ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ಬಿಜೆಪಿ ರಾಜ್ಯಸಭಾ ಎಂಪಿ ಸುಧಾಂಶು ತ್ರಿವೇದಿ ನೀಡಿದ ಉತ್ತರ ಹಲವರಿಗೆ ಮನಮುಟ್ಟುವಂತೆ ಹೇಳಿದಂತಿದೆ. ಹೊರಗಿನಿಂದ ಬಂದು ಬೆಂಗಳೂರು ನಾವೆ ಬೆಳೆಸಿದ್ದು ಎಂದವರಿಗೆ ಈ ಉತ್ತರ.
- Home
- News
- State
- Karnataka News Live: ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ನಾಲ್ವಡಿ ಮಹರಾಜರ ಕೊಡುಗೆ ಇಲ್ನೋಡಿ
Karnataka News Live: ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ನಾಲ್ವಡಿ ಮಹರಾಜರ ಕೊಡುಗೆ ಇಲ್ನೋಡಿ

ಚಿಕ್ಕಮಗಳೂರು: ಪರಿಚಯಸ್ಥ ಮುಸ್ಲಿಂ ಯುವತಿ ಜೊತೆ ಮಾತನಾಡುತ್ತಾ ನಿಂತಿದ್ದ ಎನ್ನುವ ಕಾರಣಕ್ಕೆ ವಿನಾಕಾರಣ ಜಗಳ ತೆಗೆದು, ದಲಿತ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಗುರುವಾರ ಚಿಕ್ಕಮಗಳೂರಲ್ಲಿ ನಡೆದಿದೆ. ಈ ಸಂಬಂಧ 3 ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ನಿವಾಸಿಗಳಾದ ನಯಾಜ್, ತಬ್ರೀಜ್, ಹನೀಫ್ ಬಂಧಿತ ಆರೋಪಿಗಳು. ಹಲ್ಲೆ ನಡೆಸಿದ ಉಳಿದ 5 ಆರೋಪಿಗಳ ಪತ್ತೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ. ಯುವತಿಯೊಂದಿಗೆ ನೀನು ಏಕೆ ಇದೀಯಾ? ಎಂದು ಮುಸ್ಲಿಂ ಯುವಕರು ದಲಿತ ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ 8 ಮಂದಿಯ ವಿರುದ್ಧ ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಸೆಕ್ಷನ್ ಅಡಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
arnataka News Live 21 February 2026 ನಮ್ಮಿಂದನೆ ಬೆಂಗಳೂರು ಉದ್ಧಾರ ಎಂದವರಿಗೆ ಖಡಕ್ ಉತ್ತರ, ನಾಲ್ವಡಿ ಮಹರಾಜರ ಕೊಡುಗೆ ಇಲ್ನೋಡಿ
arnataka News Live 21 February 2026 Naa Ninna Bidalaare ಇದೇನಿದು ಟ್ವಿಸ್ಟ್? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ಪಾತ್ರಧಾರಿ ರಿಷಿಕಾ ಹಂಚಿಕೊಂಡ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಇದರಲ್ಲಿ ದುರ್ಗಾ, ಶರತ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಬಿಳಿ ಹೊದಿಕೆ ಹೊದ್ದು ಮಲಗಿದ್ದು, ಎಲ್ಲರೂ ಸತ್ತು ಹೋಗುತ್ತಾರಾ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.
arnataka News Live 21 February 2026 ಕಾವ್ಯಾ ಜೊತೆ ತನ್ನದೇ ಮದ್ವೆ, ಮಗು ವಿಡಿಯೋ ನೋಡಿ ಗಿಲ್ಲಿ ನಟ ಫುಲ್ ಶಾಕ್ - ಏನ್ ಹೇಳಿದ್ರು ನೋಡಿ!
ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಎಐ ನಿರ್ಮಿತ ಮದುವೆ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಗಿಲ್ಲಿ ನಟ, ಅಚ್ಚರಿ ವ್ಯಕ್ತಪಡಿಸುವುದರ ಜೊತೆಗೆ ವಿಡಿಯೋ ಮಾಡಿದವರ ಶ್ರಮವನ್ನು ಶ್ಲಾಘಿಸಿದ್ದಾರೆ.
arnataka News Live 21 February 2026 ಶಿವಾಜಿ ಮೆರವಣಿಗೆಗೆ ಎಸೆದರು ಸ್ಟೋನ್; ಬಾಗಲಕೋಟೆಗೆ ಪ್ರಮೋದ್ ಮುತಾಲಿಕ್ ಎಂಟ್ರಿ ಬ್ಯಾನ್; ಜಿಲ್ಲಾಧಿಕಾರಿ ಆದೇಶ!
