ಎಲ್ಲರಿಗೂ ಶುರು ಆಯ್ತು ಆಫೀಸಿನಿಂದ ಕೆಲಸ : ಬೆಂಗಳೂರಿನಲ್ಲಿ ಮನೆ ಬಾಡಿಗೆ ಶೇ. 15-30 ಹೆಚ್ಚಳ
ಎಂಎನ್‌ಸಿ ಹಾಗೂ ಐಟಿ ಸಂಸ್ಥೆಗಳು ವರ್ಕ್ ಫ್ರಂ ಹೋಮ್‌ನಿಂದ ವರ್ಕ್ ಫ್ರಂ ಆಫೀಸ್ ಸ್ಥಿತಿಗೆ ಮರಳಿವೆ. ಇದರಿಂದ ಹೊಸ ಸಮಸ್ಯೆ ಶುರುವಾಗಿದೆ. ಮನೆ ಬಾಡಿಗೆ ಸಾಕಷ್ಟು ದುಬಾರಿಯಾಗಿದ್ದು ಕೈಗೆಟುಕುವ ದರದಲ್ಲಿ ಅನೇಕರಿಗೆ ಮನೆ ಸಿಗುತ್ತಿಲ್ಲ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ತನ್ನ ಕೆಲಸದ ಸ್ಥಳಕ್ಕೆ ಮರಳಿ ಬರುವಂತೆ ಸೂಚಿಸಿರುವುದರಿಂದ ಬಹುತೇಕ ವರ್ಕ್ ಫ್ರಂ ಹೋಮ್ ಪ್ರಕ್ರಿಯೆ ಮುಕ್ತಾಯವಾಗಿದೆ. ಬಹುತೇಕರು ಕಚೇರಿಗೆ ಮರಳುತ್ತಿದ್ದಾರೆ. ಇದರಿಂದ ಬೆಂಗಳೂರು ಮಹಾನಗರಿಯಲ್ಲಿ ಮನೆ ಬಾಡಿಗೆ ದರ ಗಗನಕ್ಕೇರಿದೆ. ಅನೇಕ ಎಂಎನ್‌ಸಿ ಹಾಗೂ ಐಟಿ ಸಂಸ್ಥೆಗಳು ವರ್ಕ್ ಫ್ರಂ ಹೋಮ್‌ನಿಂದ ವರ್ಕ್ ಫ್ರಂ ಆಫೀಸ್ ಸ್ಥಿತಿಗೆ ಮರಳಿವೆ. ಇದರಿಂದ ಹೊಸ ಸಮಸ್ಯೆ ಶುರುವಾಗಿದೆ. ಮನೆ ಬಾಡಿಗೆ ಸಾಕಷ್ಟು ದುಬಾರಿಯಾಗಿದ್ದು ಕೈಗೆಟುಕುವ ದರದಲ್ಲಿ ಅನೇಕರಿಗೆ ಮನೆ ಸಿಗುತ್ತಿಲ್ಲ.
ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳ ತಜ್ಞರ ಪ್ರಕಾರ, ಮನೆ ಬಾಡಿಗೆ ಈ ವರ್ಷ 15ರಿಂದ 30 ಶೇಕಡಾವರೆಗೆ ಹೆಚ್ಚಾಗಿದೆ. ಏರಿಕೆಯ ನಡುವೆಯೂ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೆಲವು ಬಾಡಿಗೆದಾರರು ಸಣ್ಣ ಪುಟ್ಟ ಜಾಗವನ್ನು ಕೂಡ ಬಾಡಿಗೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಅಸಮರ್ಪಕವಾದ ಒಪ್ಪಂದಗಳನ್ನು ರದ್ದುಗೊಳಿಸಿ ಹೊಸ ಬಾಡಿಗೆದಾರರನ್ನು ಆಹ್ವಾನಿಸುತ್ತಿದ್ದಾರೆ, ಕಳೆದ ಸೆಪ್ಟೆಂಬರ್‌ನಲ್ಲಿ ನಮಗೆ ವಾರಕ್ಕೆ ಮೂರು ದಿವಸ ಕಚೇರಿಗೆ ಬರುವಂತೆ ಕಂಪನಿ ಹೇಳಿದೆ. ಅದಕ್ಕೂ ಮೊದಲೂ ಸಂಸ್ಥೆಯ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು 35 ವರ್ಷದ ಐಟಿ ಉದ್ಯೋಗಿಸುಜೋಯ್ ಸೇತ್ ಎಂಬುವವರು ಹೇಳಿಕೊಂಡಿದ್ದಾರೆ. ಅವರ ಕಚೇರಿ ಶಿಫ್ಟ್ ಆಗಿರುವುದರಿಂದ ಅವರು ಕೂಡ ಮಾರತಹಳ್ಳಿಯಿಂದ ದೊಮ್ಮಲೂರಿಗೆ ಶಿಫ್ಟ್ ಆಗಲು ಬಯಸಿದ್ದಾರೆ.
ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!
ಆದರೆ ಬೇಸರದ ವಿಚಾರ ಎಂದರೆ, ದೊಮ್ಮಲೂರು ಅಥವಾ ಮುರುಗೇಶ್ ಪಾಳ್ಯದಲ್ಲಿ 600-900 ಚದರ ಅಡಿಯ 2 ಬಿಹೆಚ್‌ಕೆ ಮನೆಯ ಬಾಡಿಗೆ ದರ ಈಗ 30 ಸಾವಿರ ಆಗಿದೆ. 2020ರಲ್ಲಿ ಇದೇ ಮನೆಯ ಬಾಡಿಗೆ ದರ 15 ರಿಂದ 20 ಸಾವಿರ ಇತ್ತು. ಅವರಿಗೆ ಆಫೀಸ್‌ಗೆ ತೆರಳಲು ಒಂದು ಗಂಟೆ ಸಮಯ ಹಿಡಿಯುತ್ತಿದೆ. ಹೀಗಾಗಿ 2022ರ ಮಧ್ಯದಿಂದಲೇ ಅವರು ಮನೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ವೇಳೆ ಮನೆ ಬಾಡಿಗೆ ಗಗನಕ್ಕೇರಿರುವುದು ಅವರ ಅರಿವಿಗೆ ಬಂತು. ವರ್ಗಾವಣೆಯಾಗಬಹುದಾದ ಕೆಲಸವಾದರಿಂದ ಅವರು ಇಲ್ಲಿ ಭೂಮಿ ಖರೀದಿಸುವಂತೆಯೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ ಬಾಡಿಗೆಯಂತೆಯೇ ಸಮಾಧಾನದ ವಿಚಾರವೆಂದರೆ ಬಾಡಿಗೆಯಂತೆಯೇ ಭದ್ರತಾ ಠೇವಣಿಯನ್ನು ಕೂಡ ಬಾಡಿಗೆದಾರರು ಹೆಚ್ಚು ಮಾಡಿಲ್ಲ. ಈ ಹಿಂದೆ ಹತ್ತು ತಿಂಗಳ ಬಾಡಿಗೆಯನ್ನು ಭದ್ರತಾ ಠೇವಣಿಯಾಗಿ ನೀಡಬೇಕಿತ್ತು. ಆದರೆ ಈಗ ಆರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಬಾಡಿಗೆಯನ್ನು ಅಡ್ವಾನ್ಸ್ (ಭದ್ರತಾ ಠೇವಣಿ) ಆಗಿ ಪಡೆಯಲಾಗುತ್ತಿದೆ ಎಂದು ಹೇಳುತ್ತಾರೆ ಮನೆ ಬಾಡಿಗೆ ದಳ್ಳಾಳ್ಳಿಯೊಬ್ಬರು.
ರಿಯಲ್ ಎಸ್ಟೇಟ್ ವಲಯಕ್ಕೆ ಶುಭಸುದ್ದಿ;ಸ್ವಂತ ಮನೆ ಖರೀದಿಗೆ ಹೆಚ್ಚಿದ ಭಾರತೀಯರ ಒಲವು!
ಟೆಕ್ ಕಾರಿಡಾರ್ ಎನಿಸಿರುವ ಬನ್ನೇರ್‌ಘಟ್ಟ ರೋಡ್, ಐಟಿಪಿಎಲ್, ಸರ್ಜಾಪುರ, ಸಿವಿ ರಾಮನ್ ನಗರ, ಮಾರತಹಳ್ಳಿ, ಹೆಚ್‌ಎಸ್‌ಆರ್ ಲೇಔಟ್ ಮುಂತಾದ ಪ್ರದೇಶಗಳಲ್ಲಿ ಶೇಕಡಾ 15ರಷ್ಟು ಬಾಡಿಗೆ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ ರಿಯಲ್ ಎಸ್ಟೇಟ್ ಕನ್ಸ್‌ಲ್ಟೆಂಟ್ ಮೋಹನ್ ಎಂ. ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ, ಹೆಚ್‌ಎಸ್‌ಆರ್ ಲೇಔಟ್, ಮಾರತಹಳ್ಳಿ, ಕೋರಮಂಗಲ, ಇಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ, ಮಲ್ಲೇಶ್ವರಂ, ಬೆಳಂದೂರು, ಜೆಪಿ ನಗರ 7ನೇ ಹಂತ, ಯಲಹಂಕ ಹಾಗೂ ಬನ್ನೇರುಘಟ್ಟ ಪ್ರಮುಖ ರಸ್ತೆ ಅತೀಹೆಚ್ಚು ಜನರು ಬಾಡಿಗೆಗಾಗಿ ಮನೆ ಹುಡುಕುತ್ತಿರುವ ಸ್ಥಳಗಳಾಗಿವೆ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಪಡೆಯುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಕೈಗೆಟುಕುವ ಬಾಡಿಗೆಯ ಮನೆ ಪಡೆಯುವುದಾಗಿದೆ.