"

ಕೆನಡಾ(ಆ.09): ಫ್ರಾಂಚೈಸಿ ಟಿ20 ಲೀಗ್‌ಗಳನ್ನು ನಡೆಸುವ ಭರದಲ್ಲಿ ಕ್ರಿಕೆಟ್‌ ಸಂಸ್ಥೆಗಳು ಎಡವಟ್ಟು ಮಾಡುತ್ತಿವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. 

ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!

ಕೆನಡಾದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಬುಧವಾರ, ತಂಡದ ಮಾಲೀಕರು ಬಾಕಿ ಇರುವ ವೇತನ ಪಾವತಿಸದ ಕಾರಣ, ಯುವರಾಜ್‌ ಸಿಂಗ್‌ ನೇತೃತ್ವದ ಟೊರೊಂಟೋ ನ್ಯಾಷನಲ್ಸ್‌ ಹಾಗೂ ಜಾರ್ಜ್ ಬೈಲಿ ನೇತೃತ್ವದ ಮಾಂಟ್ರಿಯಲ್‌ ಟೈಗ​ರ್ಸ್ ತಂಡದ ಆಟಗಾರರು ಪ್ರತಿಭಟಿಸಿದರು. ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ತೆರಳಲು ಆಟಗಾರರು ನಿರಾಕರಿಸಿದ ಕಾರಣ ಪಂದ್ಯ 2 ಗಂಟೆ ತಡವಾಯಿತು. 

ಮತ್ತೆ ಭುಗಿಲೆದ್ದಿದೆ ಫಿಕ್ಸಿಂಗ್; ಲಿಸ್ಟ್‌ನಲ್ಲಿ ಪಾಕ್ ಕ್ರಿಕೆಟಿಗರ ಹೆಸರು!

ಆಯೋಜಕರು, ಮಾಲೀಕರು ಸೇರಿದಂತೆ ಸಂಬಂಧಪಟ್ಟವರು ಸಭೆ ಸೇರಿ ಚರ್ಚಿಸಿ ವೇತನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಆಟಗಾರರು ಮೈದಾನಕ್ಕೆ ತೆರಳಿದರು. ಯುವರಾಜ್‌ ಪಂದ್ಯದಿಂದ ಹೊರಗುಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