ಮುಸ್ತಾಫಿಜುರ್ ಸುದ್ದಿಯಾಗಲು ಕಾರಣವಾಗಿದ್ದು 2026ರ ಐಪಿಎಲ್. ಹರಾಜಿನಲ್ಲಿ ಕೆಕೆಆರ್ ₹9.2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಬಿಸಿಸಿಐ ಸೂಚನೆ ಮೇರೆಗೆ ಕೆಕೆಆರ್ ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈಬಿಟ್ಟಿದೆ.
Image credits: Instagram/mustafizur_90
Kannada
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ನಿಂದ ಬೆದರಿಕೆ
ಮುಸ್ತಾಫಿಜುರ್ ಐಪಿಎಲ್‌ನಿಂದ ಹೊರಬಿದ್ದ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಬಿಸಿಸಿಐಗೆ ಬೆದರಿಕೆ ಹಾಕಿದೆ. ಜತೆಗೆ ಬಾಂಗ್ಲಾದೇಶದಲ್ಲಿ 2026ರ ಐಪಿಎಲ್ ಪ್ರಸಾರವನ್ನು ಬ್ಯಾನ್ ಮಾಡಿದೆ.
Image credits: Instagram/mustafizur_90
Kannada
ಮುಸ್ತಾಫಿಜುರ್ ಪತ್ನಿ ಯಾರು?
ಮುಸ್ತಾಫಿಜುರ್ ರಹಮಾನ್ ಓರ್ವ ಮಾರಕ ಎಡಗೈ ವೇಗಿಯಾಗಿದ್ದು, ಜಗತ್ತಿನಾದ್ಯಂತ ಅವರ ಪರಿಚಯವಿದೆ. ಆದರೆ ಮುಸ್ತಾಫಿಜುರ್ ಪತ್ನಿಯ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ.
Image credits: Instagram/mustafizur_90
Kannada
ಮುಸ್ತಾಫಿಜುರ್ ಮದುವೆಯಾಗಿದ್ದು ಯಾವಾಗ?
ಮುಸ್ತಾಫಿಜುರ್ ಪತ್ನಿಯ ಹೆಸರು ಸಾಮಿಯಾ ಪರ್ವೀನ್ ಸೀಮೂ. ಮುಸ್ತಾಫಿಜುರ್ ಹಾಗೂ ಪರ್ವೀನ್ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಆರು ವರ್ಷಗಳ ದಾಂಪತ್ಯ ಜೀವನ ಪೂರೈಸಿದ್ದಾರೆ.
Image credits: Instagram/mustafizur_90
Kannada
ಪರ್ವೀನ್ ಓದಿದ್ದೆಷ್ಟು?
ಇನ್ನು ಮುಸ್ತಾಫಿಜುರ್ ಪತ್ನಿ ಪರ್ವೀನ್ ಢಾಕಾ ಯೂನಿವರ್ಸಿಟಿಯಲ್ಲಿ ಸೈಕೋಲಜಿಯಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.
Image credits: Instagram/mustafizur_90
Kannada
ಮುಸ್ತಫಿಜುರ್ ಪತ್ನಿಯ ಉದ್ಯೋಗವೇನು?
ಮುಸ್ತಾಫಿಜುರ್ ರಹಮಾನ್ ಅವರ ಪತ್ನಿ ಏನು ಕೆಲಸ ಮಾಡುತ್ತಾರೆ ಎನ್ನುವ ಮಾಹಿತಿ ಲಭ್ಯವಿಲ್ಲ. ಆದರೆ ಇವರಿಬ್ಬರೂ ಅನ್ಯೋನ್ಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.