ವೆಲ್ಲಿಂಗ್ಟನ್[ಫೆ.03]: ಟೀಂ ಇಂಡಿಯಾದ ಸಂಘಟಿತ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ತಂಡವನ್ನು ಅಂತಿಮ ಏಕದಿನ ಪಂದ್ಯದಲ್ಲಿ 35 ರನ್’ಗಳ ಅಂತರದಿಂದ ಮಣಿಸಿದೆ. ಈ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.

ಕಿವೀಸ್ ವಿರುದ್ಧ ಭಾರತಕ್ಕೆ 35 ರನ್ ಗೆಲುವು- 4-1 ಅಂತರದಲ್ಲಿ ಸರಣಿ ಕೈವಶ

ಈ ಮೊದಲು ವಿಶ್ವಕಪ್ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ 2-1 ಅಂತರದಲ್ಲಿ ಮಣಿಸಿ ಸರಣಿ ಗೆದ್ದಿದ್ದ ಭಾರತ, ಇದೀಗ ಹಾಲಿ ರನ್ನರ್’ಅಪ್ ನ್ಯೂಜಿಲೆಂಡ್ ತಂಡವನ್ನು ಅವರ ತವರಿನಲ್ಲೇ 4-1 ಅಂತರದಲ್ಲಿ ಮಣಿಸಿದ ಸಾಧನೆ ಮಾಡಿದೆ. ಈ ಮೂಲಕ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ತಾನೆಷ್ಟು ಬಲಿಷ್ಠ ತಂಡ ಎಂದು ಎದುರಾಳಿ ತಂಡಗಳಿಗೆ ಟೀಂ ಇಂಡಿಯಾ ಎಚ್ಚರಿಕೆ ರವಾನಿಸಿದೆ. 2016ರಿಂದೀಚೆಗೆ ಇಂಗ್ಲೆಂಡ್[1-2] ತಂಡವನ್ನು ಹೊರತುಪಡಿಸಿ ಆಡಿದ ಉಳಿದೆಲ್ಲಾ ದ್ವಿಪಕ್ಷೀಯ ಸರಣಿಗಳನ್ನು ಭಾರತ ಗೆದ್ದುಕೊಂಡಿದೆ.

ಎಬಿಡಿ ಅಪರೂಪದ ದಾಖಲೆ ಸರಿಗಟ್ಟಿದ ಪಾಂಡ್ಯ..!

ಒಂದು ಹಂತದಲ್ಲಿ 18 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಭಾರತಕ್ಕೆ ಅಂಬಟಿ ರಾಯುಡು[90], ವಿಜಯ್ ಶಂಕರ್[45] ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 250ರ ಸಮೀಪ ಕೊಂಡ್ಯೊಯ್ದರು. ಇನ್ನು ಬೌಲಿಂಗ್’ನಲ್ಲಿ ಚಹಲ್ ಮೂರು, ಹಾರ್ದಿಕ್ ಪಾಂಡ್ಯ ಹಾಗೂ ಮೊಹಮ್ಮದ್ ಶಮಿ ತಲಾ 2 ಮತ್ತು ಕೇದಾರ್ ಜಾಧವ್, ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟೀಂ ಇಂಡಿಯಾದ ಈ ಆಲ್ರೌಂಡ್ ಪ್ರದರ್ಶನ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ..