ವೆಲ್ಲಿಂಗ್ಟನ್[ಫೆ.03]: ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್  ಎದುರು 252 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.

ಅಮಾನತು ಬಳಿಕ ಸಂಪೂರ್ಣ ಬದಲಾದ ಹಾರ್ದಿಕ್ ಪಾಂಡ್ಯ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಒಂದು ಹಂತದಲ್ಲಿ 18 ರನ್’ಗಳಿಗೆ ಅಗ್ರ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂಬಟಿ ರಾಯುಡು-ವಿಜಯ್ ಶಂಕರ್ ಜೋಡಿ 98 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಪಂದ್ಯ ಮುಕ್ತಾಯಕ್ಕೆ ಕೆಲವೇ ಓವರ್’ಗಳು ಬಾಕಿಯಿದ್ದಾಗ ಕ್ರೀಸ್’ಗಿಳಿದ ಹಾರ್ದಿಕ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್’ಗಳ ನೆರವಿನಿಂದ 45 ರನ್ ಬಾರಿಸಿ ತಂಡದ ಮೊತ್ತವನ್ನು 250ರ ಸಮೀಪ ಕೊಂಡ್ಯೊಯ್ದರು. ಕೊನೆಯ 10 ಓವರ್’ಗಳಲ್ಲಿ ಭಾರತ 84 ರನ್ ಕಲೆಹಾಕಲು ಪಾಂಡ್ಯ ಬ್ಯಾಟಿಂಗ್ ನೆರವಾಯಿತು.

’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

2018ರಲ್ಲಿ ನಡೆದ ಏಷ್ಯಾಕಪ್ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಪಾಂಡ್ಯ ಇದೀಗ ತಂಡಕ್ಕೆ ಭರ್ಜರಿಯಾಗಿಯೇ ಕಮ್’ಬ್ಯಾಕ್ ಮಾಡಿದ್ದಾರೆ. ಕಾಫಿ ವಿತ್ ಕರುಣ್ ಕಾರ್ಯಕ್ರಮದಲ್ಲಿ ಸೆಕ್ಸಿ ಕಾಮೆಂಟ್ ಮಾಡಿ ವಿವಾದಕ್ಕೆ ಸಿಲುಕಿದ್ದ ಪಾಂಡ್ಯ ಈಗ ಹೊಸ ಜೋಸ್’ನಲ್ಲಿ ತಂಡದಲ್ಲಿ ಮಿಂಚುತ್ತಿದ್ದಾರೆ.

ಪಾಂಡ್ಯ ಬ್ಯಾಟಿಂಗ್ ಕಂಡ ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮೂಲಕ ಗುಣಗಾನ ಮಾಡಿದ್ದಾರೆ. ಅದರಲ್ಲೂ ಕೊನೆಯ ಟ್ವೀಟ್ ಅಂತೂ ಮಿಸ್ ಮಾಡ್ದೇ ನೋಡಿ...