Asianet Suvarna News Asianet Suvarna News

ಸುದೀ​ರ್‌​ಮನ್‌ ಕಪ್‌ಗೆ ಭಾರತ ತಂಡ ಪ್ರಕ​ಟ; ಎಚ್‌.​ಎ​ಸ್‌.​ಪ್ರ​ಣಯ್‌, ಪಿ.ವಿ.​ಸಿಂಧು ಮೇಲೆ ಎಲ್ಲರ ಚಿತ್ತ

* ಸುದೀರ್‌ಮನ್‌ ಕಪ್‌ ಟೂರ್ನಿಗೆ ಭಾರತ ಬ್ಯಾಡ್ಮಿಂಟನ್‌ ತಂಡ ಪ್ರಕಟ
* ಮೇ 14 ರಿಂದ 21ರವರೆಗೆ ಚೀನಾದಲ್ಲಿ ನಡೆಯಲಿರುವ ಟೂರ್ನಿ
* ಭಾರ​ತದ ಸವಾ​ಲನ್ನು ಎಚ್‌.​ಎ​ಸ್‌.​ಪ್ರ​ಣಯ್‌, ಪಿ.ವಿ.​ಸಿಂಧು ಮುನ್ನ​ಡೆ​ಸ​ಲಿ​ದ್ದಾರೆ

Sudirman Cup 2023 PV Sindhu HS Prannoy to lead India Challenge kvn
Author
First Published Apr 20, 2023, 10:17 AM IST

ನವ​ದೆ​ಹ​ಲಿ(ಏ.20): ಪ್ರತಿ​ಷ್ಠಿತ 2023ರ ಸುದೀ​ರ್‌​ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಮೇ 14ರಿಂದ 21ರ ವರೆಗೆ ಚೀನಾದ ಸೂಝ್ಹೊ​ದಲ್ಲಿ ನಡೆ​ಯ​ಲಿದ್ದು, ಭಾರ​ತದ ಸವಾ​ಲನ್ನು ಎಚ್‌.​ಎ​ಸ್‌.​ಪ್ರ​ಣಯ್‌, ಪಿ.ವಿ.​ಸಿಂಧು ಮುನ್ನ​ಡೆ​ಸ​ಲಿ​ದ್ದಾರೆ. ಪುರು​ಷರ ಸಿಂಗ​ಲ್ಸ್‌​ನಲ್ಲಿ ಕಿದಂಬಿ ಶ್ರೀಕಾಂತ್‌ ಕೂಡಾ ಸ್ಪರ್ಧಿ​ಸ​ಲಿದ್ದು, ಲಕ್ಷ್ಯ ಸೇನ್‌ ಮೀಸಲು ಆಟ​ಗಾ​ರ​ನಾಗಿ ತಂಡದ ಜೊತೆ​ಗಿ​ರ​ಲಿ​ದ್ದಾರೆ. 

ಸಿಂಧು ಜೊತೆ ಅನು​ಪಮಾ ಉಪಾ​ಧ್ಯಾಯ ಮಹಿಳಾ ಸಿಂಗ​ಲ್ಸ್‌​ನಲ್ಲಿ ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ಪುರು​ಷರ ಡಬ​ಲ್ಸ್‌​ನ​ಲ್ಲಿ ಸಾತ್ವಿ​ಕ್‌-ಚಿರಾಗ್‌, ಅರ್ಜು​ನ್‌-ಧೃವ್‌ ಕಪಿಲಾ, ಮಹಿಳಾ ಡಬ​ಲ್ಸ್‌​ನಲ್ಲಿ ಗಾಯ​ತ್ರಿ-ತ್ರೀಸಾ, ಅಶ್ವಿನಿ-ತನೀಷಾ, ಮಿಶ್ರ ಡಬ​ಲ್ಸ್‌​ನಲ್ಲಿ ತನೀ​ಷಾ-ಸಾಯಿ ಪ್ರತೀ​ಕ್‌ ಸ್ಪರ್ಧಿ​ಸ​ಲಿ​ದ್ದಾರೆ. ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ 16 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, 4 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಭಾರತ ‘ಸಿ’ ಗುಂಪಿ​ನಲ್ಲಿ ಮಲೇಷ್ಯಾ, ಚೈನೀಸ್‌ ತೈಪೆ ಹಾಗೂ ಆಸ್ಪ್ರೇ​ಲಿಯಾ ಜೊತೆ ಸ್ಥಾನ ಪಡೆ​ದಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ದೆ.