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಜಿಲ್ಲಾಡಳಿತವು ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್‌ಗೆ ಒಂದು ತಿಂಗಳ ಕಾಲ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
arnataka News Live 21 February 2026 ಬೆಳ್ಳಂದೂರು ಮೆಟ್ರೋ ಇನ್ಮುಂದೆ ‘ಪ್ರೆಸ್ಟೀಜ್ ಬೆಳ್ಳಂದೂರು ಸ್ಟೇಷನ್’ - BMRCL ಜೊತೆಗೆ ₹90 ಕೋಟಿ ಒಪ್ಪಂದ!
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ₹90 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಈ 30 ವರ್ಷಗಳ ಒಪ್ಪಂದದ ನಂತರ, ನಿಲ್ದಾಣವನ್ನು ‘ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ’ಎಂದು ಮರುನಾಮಕರಣ ಮಾಡಲಾಗುವುದು.
arnataka News Live 21 February 2026 ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈ0ಗಿಕ ಕಿರುಕುಳ, 64ರ ಕಾಮುಕ ವೃದ್ಧ ಅರೆಸ್ಟ್
ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈ0ಗಿಕ ಕಿರುಕುಳ, ಮಕ್ಕಳನ್ನು ಪೋಷಕರು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಇದನ್ನೇ ಬಳಸಿಕೊಂಡ 64ರ ಹರೆಯದ ವೃದ್ಧಿ ಮಕ್ಕಳಿಗೆ ಚಾಕೋಲೇಟ್ ಆಸೆ ತೂರಿಸಿ ಲೈ0ಗಿಕ ಕಿರುಕುಳ ನೀಡಿದ್ದಾನೆ.
arnataka News Live 21 February 2026 ಶಕ್ತಿ ಯೋಜನೆ - ಬಿಎಂಟಿಸಿ ಕಂಡಕ್ಟರ್ ಅಮಾನತು, ಮತ್ತೊಮ್ಮೆ ಆಯ್ತು ಹೆಣ್ಮಕ್ಕಳೇ ಸ್ಟ್ರಾಂಗು ಅನ್ನೋದು ಸಾಬೀತು!
ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಿರ್ವಾಹಕ ಕಾಂತರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
arnataka News Live 21 February 2026 ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್
ಕನಕ್ಲೂಷನ್‌ಗೆ ಬಂದಿದ್ದೇವೆ, ಕರ್ನಾಟಕ ಅಧಿಕಾರ ಗೊಂದಲ ಕುರಿತು ಮಲ್ಲಿಕಾರ್ಜುನ ಖರ್ಗೆ ಬಿಗ್ ಅಪ್‌ಡೇಟ್, ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಖರ್ಗೆ ಭೇಟಿ ಬೆನ್ನಲ್ಲೇ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
arnataka News Live 21 February 2026 ಗಿಲ್ಲಿ ನಟ ನಟಿಸಿದ ಎಲ್ಲಾ ಸಿನಿಮಾ ಫ್ಲಾಫ್; ಮುಂದೇನು ಎಂದು ಕೈಹೊತ್ತು ಕುಳಿತ ಬಿಗ್ ಬಾಸ್ ಚಾಂಪಿಯನ್!
arnataka News Live 21 February 2026 ಡಿಕೆ ಪಟ್ಟದ ಸುತ್ತ ಇಂದ್ರಪ್ರಸ್ಥದಲ್ಲಿ ಸಾಹುಕಾರನ ವ್ಯೂಹ! ಸೈಲೆಂಟ್ ಆಗಿಯೇ ಕೆಪಿಸಿಸಿ ಪಟ್ಟಕ್ಕೆ ಸ್ಕೆಚ್ ಹಾಕಿದ್ರಾ ಸತೀಶ್..?
ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿ.ಕೆ.ಶಿವಕುಮಾರ್ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ಅಸ್ಸಾಂನ ಕಾಮಾಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿರುವುದು ಅಧಿಕಾರ ಸಮರಕ್ಕೆ ಹೊಸ ತಿರುವು ನೀಡಿದ್ದಾರೆ.
arnataka News Live 21 February 2026 ದೃಶ್ಯ ಸಿನಿಮಾ ಮೀರಿಸುವಂತೆ ಕಥೆ ಕಟ್ಟಿದ್ದ ಕಿರಾತಕ! ಹೆಂಡತಿಯನ್ನು ಬಡಿದು ಕೊಂ*ದ ಆಸಾಮಿ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಕಹಾನಿ!
arnataka News Live 21 February 2026 ಸ್ನೇಹಮಯಿ ಕೃಷ್ಣ ಸಿಸಿಬಿಯಿಂದ ರಿಲೀಸ್; ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ, ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!
ಮುಡಾ ಹಗರಣದ ಹೋರಾಟಗಾರ್ತಿ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿನೋದ್ ಎಂಬ ವ್ಯಕ್ತಿಯಿಂದ ದಾರಿ ತಪ್ಪಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ.
arnataka News Live 21 February 2026 ಪ್ರೇಮಕಾವ್ಯ ಸೀರಿಯಲ್ 'ಸ್ನೇಹ' ಬೋಲ್ಡ್ ಲುಕ್; ಸಂಸಾರ ಹಾಳು ಮಾಡೋ ವಿಲನ್ ಅಂತಾ ಬೈದವ್ರೇ ಈ ಫೋಟೋ ನೋಡಿ ಫಿದಾ!
Prema kavya Actress Shweta Koglur 'ಪ್ರೇಮಕಾವ್ಯ' ಧಾರಾವಾಹಿಯಲ್ಲಿ ಖಳನಾಯಕಿ ಸ್ನೇಹಾ ಪಾತ್ರಧಾರಿ ಶ್ವೇತಾ ಕೊಗ್ಲೂರ್, ತಮ್ಮ ಬೋಲ್ಡ್ ಬೀಚ್ ಫೋಟೋಶೂಟ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಂದ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದಾರೆ.
arnataka News Live 21 February 2026 ಬೆಂಗಳೂರು ಟೆಕ್ಕಿ ರಂಜಿತಾ ಹೋಮ್ ಸ್ಟೇಗೆ ಬಂದು ಹೆಣವಾದ ಕೇಸಿಗೆ ಟ್ವಿಸ್ಟ್; ಮಾಲೀಕರನ ಮೇಲೆ ಎಫ್‌ಐಆರ್!
ಚಿಕ್ಕಮಗಳೂರಿನ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಐಟಿ ಉದ್ಯೋಗಿ ರಂಜಿತಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬೆನ್ನಲ್ಲಿಯೇ ಹೋಂಸ್ಟೇ ಮಾಲೀಕರ ವಿರುದ್ಧ 4 ತಿಂಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ.
arnataka News Live 21 February 2026 ಬಾಗಲಕೋಟೆಯಲ್ಲಿ ಎರಡನೇ ಶಾಂತಿ ಸಭೆಯೂ ವಿಫಲ - ಹಿಂದೂ ಮುಖಂಡರ ಗೈರು; ಮುಸ್ಲಿಂ ಮುಖಂಡರಷ್ಟೇ ಹಾಜರ್!
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ನಂತರ ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಶಾಂತಿ ಸಭೆಯು ಹಿಂದೂ ಮುಖಂಡರ ಗೈರುಹಾಜರಿಯಿಂದ ವಿಫಲ.. ಸಭೆಗೆ ಹಾಜರಾದ ಮುಸ್ಲಿಂ ಮುಖಂಡರು, ನೈಜ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಭೆಯಿಂದ ನಿರ್ಗಮಿಸಿದರು.
arnataka News Live 21 February 2026 ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ವಿಟಮಿನ್ B 12 ಸಮಸ್ಯೆ - ಆಯುರ್ವೇದ ವೈದ್ಯೆಯಿಂದ ಸಿಂಪಲ್ ಮನೆಮದ್ದು
arnataka News Live 21 February 2026 ಗಗನಕ್ಕೇರಿದ ಬೆಲೆ - KGFನಲ್ಲಿರೋ ಚಿನ್ನ ಮಿಶ್ರಿತ ಮಣ್ಣನ್ನು ಮೂಟೆಗಳಲ್ಲಿ ತುಂಬಿಕೊಂಡು ಹೋದ ಮಹಿಳೆಯರು
ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ, ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
arnataka News Live 21 February 2026 ರೋಹಿಣಿ ಸಿಂಧೂರಿಗೆ ಬಿಗ್ ಶಾಕ್ - ಮಾನನಷ್ಟ ಕೇಸ್ ರದ್ದು ಕೋರಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್!
arnataka News Live 21 February 2026 Nagendran - 200 ಸೀಟು ಗೆಲ್ಲೋದು ಯಾರು ಅಂತ ಜನರೇ ಹೇಳ್ತಾರೆ - ಡಿಎಂಕೆ ವಿರುದ್ಧ ಗುಡುಗು
200 ಸೀಟುಗಳನ್ನು ಯಾರು ಗೆಲ್ಲುತ್ತಾರೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ. ಇಪಿಎಸ್ ಮುಂದಿನ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಡಿಎಂಕೆ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ..
arnataka News Live 21 February 2026 ಶಾಸಕ ಬೈರತಿ ಬಸವರಾಜ್‌ಗೆ ಡಬಲ್ ಶಾಕ್; ಒಂದ್ಕಡೆ ಜೈಲುಪಾಲು, ಮತ್ತೊಂದ್ಕಡೆ ಮನೆ ಊಟದ ಆಸೆಯೂ ಮಣ್ಣುಪಾಲು!
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮನೆ ಊಟದ ಮನವಿ ತಿರಸ್ಕರಿಸಿದ ನ್ಯಾಯಾಲಯ, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.