'ಹಿಂದೂ-ಹಿಂದುತ್ವ ಅಂದಿದ್ದಕ್ಕೆ ಈ ಸ್ಥಿತಿ: ಹಿಂದೂ, ಮುಸ್ಲಿಂ ಯಾರೇ ಆಗಿರಿ ಅಪ್ಪ, ಅಮ್ಮನಿಗೆ ಒಳ್ಳೆ ಮಕ್ಕಳಾಗಿರಿ'
* ಎಲ್ಲ ಅಣ್ಣ, ತಮ್ಮಂದಿರಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ
* ಹತ್ಯೆಗೀಡಾದ ಹರ್ಷನ ಸೋದರಿ ಮನದಾಳದ ಮಾತು
* ನನ್ನ ತಮ್ಮ ಯಾರೊಬ್ಬರಿಗೂ ಕೆಟ್ಟದ್ದು ಮಾಡಿರಲಿಲ್ಲ-ಅಶ್ವಿನಿ
ಶಿವಮೊಗ್ಗ(ಫೆ.23): ‘ಎಲ್ಲ ನನ್ನ ಅಣ್ಣ-ತಮ್ಮಂದಿರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನೀವು ಹಿಂದುವೇ(Hindu) ಆಗಿರಿ ಅಥವಾ ಮುಸ್ಲಿಂ(Muslim) ಆಗಿರಿ, ಆದರೆ ನಿಮ್ಮ ಅಪ್ಪ-ಅಮ್ಮನಿಗೆ ಒಳ್ಳೆಯ ಮಕ್ಕಳಾಗಿ. ಇಂತಹ ಕೆಲಸಕ್ಕೆ ಹೋಗಬೇಡಿ...’ ಇದು ಹತ್ಯೆಗೀಡಾದ ಹಿಂದೂ ಪರ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ಮಾಧ್ಯಮದ ಮುಂದೆ ನೋವಿನಲ್ಲಿ ಹೇಳಿದ ನುಡಿ. ಹಿಂದೂ-ಹಿಂದುತ್ವ(Hindutva) ಎಂದು ಹೇಳಿದ್ದಕ್ಕೆ ನನ್ನ ತಮ್ಮ ಈ ಸ್ಥಿತಿಯಲ್ಲಿದ್ದಾನೆ. ಆತ ಜೈ ಶ್ರೀರಾಮ್, ಶ್ರೀರಾಮ್ ಎನ್ನುತ್ತಲೇ ಹೋಗಿ ಬಿಟ್ಟ ಎಂದು ಗದ್ಗದಿತರಾದರು. ಎಲ್ಲರಿಗೂ ಅವರವರ ದೇವರು ಮುಖ್ಯವೇ, ಇದಕ್ಕಾಗಿ ಯಾಕೆ ಹೊಡೆದಾಡುತ್ತೀರಿ. ನಾನು ಹಿಂದೂ-ಮುಸ್ಲಿಂ ಎಲ್ಲ ಅಣ್ಣ ತಮ್ಮಂದರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದರು.
ನನ್ನ ತಮ್ಮ ಯಾರಿಗೂ ಕೆಟ್ಟದ್ದಾಗಲಿ ಎಂದು ಯಾವತ್ತಿಗೂ ಬಯಸಿರಲಿಲ್ಲ. ತಾನಾಯಿತು, ತನ್ನ ಕೆಲಸವಾಯಿತು, ತನ್ನ ದೇವಸ್ಥಾನವಾಯಿತು ಎಂಬಂತಿದ್ದ. ಯಾರಿಗೂ ಕೆಟ್ಟದ್ದು ಮಾಡಿರಲಿಲ್ಲ, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಹಿಂದೂ ಪರ ಸಂಘಟನೆಗಳ ಜೊತೆ ಗುರುತಿಸಿಕೊಂಡು ಅಲ್ಲಿ ಕೆಲಸ ಮಾಡುತ್ತಿದ್ದ ಎಂದರು.
