ಆನ್‌ಲೈನ್ ವಂಚಕರಿಗೆ ನಕಲಿ ಸಿಮ್ ಮಾರಾಟ; ಮಡಿಕೇರಿಯಲ್ಲಿ ಓರ್ವನ ಬಂಧನ
ಆನ್ ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಖಾಸಗಿ ಕಂಪನಿಯ ಸಿಮ್ ಡಿಸ್ಟ್ರಿಬ್ಯೂಟರ್ ಅಬ್ದುಲ್ ರೋಶನ್ ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೊಡಗು (ಮೇ.11): ಆನ್ ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಖಾಸಗಿ ಕಂಪನಿಯ ಸಿಮ್ ಡಿಸ್ಟ್ರಿಬ್ಯೂಟರ್ ಅಬ್ದುಲ್ ರೋಶನ್ ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಹೌದು ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ ಸಿಮ್ ಗಳನ್ನು ಸರಬರಾಜು ಮಾಡುತ್ತಿದ್ದ ಮಡಿಕೇರಿಯ ಸಿಮ್ ಕಾರ್ಡ್ ಡಿಸ್ಟ್ರಿಬ್ಯೂಟರ್ ಅಬ್ದುಲ್ ರೋಶನ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೊಡಗು: SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿ ಬರ್ಬರ ಹತ್ಯೆ!
2018 ರಿಂದ 2023 ರ ವರೆಗೆ ಏರ್ ಟೆಲ್ ಸಿಮ್ ಡಿಸ್ಟ್ರಿಬ್ಯುಟರ್ ಆಗಿದ್ದ ಈತ ನಂತರ ಬೇರೊಂದು ಖಾಸಗಿ ಕಂಪನಿಯ ಸಿಮ್ ಡಿಸ್ಟ್ರಿಬ್ಯೂಟರ್ ಆಗಿದ್ದ. ಇತ್ತೀಚಿಗೆ ಕೇರಳದ ವ್ಯಕ್ತಿಯೊಬ್ಬರು ಆನ್ ಲೈನ್ ವಂಚಕರಿಂದ ಬರೋಬರಿ 1 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದರು. ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಾಗ ಮಡಿಕೇರಿಯ ಸಿಮ್ ಡಿಸ್ಟ್ರಿಬ್ಯೂಟರ್( SIM Distributor Madikeri) ಅಬ್ದುಲ್ ರೋಷನ್(Abdul Roshan) ಅಲ್ಲಿನ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಂದ ಸಾವಿರಾರು ಸಿಮ್ ಗಳು ಸೇರಿದಂತೆ 150 ಚೈನಾ ಮೇಡ್ ಮೊಬೈಲ್ ಮತ್ತು ಆರು ಬಯೋಮೆಟ್ರಿಕ್ ಸ್ಕ್ಯಾನರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಆನ್ ಲೈನ್ ದಗಾಕೋರರಿಗೆ ಗ್ರಾಹಕರ ಬದಲಿ ಸಿಮ್ ಗಳನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.