Arjun Tendulkar IPL 2023: ಈ ವರ್ಷದ ಐಪಿಎಲ್‌ನಲ್ಲಿ ಈಗ ಯಾರಾದರೂ ಅದರು ಸುದ್ದಿಯಲ್ಲಿದ್ದರೆ ಅದು ಸಚಿನ್ ತೆಂಡುಲ್ಕರ್ ಪತ್ರ ಅರ್ಜುನ್ ತೆಂಡುಲ್ಕರ್ ಮಾತ್ರ. ಇತ್ತೀಚೆಗೆ ಅವರು ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ನವದೆಹಲಿ (ಏ.19): ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಈಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಪಾದಾರ್ಪಣೆ ಮಾಡಿದ ಪಂದಯದಲ್ಲಿ ಕೇವಲ 2 ಓವರ್ ಎಸೆದಿದ್ದ ಅರ್ಜುನ್ ತೆಂಡುಲ್ಕರ್, ಸನ್‌ರೈಸರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ವಿಕೆಟ್ ಉರುಳಿಸುವ ಮೂಲಕ ಐಪಿಎಲ್‌ನಲ್ಲಿ ಮೊದಲ ವಿಕೆಟ್ ಸಾಧನೆಯನ್ನೂ ಮಾಡಿದ್ದಾರೆ. ಅದಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲೂ ಅರ್ಜುನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿದ ಮೊಟ್ಟ ಮೊದಲ ತಂದೆ ಮಗ ಜೋಡಿ ಎನ್ನುವ ಮೂಲಕ ಸಚಿನ್ ಹಾಗೂ ಅರ್ಜುನ್ ಜೋಡಿ ಗುರುತಿಸಿಕೊಂಡಿದೆ.ಇದರ ನಡುವೆ, ಪಿಎಲ್‌ನಲ್ಲಿ ಕಾಮೆಂಟರಿ ಮಾಡುತ್ತಿರುವ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಇಯಾನ್ ಬಿಷಪ್, ಅರ್ಜುನ್ ಐಪಿಎಲ್ ಆಡುವುದನ್ನು ನೋಡಿ ಸಚಿನ್ ಕಣ್ಣಲ್ಲಿ ನೀರು ಬಂದಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದನ್ನು ಕೇಳಿಯೇ ಭಾವುಕರಾಗಿದ್ದ ಸಚಿನ್, ಅರ್ಜುನ್ ಮೊದಲ ಬಾರಿಗೆ ಬೌಲಿಂಗ್ ಮಾಡಲು ಬಂದಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಆದರೆ, ಇದನ್ನು ಯಾವುದೇ ಕ್ಯಾಮೆರಾಗಳು ಸೆರೆಹಿಡಿಯದಂತೆ ಎಚ್ಚರಿಕೆ ವಹಿಸಿದ್ದರು ಎಂದು ಇಯಾನ್ ಬಿಷಪ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಇಯಾನ್ ಬಿಷಪ್ (West Indies Former Playe Ian Bishop) ಬಹಳ ವರ್ಷಗಳಿಂದ ಐಪಿಎಲ್‌ನಲ್ಲಿ (IPL) ಕಾಮೆಂಟರಿ ಮಾಡುತ್ತಿದ್ದಾರೆ. ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ವಾಂಖೆಡೆಯಲ್ಲಿ ಮುಖಾಮುಖಿಯಾದ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ಪಾದಾರ್ಪಣೆ ಮಾಡಿದ್ದರು. ಅರ್ಜುನ್ ಪಾದಾರ್ಪಣೆ ಮಾಡುವ ವೇಳೆ ಸಚಿನ್ ಬಹಳ ಭಾವುಕರಾಗಿದ್ದರು ಎಂದು ಸನ್‌ರೈಸರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಬಿಷಪ್ ಬಹಿರಂಗಪಡಿಸಿದ್ದಾರೆ.
