಗೆಗೆ ಇರುವವರ ಒಪ್ಪಂದವನ್ನು ಹೇಳದೇ ಕೇಳದೇ ರದ್ದು ಮಾಡಿ ಅವರನ್ನು ಮನೆಗಳಿಂದ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ಆಪ್‌ರೈಟ್‌ನ ಸಾಫ್ಟ್‌ವೇರ್‌ ಇಂಜಿನಿಯರ್‌ ಖುಷ್ಬೂ ವರ್ಮ ಎನ್ನುವವರು ಬರೆದುಕೊಂಡಿದ್ದಾರೆ.

'ನನ್ನ ಬೆಂಗಳೂರಿನ ಮಾಲೀಕರು ನಮ್ಮ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಯಾವುದೇ ಎಚ್ಚರಿಕೆ ನೀಡದೆ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಈ ಕುರಿತು ನಾನು ವಿವರಣೆ ಕೇಳಿದಾಗ ಅವರು ‘ನಿಮಗೆ ಇಷ್ಟವಿಲ್ಲದಿದ್ದರೆ, ನೀವು ಮನೆ ಬಿಟ್ಟು ಹೊಸ ಮನೆ ಹುಡುಕಬಹುದು’ ಎಂದು ಸರಳವಾಗಿ ಹೇಳಿದರು' ಎಂದು ಬರೆದುಕೊಂಡಿದ್ದಾರೆ. ಅವರ ಈ ಟ್ವೀಟ್‌ಗೆ 4.5 ಲಕ್ಷ ವೀವ್ಸ್‌ಗಳು ಬಂದಿದ್ದು, 115 ಮಂದಿ ರೀಟ್ವೀಟ್‌ ಮಾಡಿದ್ದಾರೆ. 63 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದು, ಅಂದಾಜು 3 ಸಾವಿರ ಮಂದಿ ಲೈಕ್‌ ಒತ್ತಿದ್ದಾರೆ.

' ನನ್ನ ಈ ಟ್ವೀಟ್‌ಗೆ ಬಂದಿರುವ ಕಾಮೆಂಟ್‌ಗಳನ್ನು ಹಾಗೂ ಅವರ ಸನಿಸಿಕೆಯನ್ನು ಪರಿಗಣಿಸಿದರೆ, ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಪರಿಸ್ಥಿತಿಯ ಬಗ್ಗೆಯೂ ತಿಳಿಯಲಿದೆ. ಕೇವಲ ಒಂದು ವರ್ಷದಲ್ಲಿ ನನ್ನ ಪ್ರದೇಶದಲ್ಲಿ ಬಾಡಿಗೆ 100% ಹೆಚ್ಚಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ. ಇತ್ತೀಚೆಗೆ ನನ್ನ ಸ್ನೇಹಿತೆಯೊಬ್ಬರು ಅವರಿದ್ದ ಅಪಾರ್ಟ್‌ಮೆಂಟ್‌ಅನ್ನು ಖಾಲಿ ಮಾಡಿದ್ದನ್ನು ಈ ಹಂತದಲ್ಲಿ ನೆನಪಿಸಿಕೊಳ್ಳಬೇಕು ಎಂದಿರುವ ಖುಷ್ಬೂ, ಮನೆಯಲ್ಲಿನ ನೂರಾರು ಸಣ್ಣಪುಟ್ಟ ದೋಷಗಳನ್ನು ತೋರಿಸಿದ ಮನೆಮಾಲೀಕ ಭಾರಿ ಮೊತ್ತದ ಅಡ್ವಾನ್ಸ್‌ ಹಣವನ್ನು ಮರುಪಾವತಿ ಮಾಡಲು ನಿರಾಕರಿಸಿದ್ದರು ಎಂದು ಬರೆದಿದ್ದಾರೆ.

ನಿಶಾಂತ್‌ ಶರ್ಮ ಎನ್ನುವ ವ್ಯಕ್ತಿ ಕೂಡ ಇದೇ ರೀತಿಯ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. 'ಕಳೆದ ತಿಂಗಳು ನನ್ನ ಮನೆಯ ಮಾಲೀಕ ಕೂಡ ಇದನ್ನೇ ಮಾಡಿದರು. ಬೆಂಗಳೂರಿನಲ್ಲಿ ಮನೆಗಳುಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ತಾವು ಫ್ಲ್ಯಾಟ್‌ ಹುಡುಕುತ್ತಿರುವುದಾಗಿ ತಿಳಿಸುತ್ತಿದ್ದಾರೆ' ಎಂದು ಬರೆದಿದ್ದಾರೆ.

