Pv Sindhu

(Search results - 222)
• PV Sindhu

OlympicsJul 31, 2021, 4:52 PM IST

ಟೋಕಿಯೋ 2020: ಸೆಮೀಸ್‌ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು..!

ಮೊದಲ ಗೇಮ್‌ನಲ್ಲೇ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಹಾಗೂ ಪಿ.ವಿ. ಸಿಂಧು ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ 11-11, 14-14, 18-18 ಸಮಬಲದ ಹೋರಾಟ ಕಂಡು ಬಂದಿತು.

• undefined

NewsJul 30, 2021, 7:15 PM IST

MS ಧೋನಿ ಹೊಸ ಹೇರ್‌ಸ್ಟೈಲ್, ಬಂದೇ ಬಿಡ್ತು ಬಿಗ್‌ಬಾಸ್ ಫೈನಲ್; ಜು.30ರ ಟಾಪ್ 10 ಸುದ್ದಿ!

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. IPLಗೂ ಮುನ್ನ ಧೋನಿ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಬಿಗ್‌ಬಾಸ್ ಸೀಸನ್ 8ರ ಫೈನಲ್ ಇದೇ ಅಗಸ್ಟ್ 7 ಮತ್ತು 8ರಂದು ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ರಿಯಲ್ ಹೀರೋ ಸೋನು ಸೂದ್‌ಗೆ ಹುಟ್ಟು ಹಬ್ಬ ಸಂಭ್ರಮ, ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗುಬಾಣ ಸೇರಿದಂತೆ ಜುಲೈ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

• undefined

OTHER SPORTSJul 30, 2021, 3:53 PM IST

ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

ಭಾರತೀಯ ಶಟ್ಲರ್ ಪಿ.ವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಟೋಕಿಯೊದಲ್ಲಿ ನೆಡೆಯುತ್ತಿರುವ  ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಭರವಸೆಯ ಆಟಗಾರ್ತಿ ಸಿಂಧು ಕ್ವಾಟರ್‌ಫೈನಲ್‌ಗೆ ತಲುಪಿದ್ದಾರೆ.   ಸಿಂಧು ಅವರು ಈ ಸಾಧನೆಗಳನ್ನು ಮಾಡಲು ನೆಡೆದು ಬಂದಿರುವ ಹಾದಿ ಸುಲಭವಾಗಿಲ್ಲ. ಕಠಿಣ ಪರಿಶ್ರಮ, ಪ್ರೀತಿಪಾತ್ರರಿಂದ ದೂರವಿರುವುದು ಮತ್ತು ಒಲಿಂಪಿಕ್ ಹಂತವನ್ನು ತಲುಪಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ.

• PV Sindhu

OlympicsJul 30, 2021, 3:22 PM IST

ಟೋಕಿಯೋ 2020: ಸಿಂಧು ಪದಕಕ್ಕೆ ಮತ್ತಷ್ಟು ಹತ್ತಿರ, ಸೆಮೀಸ್‌ಗೆ ಲಗ್ಗೆ

ಮೊದಲ ಗೇಮ್‌ನ ಆರಂಭದಲ್ಲೇ ಉಭಯ ಆಟಗಾರ್ತಿಯರು ಚುರುಕಿನ ಆಟಕ್ಕೆ ಮೊರೆಹೋದರು. ಪರಿಣಾಮ 6-6 ಅಂಕಗಳ ಸಮಬಲ ಸಾಧಿಸಿದ್ದರು. ಆ ಬಳಿಕ ಆಟಕ್ಕೆ ಕುದುರಿಕೊಂಡ ಸಿಂಧು ನಿಧಾನವಾಗಿ ಅಂಕಗಳನ್ನು ಹೆಚ್ಚಿಸುತ್ತಾ ಸಾಗಿದರು.

• undefined

NewsJul 29, 2021, 6:22 PM IST

ರಾಜ್ಯದಲ್ಲಿ ಸಂಪುಟ ಸರ್ಕಸ್, ಶೆರ್ಲಿನ್ ಮನೆಗೆ ನುಗ್ಗಿ ಕುಂದ್ರಾ ಕಿಸ್; ಜು.29ರ ಟಾಪ್ 10 ಸುದ್ದಿ!

ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲು ಶಾಸಕರ ಸರ್ಕಸ್ ತೀವ್ರಗೊಂಡಿದೆ. ಟ್ರಂಪ್ ದುರಾದೃಷ್ಟ, ಮೋದಿಯೇ ಈಗ ಅತ್ಯಂತ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ. ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಜಡ್ಜ್ ಕೊಂದು ಪರಾರಿಯಾಗಿದ್ದಾರೆ. ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಪಿವಿ ಸಿಂಧೂ, ಶೆರ್ಲಿನ್ ಮನೆಗೆ ನುಗ್ಗಿ ಕಿಸ್ ಮಾಡಿದ ರಾಜ್ ಕುಂದ್ರಾ ಸೇರಿದಂತೆ ಜುಲೈ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

• PV Sindhu

OlympicsJul 29, 2021, 7:48 AM IST

ಟೋಕಿಯೋ 2020: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು

ಮೊದಲ ಸೆಟ್‌ನಲ್ಲಿ ಸಿಂಧು ಆರಂಭದಿಂದಲೇ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಕ್ರಮೇಣ ಆಟಕ್ಕೆ ಮುಂದಾದ ಸಿಂಧು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿದರು. ಒಂದು ಹಂತದಲ್ಲಿ ಸಿಂಧು 16-15 ಅಂಕಗಳ ಮುನ್ನಡೆಯಲ್ಲಿದ್ದರು. ಇದಾದ ಬಳಿಕ ಸತತ 6 ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೇಮ್‌ ಅನ್ನು 21-15 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

• PV Sindhu

OlympicsJul 28, 2021, 9:05 AM IST

ಟೋಕಿಯೋ 2020: ಹಾಂಕಾಂಗ್ ಆಟಗಾರ್ತಿ ಬಗ್ಗುಬಡಿದು ನಾಕೌಟ್‌ ಹಂತಕ್ಕೇರಿದ ಸಿಂಧು

ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಆಶಾಕಿರಣ ಎನಿಸಿರುವ ಸಿಂಧು ಗ್ರೂಪ್‌ 'ಜೆ'ನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಅಂತಿಮ 16ರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಹಾಂಕಾಂಗ್‌ನ ಚ್ಯುಂಗ್‌ ನಿಂಗ್ ಯಿ ವಿರುದ್ದ 21-9, 21-16 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿಂಧು ನಾಕೌಟ್ ಹಂತ ಪ್ರವೇಶಿಸಿದ್ದಾರೆ.

• PV Sindhu

OlympicsJul 25, 2021, 8:23 AM IST

ಟೋಕಿಯೋ 2020: ಭರ್ಜರಿಯಾಗಿ ಶುಭಾರಂಭ ಮಾಡಿದ ಸಿಂಧು

2016ರ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೊವಾ ಎದುರು 21-7, 21-10 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸುಲಭವಾಗಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು.

• undefined

OlympicsJul 16, 2021, 1:46 PM IST

ಟೋಕಿಯೋ ಒಲಿಂಪಿಕ್ಸ್‌: ಈ 10 ಭಾರತೀಯ ಅಥ್ಲೀಟ್‌ಗಳು ಪದಕ ಗೆಲ್ಲಬಹುದು..!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೋನಾ ಭೀತಿಯ ನಡುವೆಯೇ ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭವಾಗಲಿದೆ. ಹಿಂದೆಂದಿಗಿಂತಲೂ ಈ ಬಾರಿ ಭಾರತದಿಂದ ಅತಿಹೆಚ್ಚು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ 2 ಪದಕಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಗೆ ಭಾರತ ಈ 10 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಯಾರು ಆ ಅಥ್ಲೀಟ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

PM Modi PV Sindhu

OlympicsJul 13, 2021, 7:15 PM IST

ಟೋಕಿಯೋ ಒಲಿಂಪಿಕ್ಸ್‌: ಪಿ.ವಿ ಸಿಂಧುವಿಗೆ ಒಟ್ಟಿಗೆ ಐಸ್‌ಕ್ರೀಮ್‌ ತಿನ್ನೋಣವೆಂದ ಮೋದಿ

ರಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರ ಜತೆ ಮೋದಿ ಮಾತುಕತೆ ನಡೆಸಿದರು. ಟೋಕಿಯೋ ಒಲಿಂಪಿಕ್ಸ್‌ ಕುರಿತಂತೆ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಧು ಸಿದ್ದತೆಯ ಕುರಿತಂತೆ ವಿಚಾರಿಸಿದರು.

PV Sindhu B Sai Praneeth

OlympicsJul 9, 2021, 1:42 PM IST

ಟೋಕಿಯೋ ಒಲಿಂಪಿಕ್ಸ್: ಸಿಂಧು, ಸಾಯಿ ಪ್ರಣೀತ್‌ಗೆ ಸುಲಭ ಸವಾಲು

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಸಿಂದು 6ನೇ ಶ್ರೇಯಾಂಕವನ್ನು ಪಡೆದಿದ್ದು, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 'ಜೆ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 13ನೇ ಶ್ರೇಯಾಂಕವನ್ನು ಹೊಂದಿರುವ ಬಿ. ಸಾಯಿ ಪ್ರಣೀತ್ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಪುರುಷರ ಡಬಲ್ಸ್ ವಿಭಾಗದಲ್ಲಿ 10ನೇ ಶ್ರೇಯಾಂಕ ಹೊಂದಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ರಾಜ್‌ ರಂಕಿರೆಡ್ಡಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

PV Sindhu Sudeep

OTHER SPORTSJul 5, 2021, 1:55 PM IST

ಒಲಿಂಪಿಯನ್‌ ಸಿಂಧುಗಿಂದು ಜನ್ಮದಿನದ ಸಂಭ್ರಮ; ಮಹಾರಾಷ್ಟ್ರದ ಕಿಚ್ಚನ ಫ್ಯಾನ್ಸ್‌ ಶುಭ ಹಾರೈಕೆ

ಸದ್ಯ ಬ್ಯಾಡ್ಮಿಂಟನ್‌ ಕ್ಷೇತ್ರದ ಹೃದಯಬಡಿತ ಎನಿಸಿಕೊಂಡಿರುವ ಹೈದರಾಬಾದ್ ಮೂಲದ ಆಟಗಾರ್ತಿ ಪಿ.ವಿ. ಸಿಂಧುಗೆ ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿರುವ ಸಿಂಧು, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು.

PV Sindhu

OTHER SPORTSMar 20, 2021, 9:12 AM IST

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಲಗ್ಗೆಯಿಟ್ಟ ಸಿಂಧು

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ ಆಟಗಾರ್ತಿ ಅಕನೆ ಯಮಗುಚಿ ಎದುರು ಸಿಂಧು 16-21, 21-16, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

PV Sindhu

OTHER SPORTSMar 19, 2021, 9:20 AM IST

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸಿಂಧು, ಲಕ್ಷ್ಯ ಲಗ್ಗೆ

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್ನ ಕ್ರಿಸ್ಟೋಫರ್ಸೆನ್‌ ವಿರುದ್ಧ 21-8, 21-8 ನೇರ ಗೇಮ್‌ಗಳಲ್ಲಿ, ಕೇವಲ 25 ನಿಮಿಷಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧುಗೆ ಜಪಾನ್‌ನ ಅಕನೆ ಯಮಗುಚಿ ಎದುರಾಗಲಿದ್ದಾರೆ. ಈ ಇಬ್ಬರು ಹಲವು ರೋಚಕ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ.

PV Sindhu

OTHER SPORTSMar 18, 2021, 8:03 AM IST

ಆಲ್ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು ಶುಭಾರಂಭ

ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು, ಮಲೇಷ್ಯಾದ ಎಸ್‌.ಚೀಹ್‌ ವಿರುದ್ದ 21-11, 21-17 ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದರು. ಇನ್ನು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿದ್ದ ಶ್ರೀಕಾಂತ್‌, ಐರ್ಲೆಂಡ್‌ನ ನ್ಗುಯೇನ್‌ ನಾತ್‌ ವಿರುದ್ಧ 11-21, 21-15, 12-21 ಅಂತರದಲ್ಲಿ ಸೋಲುಂಡರು.