MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!

ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!

ಮುಂಬೈ: ಮುಂಬರುವ ಐಪಿಎಲ್ 2026 ಸೀಸನ್‌ಗೆ ಭರ್ಜರಿಯಾಗಿ ರೆಡಿಯಾಗುತ್ತಿರುವ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಟ್ನೆಸ್ ಹಾಗೂ ಆಟದ ಮೇಲೆ ಹೆಚ್ಚು ಗಮನ ಕೊಡಲು, ಅವರು ಮದ್ಯಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ. 

1 Min read
Author : Naveen Kodase
Published : Mar 19 2026, 04:23 PM IST
Share this Photo Gallery
  • FB
  • TW
  • Linkdin
  • Whatsapp
16
ಎಬಿ ಡಿವಿಲಿಯರ್ಸ್ ಜತೆ ಚಹಲ್ ಮನದಾಳದ ಮಾತು
Image Credit : Instagram/shikhardofficial

ಎಬಿ ಡಿವಿಲಿಯರ್ಸ್ ಜತೆ ಚಹಲ್ ಮನದಾಳದ ಮಾತು

ಪಂಜಾಬ್ ಕಿಂಗ್ಸ್ ತಂಡದ ಆಟಗಾರನಾಗಿರುವ ಯುಜುವೇಂದ್ರ ಚಹಲ್, ಎಬಿ ಡಿವಿಲಿಯರ್ಸ್ ಜೊತೆಗಿನ ಪಾಡ್‌ಕಾಸ್ಟ್ ಒಂದರಲ್ಲಿ ತಮ್ಮ ಜೀವನಶೈಲಿಯ ಈ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.

26
ಆರು ತಿಂಗಳಿನಿಂದ ಆಲ್ಕೋಹಾಲ್ ಮುಟ್ಟಿಲ್ಲ ಚಹಲ್
Image Credit : ANI

ಆರು ತಿಂಗಳಿನಿಂದ ಆಲ್ಕೋಹಾಲ್ ಮುಟ್ಟಿಲ್ಲ ಚಹಲ್

ಕಳೆದ ಆರು ತಿಂಗಳಿಂದ ತಾನು ಆಲ್ಕೋಹಾಲ್ ಮುಟ್ಟಿಲ್ಲ ಎಂದು ಚಹಲ್ ಹೇಳಿದ್ದಾರೆ. "ನನಗೆ ಈಗ 35 ವರ್ಷ. ನಾನು ಇನ್ನಷ್ಟು ಆಕ್ಟಿವ್ ಆಗಿರಬೇಕು, ತಂಡಕ್ಕಾಗಿ ನನ್ನ 150% ಶ್ರಮ ಹಾಕಬೇಕು. ಒಬ್ಬ ಸೀನಿಯರ್ ಆಟಗಾರನಾಗಿ, ಯುವ ಆಟಗಾರರಿಗೆ ನಾನೇ ಮಾದರಿಯಾಗಬೇಕು" ಎಂದು ಚಹಲ್ ತಮ್ಮ ಗುರಿ ತಿಳಿಸಿದ್ದಾರೆ.

Related Articles

Related image1
ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!
Related image2
ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!
36
ಪಕ್ಕೆಲುಬು ಮುರಿದುಕೊಂಡಿದ್ದ ಯುಜಿ
Image Credit : ANI

ಪಕ್ಕೆಲುಬು ಮುರಿದುಕೊಂಡಿದ್ದ ಯುಜಿ

2025ರ ಸೀಸನ್‌ನಲ್ಲಿನ ತನ್ನ ಪ್ರದರ್ಶನದ ಬಗ್ಗೆ ತನಗೆ ಸಮಾಧಾನ ಇರಲಿಲ್ಲ ಅಂತ ಚಹಲ್ ಒಪ್ಪಿಕೊಂಡಿದ್ದಾರೆ. ಕಳೆದ ಸೀಸನ್‌ನಲ್ಲಿ ಗಾಯದ ಸಮಸ್ಯೆಗಳು ಚಹಲ್ ಅವರನ್ನು ತುಂಬಾ ಕಾಡಿದ್ದವು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ನಂತರ ಅವರ ಪಕ್ಕೆಲುಬಿಗೆ ಮುರಿತವಾಗಿತ್ತು. ನಂತರ ಬೆರಳಿಗೂ ಗಾಯವಾಗಿತ್ತು.

