ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!

ಪುಲ್ವಾಮ ದಾಳಿ ಭಾರತದ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲೊಂದು. 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿ ಬಳಿಕ ಭಾರತೀಯರ ಆಕ್ರೋಶ ಹೆಚ್ಚಾಗಿದೆ. ಭಯೋತ್ವಾದಕರ ತವರು ಪಾಕಿಸ್ತಾನ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಪಾಕ್ ವಿರುದ್ದದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು ಆಗ್ರಹ ಕೇಳಿಬಂದಿದೆ.

Pulwama Attack India Shouldnt Play Against Pakistan in World Cup CCI requested BCCI

ಮುಂಬೈ(ಫೆ.17): ಪುಲ್ವಾಮ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಯೋತ್ವಾದಕ ಸಂಘಟನೆಗಳ ಮೂಲವಾಗಿರುವ ಪಾಕಿಸ್ತಾನಕ್ಕೆ ತಕ್ಕೆ ಪಾಠ ಕಲಿಸಲು ಭಾರತ ಎಲ್ಲಾ ಪ್ರಯತ್ನಕ್ಕೆ ಮುಂದಾಗಿದೆ.  ಇದೀಗ ಪಾಕಿಸ್ತಾನ ವಿರುದ್ದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಭಂಧ!

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಆಡಲಿದೆ. ವೇಳಾಪಟ್ಟಿ ಪ್ರಕಾರ ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಇಂಡೋ-ಪಾಕ್ ಮುಖಾಮುಖಿಯಾಗಲಿದೆ. ಇದೀಗ ಪಾಕ್ ವಿರುದ್ದದ ಪಂದ್ಯ ಆಡದಂತೆ ಕ್ರೆಕೆಟ್ ಕ್ಲಬ್ ಆಫ್ ಇಂಡಿಯಾ(CCI) ಕಾರ್ಯದರ್ಶಿ ಸುರೇಶ್ ಭಫ್ನ ಬಿಸಿಸಿಐ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ಸಿಕ್ಸರ್ ನೋಡಿ ಸಂಭ್ರಮಿಸುತ್ತಿದ್ದಾತ ಸೂಸೈಡ್ ಬಾಂಬರ್ ಹೇಗಾದ?

ಕ್ರಿಕೆಟ್‌ಗಿಂತ ದೇಶ ಮೊದಲು.  ಹೀಗಾಗಿ ಪಾಕಿಸ್ತಾನ ವಿರುದ್ದದ ಎಲ್ಲಾ ವ್ಯವಹಾರಗಳನ್ನ ನಿಲ್ಲಿಸಬೇಕು. ಈ ಮೂಲಕ ಪಾಕ್‌ಗೆ ಬುದ್ದಿಕಲಿಸಬೇಕು ಎಂದು ಸುರೇಶ್ ಹೇಳಿದ್ದಾರೆ. ಘಟನೆ ಕುರಿತು ಪಾಕಿಸ್ತಾನ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಯಾವುದೇ ಹೇಳಿಕೆಯಾಗಲಿ, ಖಂಡನೆಯಾಗಲಿ, ಸಂತಾಪವಾಗಿ ಸೂಚಿಸಿಲ್ಲ. ಇತರ ದೇಶಗಳು ಘಟನೆಯನ್ನ ಖಂಡಿಸಿದೆ  ಎಂದು ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

ಪುಲ್ವಾಮ ದಾಳಿಯಿಂದ ಕ್ರೆಕೆಟ್ ಕ್ಲಬ್ ಆಫ್ ಇಂಡಿಯಾ(CCI) ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ(ಸದ್ಯ ಪ್ರಧಾನಿ) ಇಮ್ರಾನ್ ಖಾನ್ ಫೋಟೋ ಎತ್ತಂಗಡಿ ಮಾಡಲಾಗಿದೆ. ಈ ಮೂಲಕ ಕ್ಲಬ್ ಆಫ್ ಇಂಡಿಯಾ ಪ್ರತಿಭಟನೆ ಮಾಡಿದೆ.

Latest Videos
Follow Us:
Download App:
  • android
  • ios