ಯುವ ಚೆಸ್‌ ತಾರೆಗೆ ಹೂವಿನ ಕಿರೀಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಚಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು. ಅವರು ತೆರಳಿದ ವಾಹನದ ಮೇಲೆ ಹೂಮಳೆ ಸುರಿಸಿದ ಅಭಿಮಾನಿಗಳು, ದಾಯಿಯುದ್ದಕ್ಕೂ ಸಾಂಸ್ಕೃತಿಕ ನೃತ್ಯಗಳನ್ನು ಸಹ ಮಾಡಿದರು.

ಚೆನ್ನೈ(ಆ.31): ಇತ್ತೀಚೆಗೆ ನಡೆದ ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದ 18 ವರ್ಷದ ಆರ್‌.ಪ್ರಜ್ಞಾನಂದ ಬುಧವಾರ ತವರಿಗೆ ವಾಪಸಾದರು. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮಿಳುನಾಡು ರಾಜ್ಯ ಕ್ರೀಡಾ ಸಚಿವಾಲಯದ ಅಧಿಕಾರಿಗಳು ಸಾವಿರಾರು ಅಭಿಮಾನಿಗಳೊಂದಿಗೆ ಪ್ರಜ್ಞಾನಂದರನ್ನು ಸ್ವಾಗತಿಸಿದರು.

ಯುವ ಚೆಸ್‌ ತಾರೆಗೆ ಹೂವಿನ ಕಿರೀಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಚಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು. ಅವರು ತೆರಳಿದ ವಾಹನದ ಮೇಲೆ ಹೂಮಳೆ ಸುರಿಸಿದ ಅಭಿಮಾನಿಗಳು, ದಾಯಿಯುದ್ದಕ್ಕೂ ಸಾಂಸ್ಕೃತಿಕ ನೃತ್ಯಗಳನ್ನು ಸಹ ಮಾಡಿದರು. ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್‌ರನ್ನು ಭೇಟಿಯಾದ ಪ್ರಜ್ಞಾನಂದಗೆ ತಮಿಳುನಾಡು ಸರ್ಕಾರದ ವತಿಯಿಂದ 30 ಲಕ್ಷ ರುಪಾಯಿ ಬಹುಮಾನ ವಿತರಿಸಲಾಯಿತು.

Scroll to load tweet…

ಯುಎಸ್ ಓಪನ್: 2ನೇ ಸುತ್ತಿಗೆ ಆಲ್ಕರಜ್‌ ಪ್ರವೇಶ

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌, ಅಗ್ರ ಶ್ರೇಯಾಂಕಿತ ಸ್ಪೇನ್‌ನ ಕಾರ್ಲೋಸ್‌ ಆಲ್ಕರಜ್‌ ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪುರುಷರ ಸಿಂಗಲ್ಸ್‌ 2ನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಡೊಮಿನಿಕ್‌ ಕೊಫರ್‌ ಗಾಯಗೊಂಡು ನಿವೃತ್ತಿ ಪಡೆದ ಕಾರಣ, ಆಲ್ಕರಜ್‌ ನಿರಾಯಾಸವಾಗಿ ಮುನ್ನಡೆದರು. ಆಲ್ಕರಜ್‌ 6-2 ಗೇಮ್‌ಗಳಲ್ಲಿ ಮೊದಲ ಸೆಟ್‌ ಗೆದ್ದು, 2ನೇ ಸೆಟ್‌ನಲ್ಲಿ 3-2ರಲ್ಲಿ ಮುಂದಿದ್ದಾಗ ಡೊಮಿನಿಕ್‌ ಪಂದ್ಯದಿಂದ ಹೊರನಡೆಯಲು ನಿರ್ಧರಿಸಿದರು.

Asia Cup 2023 ಒಪನಿಂಗ್ ಸೆರಮನಿಯಲ್ಲಿ ತ್ರಿಶಾಲ ಮೋಡಿ, ವೈದ್ಯೆಯ ಹಾಡಿಗೆ ಫ್ಯಾನ್ಸ್ ಫಿದಾ!

ಇನ್ನು 3ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಮೊದಲ ಸುತ್ತಿನಲ್ಲಿ ಹಂಗೇರಿಯ ಅಟ್ಟಿಲಾ ಬಲಾಜ್‌ ವಿರುದ್ಧ 6-1, 6-1, 6-0 ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೈನಾ ಸಬಲೆಂಕಾ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ಮೇರಿನಾ ಜ್ಯಾನೆವೆಸ್ಕಾ ವಿರುದ್ಧ 6-3, 6-2ರಲ್ಲಿ ಗೆದ್ದರೆ, 3ನೇ ಶ್ರೇಯಾಂಕಿತೆ ಅಮೆರಿಕದ ಜೆಸ್ಸಿಕಾ ಪೆಗ್ಯುಲಾ ಇಟಲಿಯ ಕ್ಯಾಮಿಲಾ ಜಿಯೊರ್ಜಿ ವಿರುದ್ಧ 6-2, 6-2ರಲ್ಲಿ ಜಯಿಸಿದರು. 5ನೇ ಶ್ರೇಯಾಂಕಿತೆ, ಕಳೆದ ವರ್ಷದ ರನ್ನರ್‌-ಅಪ್‌ ಟ್ಯುನಿಶೀಯಾದ ಒನ್ಸ್‌ ಜಬುರ್‌ ಕೊಲಂಬಿಯಾದ ಕ್ಯಾಮಿಲಾ ಸೆರ್ರಾನೊ ವಿರುದ್ಧ 7-5, 7-6ರಲ್ಲಿ ಗೆದ್ದು ಮುನ್ನಡೆದರು.