46
ಕಳೆದ ಆವೃತ್ತಿಯ ಐಪಿಎಲ್‌ ವೇಳೆ ಗಾಯಗೊಂಡಿದ್ದ ಚಹಲ್
Image Credit : ANI

ಕಳೆದ ಆವೃತ್ತಿಯ ಐಪಿಎಲ್‌ ವೇಳೆ ಗಾಯಗೊಂಡಿದ್ದ ಚಹಲ್

ಈ ಗಾಯದ ಕಾರಣದಿಂದ, 2025ರ ಐಪಿಎಲ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಚಹಲ್‌ಗೆ ತಮ್ಮ ಎಂದಿನ ಲಯದಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ತನ್ನ ದೇಹಕ್ಕೆ ಮೊದಲ ಆದ್ಯತೆ ನೀಡಿ, ಸಂಪೂರ್ಣ ಫಿಟ್ ಆಗಿ ಆಡುತ್ತೇನೆ ಎಂದು ಅವರು ಹೇಳಿದ್ದಾರೆ.

56
ಪಂಜಾಬ್ ಕಿಂಗ್ಸ್ ಪರ ಕಪ್ ಗೆಲ್ಲುವ ಟಾರ್ಗೆಟ್
Image Credit : yuzvendra chahal dhanashree verma Instagrama

ಪಂಜಾಬ್ ಕಿಂಗ್ಸ್ ಪರ ಕಪ್ ಗೆಲ್ಲುವ ಟಾರ್ಗೆಟ್

ಕಳೆದ ಸೀಸನ್‌ನಲ್ಲಿ ಚಹಲ್ 14 ಪಂದ್ಯಗಳಿಂದ 16 ವಿಕೆಟ್‌ಗಳನ್ನು ಪಡೆದಿದ್ದರು. ಪಂಜಾಬ್ ತಂಡ ಫೈನಲ್‌ಗೆ ತಲುಪಿತ್ತಾದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ಜೊತೆ ಸೇರಿ ಕಪ್ ಗೆಲ್ಲಲೇಬೇಕು ಅನ್ನೋ ದೊಡ್ಡ ಗುರಿ ಚಹಲ್‌ಗೆ ಇದೆ.

66
ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಕಾಯುತ್ತಿರುವ ಚಹಲ್
Image Credit : social media

ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಕಾಯುತ್ತಿರುವ ಚಹಲ್

2023ರ ನಂತರ ಭಾರತ ತಂಡದಲ್ಲಿ ಚಹಲ್‌ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ, ಈ ಐಪಿಎಲ್ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ತಜ್ಞ ಸ್ಪಿನ್ನರ್‌ಗಳಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಪಿಎಲ್
ಯುಜ್ವೇಂದ್ರ ಚಹಲ್
ಟೀಮ್ ಇಂಡಿಯಾ
Latest Videos
Recommended Stories
Recommended image1
ಮೂರನೇ ಮಗುವಿಗೆ ತಂದೆಯಾದ ದಿನೇಶ್ ಕಾರ್ತಿಕ್! ಯುಗಾದಿ ದಿನ ಮಗಳಿಗೆ ಬ್ಯೂಟಿಫುಲ್ ಹೆಸರಿಟ್ಟ ಆರ್‌ಸಿಬಿ ಬ್ಯಾಟಿಂಗ್ ಕೋಚ್
Recommended image2
IPL 2026: ಹರ್ಷಿತ್ ರಾಣಾ ಬದಲಿಗೆ ಈ ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ವೇಗಿಗಳ ಮೇಲೆ ಕಣ್ಣಿಟ್ಟ ಕೆಕೆಆರ್!
Recommended image3
ಐಪಿಎಲ್‌ನಲ್ಲಿ ಫ್ರಾಂಚೈಸಿ ಸೇಲ್‌ ಬಿಸಿ: ರಾಜಸ್ಥಾನ ರಾಯಲ್ಸ್‌ ₹12,000 ಕೋಟಿಗೆ ಬಿಡ್?
Related Stories
Recommended image1
ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!
Recommended image2
ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved