4 ಐಪಿಎಲ್‌ ಆವೃತ್ತಿಗಳಲ್ಲಿ 600+ ರನ್‌: ಕಿಂಗ್‌ ಕೊಹ್ಲಿ ಅಪರೂಪದ ದಾಖಲೆ..!

ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ 47 ಎಸೆತಗಳಲ್ಲಿ 92 ರನ್‌ ಸಿಡಿಸಿದ ವಿರಾಟ್‌, ಈ ಬಾರಿ ಟೂರ್ನಿಯ ರನ್‌ ಗಳಿಕೆಯನ್ನು 634ಕ್ಕೆ ಹೆಚ್ಚಿಸಿದರು. ಈ ಮೊದಲು 2016ರಲ್ಲಿ 973, 2023ರಲ್ಲಿ 639 ಹಾಗೂ 2013ರಲ್ಲಿ 634 ರನ್‌ ಗಳಿಸಿದ್ದರು.

IPL 2024 Virat Kohli Scripts IPL History With Massive Record As RCB Knock Out Punjab Kings kvn

ಧರ್ಮಶಾಲಾ: ರನ್ ಮೆಷಿನ್‌ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಐಪಿಎಲ್‌ನ 4 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ 47 ಎಸೆತಗಳಲ್ಲಿ 92 ರನ್‌ ಸಿಡಿಸಿದ ವಿರಾಟ್‌, ಈ ಬಾರಿ ಟೂರ್ನಿಯ ರನ್‌ ಗಳಿಕೆಯನ್ನು 634ಕ್ಕೆ ಹೆಚ್ಚಿಸಿದರು. ಈ ಮೊದಲು 2016ರಲ್ಲಿ 973, 2023ರಲ್ಲಿ 639 ಹಾಗೂ 2013ರಲ್ಲಿ 634 ರನ್‌ ಗಳಿಸಿದ್ದರು. ಸದ್ಯ ಲಖನೌ ಪರ ಆಡುತ್ತಿರುವ ಕೆ.ಎಲ್‌.ರಾಹುಲ್ ಕೂಡಾ 4 ಆವೃತ್ತಿಗಳಲ್ಲಿ ತಲಾ 600+ ರನ್‌ ಸಿಡಿಸಿದ್ದಾರೆ. ಇನ್ನು, ಕ್ರಿಸ್‌ ಗೇಲ್‌ ಹಾಗೂ ಡೇವಿಡ್‌ ವಾರ್ನರ್‌ 3, ಫಾಫ್‌ ಡು ಪ್ಲೆಸಿ 2 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮೋದಿ ಸ್ಟೇಡಿಯಂನಲ್ಲಿಂದು ಚೆನ್ನೈ vs ಗುಜರಾತ್ ಫೈಟ್..! ಗಿಲ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

3 ತಂಡಗಳ ವಿರುದ್ಧ ಕೊಹ್ಲಿ 1000+ ರನ್‌

ವಿರಾಟ್‌ ಪಂಜಾಬ್‌ ವಿರುದ್ಧ ಐಪಿಎಲ್‌ನಲ್ಲಿ 1000 ರನ್‌ ಪೂರ್ಣಗೊಳಿಸಿದರು. ಇದರೊಂದಿಗೆ 3 ವಿವಿಧ ತಂಡಗಳ ವಿರುದ್ಧ ಸಾವಿರಕ್ಕೂ ಅಧಿಕ ರನ್‌ ಗಳಿಸಿದ ಏಕೈಕ ಬ್ಯಾಟರ್‌ ಎನಿಸಿಕೊಂಡರು. ಚೆನ್ನೈ, ಡೆಲ್ಲಿ ವಿರುದ್ಧವೂ ಅವರು ಈ ಸಾಧನೆ ಮಾಡಿದ್ದಾರೆ. ರೋಹಿತ್‌ ಶರ್ಮಾ ಡೆಲ್ಲಿ ಹಾಗೂ ಕೆಕೆಆರ್‌, ಡೇವಿಡ್‌ ವಾರ್ನರ್‌ ಕೆಕೆಆರ್‌ ಹಾಗೂ ಪಂಜಾಬ್‌ ವಿರುದ್ಧ 1000ಕ್ಕೂ ಅಧಿಕ ರನ್‌ ಗಳಿಸಿದ್ದಾರೆ.

ಐಪಿಎಲ್‌ಗೆ ಕಾಲಿಟ್ಟ ಮತ್ತೋರ್ವ ಕನ್ನಡಿಗ ವಿದ್ವತ್‌: ಪಾದಾರ್ಪಣೆಯಲ್ಲೇ ಮಿಂಚು

ಧರ್ಮಶಾಲಾ: ಕರ್ನಾಟಕದ ವೇಗದ ಬೌಲರ್‌ ವಿದ್ವತ್‌ ಕಾವೇರಪ್ಪ ಪಂಜಾಬ್‌ ಕಿಂಗ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಗುರುವಾರ ಆರ್‌ಸಿಬಿ ವಿರುದ್ಧ ಪಂದ್ಯದ ಮೂಲಕ ಟೂರ್ನಿಗೆ ಕಾಲಿಟ್ಟರು.

ಚೊಚ್ಚಲ ಪಂದ್ಯದಲ್ಲೇ 25 ವರ್ಷದ ಕಾವೇರಪ್ಪ 4 ಓವರಲ್ಲಿ 36 ರನ್‌ಗೆ 2 ವಿಕೆಟ್‌ ಕಿತ್ತರು. ಅವರು ಫಾಫ್‌ ಡು ಪ್ಲೆಸಿ ಹಾಗೂ ವಿಲ್‌ ಜ್ಯಾಕ್ಸ್‌ರನ್ನು ಪೆವಿಲಿಯನ್‌ಗೆ ಅಟ್ಟಿ ಗಮನ ಸೆಳೆದರು. ಅವರಿಗೆ ಮತ್ತಷ್ಟು ವಿಕೆಟ್‌ ಸಿಗುವ ಸಾಧ್ಯತೆಯಿತ್ತು.

ಲಖನೌ ಸೂಪರ್ ಜೈಂಟ್ಸ್‌ ನಾಯಕತ್ವಕ್ಕೆ ರಾಹುಲ್ ಗುಡ್‌ ಬೈ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಆದರೆ ತಂಡದ ಆಟಗಾರರು ಅವರ ಬೌಲಿಂಗ್‌ ವೇಳೆ 3 ಕ್ಯಾಚ್‌ ಕೈಚೆಲ್ಲಿದರು. ವಿರಾಟ್‌ ಕೊಹ್ಲಿಯ ಕ್ಯಾಚನ್ನು ರೀಲಿ ರೋಸೌ ಹಾಗೂ ಅಶುತೋಶ್‌ ಶರ್ಮಾ ಬಿಟ್ಟರು. ಬಳಿಕ ರಜತ್‌ ಪಾಟೀದಾರ್‌ ನೀಡಿದ್ದ ಕ್ಯಾಚ್‌ಅನ್ನು ಹರ್ಷಲ್‌ ಪಟೇಲ್‌ ಕೈಚೆಲ್ಲಿದರು. ವಿದ್ವತ್‌ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ 20 ಪ್ರಥಮ ದರ್ಜೆ, 18 ಲಿಸ್ಟ್‌ ‘ಎ’ ಹಾಗೂ 13 ಟಿ20 ಪಂದ್ಯಗಳನ್ನಾಡಿದ್ದಾರೆ.

ದ್ರಾವಿಡ್‌ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಕಾರ್ತಿಕ್‌

ಆರ್‌ಸಿಬಿ ಪರ ಗರಿಷ್ಠ ರನ್‌ ಸರದಾರ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ದಿನೇಶ್‌ ಕಾರ್ತಿಕ್‌ 2ನೇ ಸ್ಥಾನಕ್ಕೇರಿದರು. ಅವರು 900+ ರನ್‌ ಗಳಿಸಿದ್ದು, 898 ರನ್‌ ಸಿಡಿಸಿರುವ ರಾಹುಲ್‌ ದ್ರಾವಿಡ್‌ರನ್ನು ಹಿಂದಿಕ್ಕಿದರು. ಕೊಹ್ಲಿ 7897 ರನ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios