ಬ್ರಾಂಪ್ಟನ್(ಆ.05): ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದೆ. 22 ಎಸೆತದಲ್ಲಿ 51 ರನ್ ಸಿಡಿಸೋ ಮೂಲಕ ಯುವಿ ಮತ್ತೆ ಘರ್ಜಿಸಿದರು. 5 ಸಿಕ್ಸರ್ ಸಿಡಿಸೋ ಮೂಲಕ ಯುವಿ ತಮ್ಮ ಹಳೇ ಖದರ್ ತೋರಿಸಿದರು. ಯುವಿ ಪ್ರದರ್ಶನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಯುವಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಕೊಂಡಾಡಿದ್ದಾರೆ.