Shivamogga: ಹರ್ಷನ ಹತ್ಯೆಗೆ ಕಾರಣವೇನು..? ಸಹೋದರಿ ಹೀಗೆ ಹೇಳುತ್ತಾರೆ
ಆತ ಸತ್ತಿದ್ದಾನೆಂದು ಅನಿಸುತ್ತಿಲ್ಲ:
ಹರ್ಷ ತೀರಿಕೊಂಡಿದ್ದಾನೆಂದು ಈಗಲೂ ನನಗೆ ಅನಿಸುತ್ತಿಲ್ಲ. ಆತನನ್ನು ದೇವಸ್ಥಾನದಲ್ಲಿ(Temple) ಬಿಟ್ಟು ಬಂದಿದ್ದೇನೆಂದು ಅಂದುಕೊಂಡಿದ್ದೇನೆ. ಹೀಗಾಗಿ ಅಂತ್ಯಸಂಸ್ಕಾರದ(Funeral) ಬಳಿಕ ನಾನು ಬಟ್ಟೆ ಬದಲಿಸಿ ಸ್ನಾನ ಮಾಡಿಲ್ಲ. ಹಾಗೆ ಮಾಡಿದರೆ ಅಂತ್ಯಸಂಸ್ಕಾರ ಮುಗಿಸಿ ಬಂದಂತೆ ಎಂದು ಹೇಳಿದರು.
ನನ್ನ ಮಗ ಸತ್ತಿಲ್ಲ:
ಮಗನನ್ನು ಕಳೆದುಕೊಂಡು ಆಘಾತದಲ್ಲಿರುವ ಹರ್ಷನ ತಾಯಿ ಪದ್ಮಾ, ನನ್ನ ಮಗ ಸತ್ತಿಲ್ಲ, ಆತ ಅಮರ ಎಂದು ಹೇಳಿ ಕಣ್ಣೀರಾಗುತ್ತಿದ್ದಾರೆ. ದೇಶದಲ್ಲಿ ಇಂಥ ನೂರಾರು ಹರ್ಷ ಹುಟ್ಟಬೇಕು, ಇಡೀ ದೇಶ, ಸಮಾಜ ಆತನ ಕುರಿತು ಹೆಮ್ಮೆ ಪಡುತ್ತಿದೆ ಎಂದು ಹೇಳಿದ ಅವರು, ಆತನಿಲ್ಲದೆ ನಾವು ಬದುಕುವುದು ಹೇಗೆ ಎಂದು ನೋವು ತೋಡಿಕೊಂಡರು. ಜತೆಗೆ, ತನ್ನ ಪುತ್ರನನ್ನು ಹತ್ಯೆಗೈದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
'ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡು'
ಬೆಂಗಳೂರು: ಶಿವಮೊಗ್ಗದಲ್ಲಿ(Shivamogga) ಭಾನುವಾರ ನಡೆದ ಬಜರಂಗದಳ (Bajrandal) ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣವನ್ನು ಸಂಸದ ಪ್ರತಾಪ್ ಸಿಂಹ (Pratap Simha) ತೀವ್ರವಾಗಿ ಖಂಡಿಸಿದ್ದರು.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಬೀದಿಯಲ್ಲಿ ಹರ್ಷ ಅವರ ಕಗ್ಗೊಲೆಯಾಗಿದ್ದು ಅತೀವ ನೋವಾಗಿದೆ ಮತ್ತು ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಅಸಮಾಧಾನ ಹೊರಹಾಕಿದ್ದರು.
ಹಿಂದೆ ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕೆ ಜಿ ಹಳ್ಳಿಯಲ್ಲಿ ಗಲಭೆ ನಡೆದಾಗ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದ್ದರೆ ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ. ಈಗಲಾದರೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಆಗ್ರಹಿಸಿದ್ದರು.
Shivamogga Riots: ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ, ಹರ್ಷನ ತಾಯಿ ಕಣ್ಣೀರು
ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದರೆ ಮತ್ತು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಹಾಕಿದರೆ ಸಾಲದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.
‘ಹೈದರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು, ಇಲ್ಲೂ ಅದೇ ರೀತಿ ಕ್ರಮಗಳನ್ನು ಕೈಗೊಂಡರೆ ಪಾಠ ಕಲಿಯುತ್ತಾರೆ. ಕೆ ಜಿ ಹಳ್ಳಿ ಗಲಭೆ ನಡೆದಾಗ ವೇಳೆ ಬೊಮ್ಮಾಯಿ ಗೃಹ ಸಚಿವರಾಗಿದ್ದರು, ಆ ಸಂದರ್ಭದಲ್ಲೇ ಅವರು ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಸ್ಥೆಗಳ ಮೇಲೆ ನಿಷೇಧ ಹೇರಿದ್ದರೆ, ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದರು.