Asianet Suvarna News Asianet Suvarna News

ಸೊರಬದಲ್ಲಿ 25 ಅಡಿ ಎತ್ತರದ ಶ್ರೀ ರಾಮನ ಫ್ಲೆಕ್ಸ್ ಅನಾವರಣ, ಜೈ ಶ್ರೀರಾಮ ಘೋಷಣೆ!

ಪಟ್ಟಣದ ಕಾನಕೇರಿ ಬಡಾವಣೆಯಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್, ಓಂ ಶ್ರೀ ಮಹಾಗಣಪತಿ ಸೇವಾ ಸಮಿತಿ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಗುರುವಾರ ಶ್ರೀ ರಾಮನ ಭಾವಚಿತ್ರ ಇರುವ ಸುಮಾರು ೨೫ ಅಡಿ ಎತ್ತರದ ಫ್ಲಕ್ಸ್ ಅನಾವರಣಗೊಳಿಸಲಾಯಿತು.

25 feet high Shree Rama flex unveiling in Soraba at shivamogga rav
Author
First Published Jan 19, 2024, 11:09 PM IST | Last Updated Jan 19, 2024, 11:09 PM IST

ಸೊರಬ (ಜ.19) : ಪಟ್ಟಣದ ಕಾನಕೇರಿ ಬಡಾವಣೆಯಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್, ಓಂ ಶ್ರೀ ಮಹಾಗಣಪತಿ ಸೇವಾ ಸಮಿತಿ, ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಗುರುವಾರ ಶ್ರೀ ರಾಮನ ಭಾವಚಿತ್ರ ಇರುವ ಸುಮಾರು ೨೫ ಅಡಿ ಎತ್ತರದ ಫ್ಲಕ್ಸ್ ಅನಾವರಣಗೊಳಿಸಲಾಯಿತು.

ಶ್ರೀ ರಾಮನ (Ayodhya Ram Mandir) ಭಾವಚಿತ್ರ ಇರುವ ಫ್ಲಕ್ಸ್ ಅನಾವರಣಗೊಳಿಸಿ ಮಾತನಾಡಿದ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಕರಿಯಪ್ಪ, ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಘಟ್ಟವಾಗಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ೨೦೨೦ರ ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಇದಾದ ಬಳಿಕ ಅಯೋಧ್ಯೆಯ ರಾಮ ಜನ್ಮ ಭೂಮಿ ಪ್ರದೇಶವು ಆಮೂಲಾಗ್ರ ಬದಲಾವಣೆ ಕಂಡಿದೆ. ಭವ್ಯ ರಾಮ ಮಂದಿರ ತಲೆ ಎತ್ತಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಿನ ಹುಡುಗನಿಗೆ ಪಿಯು ಪರೀಕ್ಷೆ ಬರೆಯಲು ಅಡ್ಡಿ!

ಜ.೨೨ರ ಸಂತಸದ ದಿನದ ಮಧ್ಯಾಹ್ನ ೧೨ ರಿಂದ ೧ ಗಂಟೆ ವರೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು. ಸಂಜೆ ೫ ಗಂಟೆಗೆ ವಿಶೇಷ ಪೂಜೆ ಭಜನೆ, ದಿಪೋತ್ಸವದ ನಂತರ ಕೋಸಂಬರಿ, ಪಾನಕ ಸಿಹಿ ಪ್ರಸಾದ ವಿತರಣೆ ಇರುತ್ತದೆ. ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್ನ ಗುಡ್ಡೇಶಪ್ಪ ಕಣಸೋಗಿ, ಲಕ್ಷö್ಮಣಪ್ಪ, ಬಸವರಾಜ್, ರಾಮಚಂದ್ರ ಆಚಾರ್, ನೆಮ್ಮದಿ ಶ್ರೀಧರ, ಗಿರಿಧರ ಭಟ್, ಎಂ. ಮಂಜುನಾಥ ಸೇರಿದಂತೆ ಓಂ ಶ್ರೀ ಮಹಾಗಣಪತಿ ಸೇವಾ ಸಮಿತಿ ಮತ್ತು ಭಜರಂಗದಳದ ಕಾರ್ಯಕರ್ತರು ಹಾಜರಿದ್ದರು.

 

RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!

೧೮ಕೆಪಿಸೊರಬ-೦೧: ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ಶ್ರೀ ರಾಮನ ಭಾವಚಿತ್ರ ಇರುವ ೨೫ ಅಡಿ ಎತ್ತರದ ಫ್ಲೆಕ್ಸ್ ಅನಾವರಣಗೊಳಿಸಲಾಯಿತು.

Latest Videos
Follow Us:
Download App:
  • android
  • ios