"ಚೆಸ್‌ ಕ್ರೀಡೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯದ ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ನಮ್ಮ ಜತೆ ಈ ಪಯಣದಲ್ಲಿ ಜತೆಯಾಗಿರುವುದು ನಮ್ಮ ಪಾಲಿಗೆ ಗೌರವದ ವಿಷಯ. ಚೆಸ್ ವಿಶ್ವಕಪ್‌ ಫೈನಲ್‌ಗೇರಿದ ಅತಿಕಿರಿಯ ಚೆಸ್ ಪಟು ಎನಿಸಿಕೊಂಡ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.

ಚೆನ್ನೈ(ಸೆ.01): ಭಾರತದ ಯುವ ಚೆಸ್ ಪ್ರತಿಭಾನ್ವಿತ ಆಟಗಾರ ಆರ್ ಪ್ರಜ್ಞಾನಂದ ಇತ್ತೀಚೆಗಷ್ಟೇ ಮುಕ್ತಾಯವಾದ ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್‌ಗೇರಿ ರನ್ನರ್ ಅಪ್ ಸ್ಥಾನ ಪಡೆಯುವ ಮೂಲಕ ದೇಶದ ಮನೆಮಾತಾಗಿದ್ದರು. ಅಜರ್‌ಬೈಜಾನ್‌ನಿಂದ ತವರಿಗೆ ವಾಪಾಸ್ಸಾದ ಬಳಿಕ ಆರ್ ಪ್ರಜ್ಞಾನಂದ ಅವರಿಗೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿತ್ತು.

18 ವರ್ಷದ ಚದುರಂಗ ಚತುರ ಆರ್‌ ಪ್ರಜ್ಞಾನಂದ ಮೊದಲ ಬಾರಿಗೆ ಫಿಡೆ ಚೆಸ್ ವಿಶ್ವಕಪ್ ಫೈನಲ್‌ಗೇರಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಅತಿ ಕಿರಿಯ ಚೆಸ್ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಫೈನಲ್‌ನಲ್ಲಿ ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಟೈ ಬ್ರೇಕರ್‌ನಲ್ಲಿ ವಿರೋಚಿತ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಇದು ಅರ್ ಪ್ರಜ್ಞಾನಂದ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿತ್ತು.

Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!

ಚೆಸ್‌ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಸ್ಥಾನ ಪಡೆದ ತಮಿಳುನಾಡಿನ 18 ವರ್ಷದ ಆಟಗಾರ ಆರ್‌. ಪ್ರಜ್ಞಾನಂದ ಭಾರತಕ್ಕೆ ವಾಪಾಸ್ಸಾದ ಬಳಿಕ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆಸ್‌ ವಿಶ್ವಕಪ್‌ನಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಪ್ರಜ್ಞಾನಂದ ಹೆಮ್ಮೆಯಿಂದ ತೋರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅವರ ತಂದೆ ರಮೇಶ್‌ಬಾಬು ಹಾಗೂ ತಾಯಿ ನಾಗಲಕ್ಷ್ಮೀ ಕೂಡ ಜೊತೆಯಲ್ಲಿದ್ದರು. ಇನ್ನು ಬಾಕುವಿನಲ್ಲಿ ನಡೆದ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌ಅಪ್‌ ಸಾಧನೆ ಮಾಡಿರುವ ಪ್ರಜ್ಞಾನಂದನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್‌ ಇತ್ತೀಚೆಗೆ ಅವರನ್ನು ಅಭಿನಂದಿಸಿ 30 ಲಕ್ಷ ರೂಪಾಯಿ ಹಣ ಬಹುಮಾನವಾಗಿ ನೀಡಿದ್ದರು.

ಇನ್ನು ದೋಹಾದಿಂದ ಚೆನ್ನೈಗೆ ವಾಪಾಸ್ಸಾಗುವ ವೇಳೆಯಲ್ಲಿ ಇಂಡಿಗೋ ಸಿಬ್ಬಂದಿ, ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ವಿನೂತನವಾಗಿ ಸ್ವಾಗತಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಇಂಡಿಗೋ, "ಚೆಸ್‌ ಕ್ರೀಡೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯದ ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ನಮ್ಮ ಜತೆ ಈ ಪಯಣದಲ್ಲಿ ಜತೆಯಾಗಿರುವುದು ನಮ್ಮ ಪಾಲಿಗೆ ಗೌರವದ ವಿಷಯ. ಚೆಸ್ ವಿಶ್ವಕಪ್‌ ಫೈನಲ್‌ಗೇರಿದ ಅತಿಕಿರಿಯ ಚೆಸ್ ಪಟು ಎನಿಸಿಕೊಂಡ ನಿಮಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ.

ಚದುರಂಗ ಚತುರ ಪ್ರಜ್ಞಾನಂದಗೆ ತವರಲ್ಲಿ ಅದ್ಧೂರಿ ಸ್ವಾಗತ..!

ಭಾರತದ ತಪ್ಪಿದ 3ನೇ ವಿಶ್ವಕಪ್‌

ಚೆಸ್‌ ವಿಶ್ವಕಪ್‌ನಲ್ಲಿ ಭಾರತ ಈವರೆಗೆ 2 ಬಾರಿ ಗೆದ್ದಿದೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಚಾಂಪಿಯನ್‌ ಆಗಿದ್ದರು. ಆ ಬಳಿಕ ಭಾರತದಿಂದ ಯಾರೂ ಫೈನಲ್‌ಗೇರಿರಲಿಲ್ಲ. ಈ ಬಾರಿ ಪ್ರಜ್ಞಾನಂದಗೆ ವಿಶ್ವನಾಥನ್‌ರ ಸಾಲಿಗೆ ಸೇರುವ ಅವಕಾಶವಿದ್ದರೂ ಸ್ವಲ್ಪದರಲ್ಲೇ ಕೈತಪ್ಪಿತು.