ಮುಂದಿನ ತಿಂಗಳು ರಾಜ್ಯ ಯುವ ಬಾಸ್ಕೆ​ಟ್‌​ಬಾ​ಲ್‌

ಬೆಂಗ​ಳೂ​ರು: ಕರ್ನಾ​ಟಕ ರಾಜ್ಯ ಬಾಸ್ಕೆ​ಟ್‌​ಬಾಲ್‌ ಸಂಸ್ಥೆ​(​ಕೆ​ಎ​ಸ್‌​ಬಿ​ಎ) ಮೇ ತಿಂಗಳ ಮೊದಲ ವಾರ ಅಂಡ​ರ್‌-16 ಬಾಲಕ, ಬಾಲ​ಕಿ​ಯ​ರಿ​ಗಾಗಿ ರಾಜ್ಯ ಯುವ ಬಾಸ್ಕೆ​ಟ್‌​ಬಾಲ್‌ ಚಾಂಪಿ​ಯ​ನ್‌​ಶಿಪ್‌ ಆಯೋ​ಜಿ​ಸು​ತ್ತಿದೆ. ಪಂದ್ಯ​ಗಳು ಬೆಂಗ​ಳೂ​ರಿ​ನಲ್ಲಿ ನಡೆ​ಯ​ಲಿದ್ದು, 2007ರ ಜನ​ವರಿ 1ರ ಬಳಿಕ ಜನಿ​ಸಿದವರು ಟೂರ್ನಿ​ಯಲ್ಲಿ ಆಡುವ ಅರ್ಹತೆ ಪಡೆ​ಯ​ಲಿ​ದ್ದಾರೆ ಎಂದು ಆಯೋ​ಜ​ಕರು ತಿಳಿ​ಸಿ​ದ್ದಾರೆ.

ಮೇ 14ಕ್ಕೆ ರಾಜ್ಯ ಫುಟ್ಬಾಲ್‌ ರೆಫ್ರಿ​ಗಳ ಅರ್ಹತಾ ಪರೀ​ಕ್ಷೆ

ಬೆಂಗ​ಳೂ​ರು: ಕರ್ನಾ​ಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ​(​ಕೆ​ಎ​ಸ್‌​ಎ​ಫ್‌​ಎ)ಯು ಫುಟ್ಬಾಲ್‌ ರೆಫ್ರಿ​ ಆಗ ಬಯಸುವ ಆಸಕ್ತರಿಗೆ ಮೇ 14ರಂದು ಬೆಂಗ​ಳೂರು ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ಅರ್ಹತಾ ಪರೀಕ್ಷೆ ಏರ್ಪ​ಡಿ​ಸಿದೆ. ಇದರ ಭಾಗ​ವಾಗಿ ಮೇ 11ರಿಂದ 13ರ ವರೆಗೆ ತರ​ಬೇತಿ ಶಿಬಿರ ಆಯೋಜಿಸಿದೆ. ಎಸ್ಸೆಸ್ಸೆಲ್ಸಿ ತೇರ್ಗ​ಡೆ​ಗೊಂಡ, ಕರ್ನಾ​ಟ​ಕದ 18ರಿಂದ 35 ವರ್ಷ ವಯೋ​ಮಾ​ನದ ಅಭ್ಯ​ರ್ಥಿ​ಗಳು ಎಐ​ಎ​ಫ್‌​ಎಫ್‌ ವೆಬ್‌​ಸೈ​ಟ್‌​ನಲ್ಲಿ ಅರ್ಜಿ ಸಲ್ಲಿ​ಸ​ಬ​ಹುದು ಎಂದು ಕೆಎ​ಸ್‌​ಎಫ್‌ಎ ತಿಳಿ​ಸಿದೆ. ಹೆಚ್ಚಿನ ಮಾಹಿ​ತಿ​ಗಾಗಿ 8660621556, 9535379025 ಸಂಪ​ರ್ಕಿ​ಸ​ಬ​ಹು​ದು.

