Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!
ನಾರ್ವೆಯ ಅನುಭವಿ ಆಟಗಾರನ ವಿರುದ್ಧದ ಮಂಗಳವಾರ ಹಾಗೂ ಬುಧವಾರ ನಡೆದಿದ್ದ 2 ಸುತ್ತಿನ ಹಣಾಹಣಿ ಡ್ರಾಗೊಂಡಿತ್ತು. ಹೀಗಾಗಿ ಚೆಸ್ ವಿಶ್ವಕಪ್ ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಗುರುವಾರ ಟೈ ಬ್ರೇಕರ್ ನಡೆಸಲಾಯಿತು. ಟೈ ಬ್ರೇಕರ್‌ನ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ತಮಿಳುನಾಡಿನ ಪ್ರಜ್ಞಾನಂದ, 47 ನಡೆಗಳ ಬಳಿಕ ಕಾರ್ಲ್‌ಸನ್‌ಗೆ ಶರಣಾದರು.
ಬಾಕು(ಅಜರ್‌ಬೈಜಾನ್): 2 ದಶಕಗಳ ಬಳಿಕ ಚೆಸ್ ವಿಶ್ವಕಪ್ ಗೆದ್ದ ಭಾರತೀಯ ಎಂಬ ಇತಿಹಾಸ ಸೃಷ್ಟಿಸುವ ಯುವ ಚದುರಂಗ ಚತುರ ಆರ್.ಪ್ರಜ್ಞಾನಂದ ಅವರ ಕನಸು ಭಗ್ನಗೊಂಡಿದೆ. ಗುರುವಾರ ನಡೆದ ಫೈನಲ್‌ನ ಟೈ ಬ್ರೇಕರ್‌ನಲ್ಲಿ ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 18ರ ಪ್ರಜ್ಞಾನಂದ 0.5-1.5 ಅಂಕಗಳ ಅಂತರದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಕಾರ್ಲ್‌ಸನ್ ಚೊಚ್ಚಲ ಬಾರಿ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟರು.
ನಾರ್ವೆಯ ಅನುಭವಿ ಆಟಗಾರನ ವಿರುದ್ಧದ ಮಂಗಳವಾರ ಹಾಗೂ ಬುಧವಾರ ನಡೆದಿದ್ದ 2 ಸುತ್ತಿನ ಹಣಾಹಣಿ ಡ್ರಾಗೊಂಡಿತ್ತು. ಹೀಗಾಗಿ ಚೆಸ್ ವಿಶ್ವಕಪ್ ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಗುರುವಾರ ಟೈ ಬ್ರೇಕರ್ ನಡೆಸಲಾಯಿತು. ಟೈ ಬ್ರೇಕರ್‌ನ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ತಮಿಳುನಾಡಿನ ಪ್ರಜ್ಞಾನಂದ, 47 ನಡೆಗಳ ಬಳಿಕ ಕಾರ್ಲ್‌ಸನ್‌ಗೆ ಶರಣಾದರು.
2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾದರೆ, ಕಾರ್ಲ್‌ಸನ್‌ಗೆ ಡ್ರಾ ಸಾಧಿಸಿದರೂ ಸಾಕಿತ್ತು. 2ನೇ ಸುತ್ತಿನಲ್ಲಿ ಪ್ರಜ್ಞಾನಂದ ಕೊಂಚ ಪ್ರತಿರೋಧ ತೋರಿದ ಹೊರತಾಗಿಯೂ ಕೇವಲ 22 ನಡೆಗಳ ಬಳಿಕ ಡ್ರಾಗೊಂಡಿತು.
Chess World Cup: ಒಂದು ವೇಳೆ ಪ್ರಜ್ಞಾನಂದ ಫೈನಲ್ ಗೆದ್ದರೇ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ?
ಲೀಗ್ ಹಂತದಲ್ಲಿ ಪ್ರಜ್ಞನಾಂದ ವಿಶ್ವ ನಂ.2 ಅಮೆರಿಕದ ಹಿಕರು ನಕಮುರಾ ಹಾಗೂ ವಿಶ್ವ ನಂ.2 ಫ್ಯಾಬಿಯಾನೋ ವಿರುದ್ಧ ಗೆದ್ದಿದ್ದರು. ಆದರೆ ಫೈನಲ್‌ಗೆ ಅವರಿಗೆ ವಿಶ್ವದ ಅಗ್ರ ಆಟಗಾರನ ಸವಾಲು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.
