Asianet Suvarna News Asianet Suvarna News
breaking news image

ಕಾರ್ಖಾನೆಯಲ್ಲಿ ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕ ದುರ್ಮರಣ!

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕನೋರ್ವ ದುರ್ಮರಣಕ್ಕೀಡಾದ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಮಾರುತಿ ಪ್ಯಾಬ್ ಟೆಕ್ ಕಾರ್ಖಾನೆಯಲ್ಲಿ ನಡೆದಿದೆ. 

A Labour dies after the iron plate fell down at nelamangala bengaluru rural rav
Author
First Published May 11, 2024, 12:32 AM IST

ಬೆಂಗಳೂರು ಗ್ರಾಮಾಂತರ (ಮೇ.10): ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕನೋರ್ವ ದುರ್ಮರಣಕ್ಕೀಡಾದ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಮಾರುತಿ ಪ್ಯಾಬ್ ಟೆಕ್ ಕಾರ್ಖಾನೆಯಲ್ಲಿ ನಡೆದಿದೆ. 

ವಗಾಸ್(19) ಮೃತ ಕಾರ್ಮಿಕ. ಈ ದುರ್ಘಟನೆಯಲ್ಲಿ ಇನ್ನೋರ್ವ ಕಾರ್ಮಿಕ ಅಹದ್ ಅಯಬ್(23) ಎಂಬಾತ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುರಕ್ಷಿತ ಉಪಕರಣ ಕೊಡದೇ ನಿರ್ಲಕ್ಷ್ಯ ಮಾಡಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದರು ದಖಲಾಗಿದೆ.

ಆನ್‌ಲೈನ್ ವಂಚಕರಿಗೆ ನಕಲಿ ಸಿಮ್ ಮಾರಾಟ; ಮಡಿಕೇರಿಯಲ್ಲಿ ಓರ್ವನ ಬಂಧನ 

ರೈಲು ನಿಲ್ದಾಣದಲ್ಲಿ ಪ್ರಜ್ಞೆ ತಪ್ಪಿದ್ದ ಅಪರಿಚಿತ ಸಾವು

ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದ 45 ವರ್ಷದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ. 

ಮೃತರ ಚಹರೆ- 5.6 ಅಡಿ ಎತ್ತರ, ಕಪ್ಪು ಮೈಬಣ್ಣ, ಬಡಕಲು ಶರೀರ, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು, ಗಡ್ಡ ಮೀಸೆ ಬಿಟ್ಟಿದ್ದಾರೆ. ಬಿಳಿ- ನೀಲಿ ಕಪ್ಪು ಮಿಶ್ರಿತ ಬಣ್ಣದ ಚೌಕಳಿಯ ಲುಂಗಿ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೈಲ್ವೆ ಠಾಣೆಯ ಪೊಲೀಸರು ಕೋರಿದ್ದಾರೆ.

Latest Videos
Follow Us:
Download App:
  • android
  • ios