ಮತ್ತೆ ಭುಗಿಲೆದ್ದಿದೆ ಫಿಕ್ಸಿಂಗ್; ಲಿಸ್ಟ್‌ನಲ್ಲಿ ಪಾಕ್ ಕ್ರಿಕೆಟಿಗರ ಹೆಸರು!

ಕ್ರಿಕೆಟ್‍‌ನಿಂದ ಕಳ್ಳಾಟವನ್ನು ಮುಕ್ತಗೊಳಿಸಲು ಐಸಿಸಿ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಸಂಪೂರ್ಣವಾಗಿ ಯಶಸ್ಸು ಸಿಕ್ಕಿಲ್ಲ. 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಬಳಿಕ, ಐಸಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟಾದರೂ ಬಾಂಗ್ಲಾ ಪ್ರಿಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು.  ಇತ್ತೀಚೆಗೆ ಕ್ರಿಕೆಟ್‌ನಿಂದ ಫಿಕ್ಸಿಂಗ್ ದೂರ ಉಳಿದಿತ್ತು. ಇದೀಗ ಮತ್ತೆ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಬಾರಿಯೂ ಪಾಕಿಸ್ತಾನ ಕ್ರಿಕೆಟಿಗರೇ ಹೆಸರು ಲಿಸ್ಟ್‌ನಲ್ಲಿದೆ.

Umar akmal reveals Pakistan former player approach for match fixing in Canada t20 league

ಕೆನಡಾ(ಆ.07): ಕ್ರಿಕೆಟ್‌ನಲ್ಲಿ ಮತ್ತೆ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ. ಈ ಬಾರಿಯೂ ಪಾಕಿಸ್ತಾನ ಕ್ರಿಕೆಟಿಗರ ಹೆಸರು ಮುಂಚೂಣಿಯಲ್ಲಿದೆ. ಸದ್ಯ ನಡೆಯುತ್ತಿರುವ ಕೆನಡಾ ಟಿ20 ಗ್ಲೋಬಲ್ ಟೂರ್ನಿಯಲ್ಲಿ ಫಿಕ್ಸಿಂಗ್ ಪ್ರಯತ್ನ ನಡೆದಿದೆ ಎಂದು ಸ್ವತಃ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಬಾಯ್ಬಿಟ್ಟಿದ್ದಾರೆ. ರೋಚಕ ಘಟ್ಟದತ್ತ ಸಾಗುತ್ತಿದ್ದ ಕೆನಡಾ ಗ್ಲೋಬಲ್ ಟಿ20 ಲೀಗ್ ಟೂರ್ನಿ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

ಕೆನಡಾ ಟಿ20 ಲೀಗ್ ಟೂರ್ನಿ ಆಡುತ್ತಿರುವ ಪಾಕಿಸ್ತಾನ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಇದೀಗ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ICC ಭ್ರಷ್ಟಾಚಾರ ಮತ್ತು ನಿಗ್ರಹದಳದ ಮುಂದೆ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಪಂದ್ಯವನ್ನು ಫಿಕ್ಸ್ ಮಾಡುವಂತೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಅಕ್ಮಲ್ ಹೇಳಿದ್ದಾರೆ.

ಅಕ್ಮಲ್ ಫಿಕ್ಸಿಂಗ್ ಮಾಹಿತಿ ಹೊರಹಾಕುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದೆ. ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿರುವುದು ವಿಷಾದ. ಆದರೆ ಈ ಟೂರ್ನಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಐಸಿಸಿ ಸೂಕ್ತ ತನಿಖೆ ನಡೆಸಲಿ ಎಂದು ಪಿಸಿಬಿ ಹೇಳಿದೆ.

ಇದನ್ನೂ ಓದಿ: ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

ಇದೇ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಆಡುತ್ತಿದ್ದಾರೆ. ಇದೀಗ ಉಮರ್ ಅಕ್ಮಲ್ ಬಹಿರಂಗ ಪಡಿಸಿದ ಫಿಕ್ಸಿಂಗ್ ಮಾಹಿತಿ ಟೂರ್ನಿಗೆ ಕಪ್ಪು ಚುಕ್ಕೆ ಇಟ್ಟಿದೆ.

Latest Videos
Follow Us:
Download App:
  • android
  • ios