ಹುಬ್ಬಳ್ಳಿ ಟೈಗರ್ಸ್‌ ಮಡಿಲಿಗೆ ಮಹಾರಾಜ ಟ್ರೋಫಿ

ಕಾಮನ್ವೆಲ್ತ್‌ ಗೇಮ್ಸ್‌ ಒಕ್ಕೂಟ ಉಪಾಧ್ಯಕ್ಷೆ ಹುದ್ದೆಗೆ ಪಿ.ಟಿ.ಉಷಾ ಸ್ಪರ್ಧೆ

ಚೆನ್ನೈ: ಭಾರತ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷೆ, ದಿಗ್ಗಜ ಅಥ್ಲೀಟ್‌ ಪಿ.ಟಿ.ಉಷಾ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌(ಸಿಜಿಎಫ್‌)ನ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಬುಧವಾರ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಉಷಾಗೆ ಏಷ್ಯಾ ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಲಂಕಾದ ಮ್ಯಾಕ್ಸ್‌ವೆಲ್‌ ಡಿ ಸಿಲ್ವಾ ಹಾಗೂ ಸಿಂಗಾಪುರದ ಕ್ರಿಸ್ಟೋಫರ್‌ ಚಾನ್‌ರಿಂದ ಸ್ಪರ್ಧೆ ಏರ್ಪಡಲಿದೆ. ನ.14-15ರಂದು ಸಿಂಗಾಪುರದಲ್ಲಿ ಸಿಜಿಎಫ್‌ನ ಸಾಮಾನ್ಯ ಸಭೆ ನಿಗದಿಯಾಗಿದ್ದು, ಅದೇ ಸಮಯದಲ್ಲಿ ಚುನಾವಣೆ ಸಹ ನಡೆಯಲಿದೆ.

ಹಾಕಿ ಫೈವ್ಸ್‌: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು!

ಸಲ್ಹಾಹ(ಒಮಾನ್‌): ಹಾಕಿ ಫೈವ್ಸ್‌ ಏಷ್ಯಾಕಪ್‌ ಟೂರ್ನಿಯ ಎಲೈಟ್‌ ಗುಂಪಿನ ಪಂದ್ಯದಲ್ಲಿ ಬುಧವಾರ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ಧ 4-5 ಗೋಲುಗಳ ಸೋಲು ಅನುಭವಿಸಿತು. ತಲಾ 15 ನಿಮಿಷಗಳ ಎರಡು ಹಾಫ್‌ಗಳ ಪಂದ್ಯದಲ್ಲಿ ಪಾಕಿಸ್ತಾನ ಆರಂಭದಲ್ಲೇ 3-0 ಮುನ್ನಡೆ ಸಾಧಿಸಿತು. ಭಾರತ 12, 17, 21, 29 ನಿಮಿಷಗಳಲ್ಲಿ ಗೋಲು ಬಾರಿಸಿದರೂ, ಕೊನೆ ಪಕ್ಷ ಡ್ರಾ ಸಾಧಿಸಲೂ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಬುಧವಾರ ಒಮಾನ್‌ ವಿರುದ್ಧ ಭಾರತ 12-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು. ಸದ್ಯ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಗುರುವಾರ ಮಲೇಷ್ಯಾ ಹಾಗೂ ಜಪಾನ್‌ ವಿರುದ್ಧ ಆಡಲಿದ್ದು, ಇವೆರಡು ಪಂದ್ಯಗಳ ಫಲಿತಾಂಶಗಳ ಆಧಾರದ ಮೇಲೆ ಭಾರತ ಮುಂದಿನ ಹಂತಕ್ಕೆ ಪ್ರವೇಶಿಸುವುದು ನಿರ್ಧಾರವಾಗಲಿದೆ.

ಇಂದು ಜೂರಿಚ್‌ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

ಜೂರಿಚ್‌: ಹೊಸದಾಗಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿರುವ ಭಾರತದ ತಾರೆ ನೀರಜ್‌ ಚೋಪ್ರಾ ಗುರುವಾರ ಇಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಭಾನುವಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದ ನೀರಜ್‌, ಈ ಋತುವಿನ 2 ಡೈಮಂಡ್‌ ಲೀಗ್‌ ಕೂಟಗಳಲ್ಲಿ ಸ್ಪರ್ಧಿಸಿದ್ದ ನೀರಜ್‌, ಎರಡರಲ್ಲೂ ಮೊದಲ ಸ್ಥಾನ ಪಡೆದಿದ್ದರು. ಇದು ಕೊನೆಯ ಸ್ಪರ್ಧೆಯಾಗಿದ್ದು, ಸೆ.16-17ರಂದು ಅಮೆರಿಕದ ಯ್ಯುಜೀನ್‌ನಲ್ಲಿ ಫೈನಲ್‌ ನಡೆಯಲಿದೆ. ಸದ್ಯ 16 ಅಂಕಗಳನ್ನು ಹೊಂದಿರುವ ನೀರಜ್‌ 3ನೇ ಸ್ಥಾನದಲ್ಲಿದ್ದು, ಗುರುವಾರ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ. ಇನ್ನು ಲಾಂಗ್‌ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್‌ ಸಹ ಸ್ಪರ್ಧಿಸಲಿದ್ದಾರೆ.