ಭಾರ​ತ​ದಲ್ಲಿ ಮೊದ​ಲ ಬಾರಿ ಅಂತಾರಾಷ್ಟ್ರೀಯ ಸರ್ಫ್‌ ಕೂಟ

ಚೆನ್ನೈ: ಇದೇ ಮೊದಲ ಬಾರಿಗೆ ವಿಶ್ವ ಸಫ್‌ರ್‍ ಲೀಗ್‌​(​ಡ​ಬ್ಲ್ಯು​ಎ​ಸ್‌​ಎ​ಲ್‌) ಭಾಗ​ವಾದ ಅಂತಾ​ರಾ​ಷ್ಟ್ರೀಯ ಮುಕ್ತ ಸರ್ಫ್‌ ಚಾಂಪಿ​ಯ​ನ್‌​ಶಿಪ್‌ ಆತಿಥ್ಯ ಹಕ್ಕು ಭಾರ​ತಕ್ಕೆ ಲಭಿ​ಸಿದ್ದು, ತಮಿ​ಳು​ನಾ​ಡಿ​ದ ಮಹಾ​ಬ​ಲಿ​ಪು​ರಂನಲ್ಲಿ ಆಗಸ್ಟ್‌ 14ರಿಂದ 20ರ ವರೆಗೆ ಕೂಟ ನಡೆ​ಯ​ಲಿದೆ. ಇದನ್ನು ತಮಿ​ಳು​ನಾಡು ಕ್ರೀಡಾ ಸಚಿವ ಉಧ​ಯ​ನಿಧಿ ಸ್ಟಾಲಿನ್‌ ಮಂಗ​ಳ​ವಾರ ಖಚಿ​ತ​ಪ​ಡಿ​ಸಿ​ದರು. ಕೂಟ​ದಲ್ಲಿ 12ರಿಂದ 14 ದೇಶ​ಗಳ ಸುಮಾರು 100ರಷ್ಟು ಸರ್ಫ​ರ್‌​ಗಳು ಪಾಲ್ಗೊ​ಳ್ಳ​ಲಿ​ದ್ದಾರೆ. ಭಾರ​ತದ 10 ಮಂದಿ ಸರ್ಫ​ರ್‌​ಗಳು ಕೂಟಕ್ಕೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆ​ಯ​ಲಿ​ದ್ದಾರೆ ಎಂದು ಅವರು ತಿಳಿ​ಸಿ​ದರು.

ಅರ್ಜುನ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕ್ಷಣ ಕಂಡು ಕಣ್ಣೀರಿಟ್ಟಿದ್ದ ಸಚಿನ್‌!

ಕಿರಿಯರ ಕುಸ್ತಿ: ರಾಜ್ಯ​ದ ಶ್ವೇತಾಗೆ ಚಿನ್ನದ ಪದ​ಕ

ಬೆಂಗಳೂರು: ರಾಷ್ಟ್ರೀಯ ಕಿರಿ​ಯರ ಕುಸ್ತಿ ಚಾಂಪಿ​ಯ​ನ್‌ಶಿಪ್‌​ನಲ್ಲಿ ಇದೇ ಮೊದಲ ಬಾರಿ ಕರ್ನಾ​ಟಕ ಚಿನ್ನದ ಪದ​ಕದ ಸಾಧನೆ ಮಾಡಿದೆ. ಉತ್ತರ ಪ್ರದೇ​ಶದ ಗೊಂಡಾ​ದಲ್ಲಿ ನಡೆದ ಅಂಡ​ರ್‌-17 ವಿಭಾ​ಗದ ಕೂಟ​ದಲ್ಲಿ ರಾಜ್ಯದ ಕುಸ್ತಿ​ಪಟು ಶ್ವೇತಾ ಅಣ್ಣ​ಕೇರಿ 49 ಕೆ.ಜಿ. ವಿಭಾ​ಗದ ಫ್ರೀಸ್ಟೈಲ್‌ ಸ್ಪರ್ಧೆ​ಯಲ್ಲಿ ಚಿನ್ನದ ಪದಕ ತಮ್ಮ​ದಾ​ಗಿ​ಸಿ​ಕೊಂಡರು. ಇದೇ ವೇಳೆ 69 ಕೆ.ಜಿ. ವಿಭಾ​ಗ​ದಲ್ಲಿ ಮನಿಷಾ ಸಿದ್ಧಿ ಕಂಚಿನ ಪದಕ ಪಡೆ​ದರೆ, 57 ಕೆ.ಜಿ. ಸ್ಪರ್ಧೆ​ಯಲ್ಲಿ ಲಕ್ಷ್ಮಿ ಪಾಟೀಲ್‌ ಕೂಡಾ ಕಂಚು ಗೆದ್ದರು.

Follow Us:
Download App:
  • android
  • ios