ಕರುವಾನಾಗೆ 3ನೇ ಸ್ಥಾನ: ಸೆಮಿಫೈನಲ್‌ನಲ್ಲಿ ಪ್ರಜ್ಞಾನಂದ ವಿರುದ್ಧ ಸೋತಿದ್ದ ವಿಶ್ವ ನಂ.3, ಅಮೆರಿಕದ ಫ್ಯಾಬಿಯಾನೋ ಕರುವಾನಾ ಟೂರ್ನಿಯಲ್ಲಿ 3ನೇ ಸ್ಥಾನಿಯಾದರು. ಅವರು ಅಜರ್‌ಬೈಜಾನ್‌ನ ನಿಜಾತ್ ಅಬಸೊವ್ ವಿರುದ್ಧ 3-4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಗೆಲುವು ಸಾಧಿಸಿದರು.
ಭಾರತದ ತಪ್ಪಿದ 3ನೇ ವಿಶ್ವಕಪ್
ಚೆಸ್ ವಿಶ್ವಕಪ್‌ನಲ್ಲಿ ಭಾರತ ಈವರೆಗೆ 2 ಬಾರಿ ಗೆದ್ದಿದೆ. 2000 ಹಾಗೂ 2002ರಲ್ಲಿ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದರು. ಆ ಬಳಿಕ ಭಾರತದಿಂದ ಯಾರೂ ಫೈನಲ್‌ಗೇರಿರಲಿಲ್ಲ. ಈ ಬಾರಿ ಪ್ರಜ್ಞಾನಂದಗೆ ವಿಶ್ವನಾಥನ್‌ರ ಸಾಲಿಗೆ ಸೇರುವ ಅವಕಾಶವಿದ್ದರೂ ಸ್ವಲ್ಪದರಲ್ಲೇ ಕೈತಪ್ಪಿತು.
ಪ್ರಜ್ಞಾನಂದಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಅವಕಾಶವಿದೆ!
ವಿಶ್ವಕಪ್ ಫೈನಲ್ ಪ್ರವೇಶಿಸುವ ಮೂಲಕ ಪ್ರಜ್ಞಾನಂದ, 2024ರ ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ. ಟೂರ್ನಿಯಲ್ಲಿ ಒಟ್ಟು 8 ಆಟಗಾರರು, ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಸೆಣಸಲಿದ್ದಾರೆ. ಏ.2ರಿಂದ ಏ.25ರ ವರೆಗೂ ಕೆನಡಾದ ಟೊರೊಂಟೋದಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗೆದ್ದರೆ, 2024ರ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಸಿಗಲಿದೆ. ಆ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್‌ರನ್ನು ಸೋಲಿಸಿದರೆ ನೂತನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಬಹುದು.
Asia Cup 2023 ಟೂರ್ನಿಗೂ ಮುನ್ನ Yo Yo Test ಪಾಸ್ ಮಾಡಿದ ವಿರಾಟ್ ಕೊಹ್ಲಿ..! ಗಳಿಸಿದ ಪಾಯಿಂಟ್ ಎಷ್ಟು?
ಪ್ರಜ್ಞಾನಂದ ಸಾಧನೆ ಕೊಂಡಾಡಿದ ಮೋದಿ
ಚೆಸ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆದ ಪಜ್ಞಾನಂದ ಅವರ ಸಾಧನಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ವಿಶ್ವಕಪ್‌ನಲ್ಲಿ ಪ್ರಜ್ಞಾನಂದರ ಗಮನಾರ್ಹ ಸಾಧನೆ ನಮಗೆ ಹೆಮ್ಮೆ ತಂದಿದೆ. ಟೂರ್ನಿಯಲ್ಲಿ ಅವರು ಅಸಾಧಾರಣ ಕೌಶಲ್ಯ ಪ್ರದರ್ಶಿಸಿ, ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಕಠಿಣ ಪೈಪೋಟಿ ನೀಡಿದ್ದಾರೆ. ಇದು ಸಣ್ಣ ಸಾಧನೆ ಇಲ್ಲ. ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲಿ’ ಎಂದು ಶುಭ ಹಾರೈಸಿದ್ದಾರೆ.