'ಬಹುಶಃ ಅವರು ತಮ್ಮ ಮನೆಗೆ ಹೆಚ್ಚು ಪಾವತಿಸಲು ಉತ್ಸುಕರಾಗಿರುವ ಹೊಸ ಬಾಡಿಗೆದಾರರನ್ನು ಕಂಡುಕೊಂಡಿದ್ದಾರೆ. ಆದ್ದರಿಂದ ಅವರು ಇಂಥ ನಾಟಕ ಮಾಡಿದ್ದಾರೆ. ಬೆಂಗಳೂರು ಇದಕ್ಕೆ ಹೆಸರುವಾಸಿ' ಎಂದು ಇನ್ನೊಬ್ಬರು ಖುಷ್ಭೂ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನೀಗಲೂ ಕೂಡ ಬೆಂಗಳೂರಿನಲ್ಲಿ ಮೂರು ಜನರು ಹಂಚಿಕೊಳ್ಳಲು ಪಿಜಿಯಲ್ಲಿ ಉಳಿದುಕೊಂಡಿದ್ದೇನೆ ಎಂದು ಒಬ್ಬರು ಬರೆದುಕೊಂಡಿದ್ದು, ಅದಕ್ಕೆ ಖುಷ್ಭೂ ಮೂರು ಜನರು ಒಂದೇ ರೂಮ್‌ನಲ್ಲಿರುವ ಬಹಳ ಕಷ್ಟ ಎಂದಿದ್ದಾರೆ.

ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್​ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್

ಕೆಲವು ತಿಂಗಳ ಹಿಂದೆ ನಾನೂ ಕೂಡ ಇದೇ ಸಮಸ್ಯೆ ಎದುರಿಸಿದ್ದೆ. ನನ್ನ ಮನೆ ಮಾಲೀಕ ಯಾವುದೇ ಸೂಚನೆ ನೀಡದೇ ಬಾಡಿಗೆಯನ್ನು ಶೇ.50ರಷ್ಟು ಏರಿಕೆ ಮಾಡಿದ್ದ. ಆದರೆ, ಮನೆಯನ್ನು ಖಾಲಿ ಮಾಡಿದ ನಾನು ಹೊಸ ಮನೆ ಹುಡುಕಿಕೊಂಡೆ. ಆದರೆ, ಹಿಂದಿದ್ದ ಮನೆಗೆ ನೀಡುತ್ತಿದ್ದ ಬಾಡಿಗೆಗಿಂತ ಶೇ. 80ರಷ್ಟು ಹೆಚ್ಚಿನ ಬಾಡಿಗೆ ಈಗ ನೀಡುತ್ತಿದ್ದೇನೆ' ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖುಷ್ಭೂ, ಇದೂ ಕೂಡ ಸಮಸ್ಯೆಯೇ, ಹೊಸ ಮನೆಗಳಿಗೂ ದುಬಾರಿ ಬಾಡಿಗೆ ಹೇಳಲಾಗುತ್ತಿದೆ ಎಂದಿದ್ದಾರೆ.

ಎಲ್ಲರಿಗೂ ಶುರು ಆಯ್ತು ಆಫೀಸಿನಿಂದ ಕೆಲಸ : ಬೆಂಗಳೂರಿನಲ್ಲಿ ಮನೆ ಬಾಡಿಗೆ ಶೇ. 15-30 ಹೆಚ್ಚಳ

ಕಳೆದ ವರ್ಷ ನನಗೆ ಕೂಡ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತ. ಮನೆ ಮಾಲೀಕ ದಿಢೀರನೇ ಮನೆ ಬಾಡಿಗೆಯನ್ನು ಶೇ. 20ರಷ್ಟು ಏರಿಕೆ ಮಾಡಿದ್ದರು ಎಂದು ಇನ್ನೊಬ್ಬರು ಹೇಳಿದ್ದಾರೆ. 'ನನ್ನ ಮನೆ ಮಾಲೀಕರು ಬಾಡಿಗೆ ಒಪ್ಪಂದವನ್ನು ನಿರ್ಲಕ್ಷಿಸಿ 45 ಸಾವಿರದಿಂದ 70 ಸಾವಿರಕ್ಕೆ (ಸೆಮಿ ಸುಸಜ್ಜಿತ 3bhk) ಗೆ ಬಾಡಿಗೆಯನ್ನು ಹೆಚ್ಚಿಸಿದ್ದಾರೆ. ಕೊನೆಗೆ 60 ಸಾವಿರಕ್ಕೆ ಒಪ್ಪಿದ್ದಾರೆ. ಆದರೆ, 3 ಬಿಎಚ್‌ಕೆ ಮನೆಗೆ ಇದು ತುಂಬಾ ದುಬಾರಿ. ಇಷ್ಟು ಹಣ ಕೊಡದಿದ್ದರೆ ಜಾಗ ಖಾಲಿ ಮಾಡಬಹುದು ಎಂದು ನೇರವಾಗಿಯೇ ಅವರು ಹೇಳುತ್ತಾರೆ ಎಂದು ಬರೆದಿದ್ದಾರೆ.' ಬಾಡಿಗೆಯನ್ನು ನಿಯಂತ್ರಿಸಲು ಮತ್ತು ಈ ಬಾಡಿಗೆಯ ಮೂಲಕ ಪ್ರತಿಯೊಬ್ಬ ಮನೆ ಮಾಲೀಕರ ಆದಾಯವನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಕಾನೂನನ್ನು ತರಬೇಕಾಗಿದೆ, ಇದು ಪ್ರತಿಯೊಬ್ಬರ ಹಿತಾಸಕ್ತಿಯನ್ನೂ ಕಾಪಾಡುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ.

Latest Videos
Follow Us:
Download App:
  • android
  • ios