'ಮ್ಯಾನೇಜರ್ ಸಚಿನ್‌ರೊಂದಿಗೆ ಮಾತುಕತೆ ನಡೆಸಿದರು. ಅವರು ಯಾರು ಅನ್ನೋದನ್ನು ನಾನು ಈ ಹಂತದಲ್ಲಿ ಹೇಳಲು ಬಯಸೋದಿಲ್ಲ. ಈ ವೇಳೆ ಮ್ಯಾನೇಜರ್ ಅರ್ಜುನ್ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಸಚಿನ್ ಕೂಡ ಈ ಸುದ್ದಿ ಕೇಳ ಬಹಳ ಸಂತಸಗೊಂಡಿದ್ದರು. ಈ ಸುದ್ದಿಯನ್ನು ಕೇಳಿ ಸಚಿನ್ ತೆಂಡುಲ್ಕರ್ ಅವರ ಕಣ್ಣುಗಳು ತುಂಬಿ ಹೋಗಿದ್ದವು. ಇದೇ ವೇಳೆ ಮ್ಯಾನೇಜರ್ ಜೊತೆ ಮಾತನಾಡಿದ ಸಚಿನ, ನಿಮಗೆ ಗೊತ್ತಾ ನಾನು ಮೊದಲ ಬಾರಿಗೆ ಐಪಿಎಲ್‌ನ್ಲಲಿ ಬೌಲಿಂಗ್ ಮಾಡಿದ್ದಾಗಲೂ ಐದು ರನ್ ನೀಡಿದ್ದೆ. ಅರ್ಜುನ್ ಕೂಡ ತನ್ನ ಮೊದಲ ಓವರ್‌ನಲ್ಲಿ ಐದು ರನ್ ನೀಡಿದ್ದಾನೆ' ಎಂದು ಹೇಳುವ ಮೂಲಕ ಸಂಭ್ರಮ ತೋಡಿಕೊಂಡಿದ್ದಾರೆ.
ಐಪಿಎಲ್‌ಗೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ; ಭಾವನಾತ್ಮಕ ಪೋಸ್ಟ್ ಹಾಕಿದ ಸಾರಾ ತೆಂಡುಲ್ಕರ್..!
ಅರ್ಜುನ್‌ನ (Arjun Tendulkar) ಪ್ರತಿ ಓವರ್ ಸಚಿನ್‌ಗೆ ನೆನಪಿರುತ್ತದೆ: ಈ ವೇಳೆ ಮಾತನಾಡಿರುವ ಟೀಮ್ ಇಂಡಿಯಾ (Team India) ಮಾಜಿ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾನಿ ಕೋಚ್ ರವಿಶಾಸ್ತ್ರಿ, ಸಚಿನ್ ತೆಂಡುಲ್ಕರ್, ಅರ್ಜುನ್ ಎಸೆದ ಪ್ರತಿ ಓವರ್‌ಅನ್ನು ಕೂಡ ನೆನಪಿಟ್ಟುಕೊಳ್ಳುತ್ತಾರೆ ಎಂದಿದ್ದಾರೆ. ಸಚಿನ್ ಬಗ್ಗೆ ವಿಶೇಷವಾದ ಮಾಹಿತಿ ಬಹಿರಂಗ ಮಾಡಿದರು. 'ಪ್ರತಿ ಬಾರಿ ಅರ್ಜುನ್‌ಗೆ ಚೆಂಡು ಸಿಕ್ಕಾಗ ಸಚಿನ್ ಬಹಳ ಟೆನ್ಶನ್‌ನಲ್ಲಿ ಇರ್ತಾ ಇದ್ದರು. ಬಹುಶಃ ಸಚಿನ್ ತಮ್ಮ ಇನ್ನಿಂಗ್ಸ್ ಬೇಕಾದರೆ, ಮರೆಯಬಹುದು ಆದರೆ ಅರ್ಜುನ್ ತೆಂಡುಲ್ಕರ್ ಅವರ ಒಂದೇ ಒಂದು ಎಸೆತವನ್ನು ಮರೆಯೋದಿಲ್ಲ ಎಂದಿದ್ದಾರೆ. ಅರ್ಜುನ್ ಅವರ ಪ್ರತಿ ಓವರ್‌ಅನ್ನು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ.
ಚಾಂಪಿಯನ್ ತಂದೆಗಿದು ಹೆಮ್ಮೆಯ ಕ್ಷಣ: ಅರ್ಜುನ್ ತೆಂಡುಲ್ಕರ್ ಐಪಿಎಲ್ ಪಾದಾರ್ಪಣೆ ಗುಣಗಾನ ಮಾಡಿದ ದಾದಾ
