Asianet Suvarna News Asianet Suvarna News

ಧೋನಿ ಸಿಕ್ಸರ್ ನೋಡಿ ಸಂಭ್ರಮಿಸುತ್ತಿದ್ದಾತ ಸೂಸೈಡ್ ಬಾಂಬರ್ ಹೇಗಾದ?

ಧೋನಿ ಹೆಲಿಕಾಪ್ಟರ್ ಶಾಟ್ ಸಿಕ್ಸರ್ ಭಾರಿಸುತ್ತಿದ್ದರೆ, ಇತ್ತ ಬಾಲಕ ಆದಿಲ್ ದಾರ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೀಗೆ  MSD ಸಿಕ್ಸರ್ ಸಂಭ್ರಮಿಸುತ್ತಿದ್ದ ಈತ, ಆತ್ಮಾಹುತಿ ಬಾಂಬರ್ ಹೇಗಾದ?  ಪುಲ್ವಾಮ ದಾಳಿ ಭಯೋತ್ವಾದಕ ಆದಿಲ್ ದಾರ್ ಕತೆ ಇಲ್ಲಿದೆ.
 

MS Dhoni biggest fan Adil dar turned to suicide bomber here is the truth
Author
Bengaluru, First Published Feb 17, 2019, 2:40 PM IST

ಪುಲ್ವಾಮ(ಫೆ.17): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ  ದಾಳಿ ನಡೆಸಿ 40ಕ್ಕೂ ಹೆಚ್ಚು CRPF ಯೋಧರನ್ನ ಬಲಿ ಪಡೆದ ಆತ್ಮಾಹುತಿ ಬಾಂಬರ್ ಆದಿಲ್ ದಾರ್ ಭಾರತದೊಳಗಿದ್ದೇ ಈ ಕೃತ್ಯ ನಡೆಸಿದ. ಜೈಶ್ -ಇ-ಮೊಹಮ್ಮದ್ ಭಯೋತ್ವಾದಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಆದಿಲ್ ದಾರ್ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಯ ಕಟ್ಟಾ ಅಭಿಮಾನಿಯಾಗಿದ್ದ ಅನ್ನೋ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!

ನಾಯಕನಾಗಿದ್ದ ಎಂ.ಎಸ್.ಧೋನಿ ಪ್ರತಿ ಸಿಕ್ಸರ್ ಹೊಡೆತವನ್ನೂ ಬಾಲಕನಾಗಿದ್ದಾಗ ಆದಿಲ್ ದಾರ್ ಸಂಭ್ರಮಿಸಿತ್ತಿದ್ದ. ಧೋನಿ ಕ್ರೀಸಿಗಿಳಿಯುತ್ತಿದ್ದಂತೆ ಟಿವಿ ಮುಂದೆ ಅಲುಗಾಡದೆ ಕೂರುತ್ತಿದ್ದ ಅದಿಲ್ ದಾರ್, ಸಿಕ್ಸರ್ ಅಬ್ಬರ ಶುರುವಾಗುತ್ತಿದ್ದಂತೆ ಆದಿಲ್ ಸಂಭ್ರಮ ಜೋರಾಗುತ್ತಿತ್ತು. ಆದರೆ ಧೋನಿ ಔಟಾದರೆ ಆದಿಲ್ ದಾರ್ ಯಾರೊಂದಿಗೂ ಮಾತನಾಡದೇ ಸುಮ್ಮನಾಗುತ್ತಿದ್ದ ಅನ್ನೋ ಮಾಹಿತಿಯನ್ನ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!

ಆದಿಲ್ ದಾರ್ 12ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ.  ಧೋನಿ ಬ್ಯಾಟಿಂಗ್ ಪ್ರೀತಿಸುತ್ತಿದ್ದ ಆದಿಲ್ ದಾರ್, 2016ರ ಬಳಿಕ ಭಾರತವನ್ನೇ ದ್ವೇಷಿಸತೊಡಗಿದ್ದ. 2016ರಲ್ಲಿ ಸೇನೆ ಮೇಲಿನ ಕಲ್ಲು ತೂರಾಟ ತಾರಕಕ್ಕೇರಿತ್ತು. ಈ ವೇಳೆ ಮನೆಗೆ ಹಿಂತಿರುಗುತ್ತಿದ್ದ ಆದಿಲ್ ದಾರ್‌ನನ್ನು ಜಮ್ಮು ಮತ್ತು ಕಾಶ್ಮೀರದ ವಿಶೇಷ ಭದ್ರತಾ ದಳ ಹಿಡಿದು ಹಿಂಸೆ ನೀಡಿತ್ತು. ಇದು ಆದಿಲ್ ದಾರ ಮನಸ್ಸಿಗೆ ತೀವ್ರ ಆಘಾತ ನೀಡಿತ್ತು ಎಂದು ದಾರ್ ತಂದೆ ಹೇಳಿದ್ದಾರೆ.  

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

ಈ ಘಟನೆ ಬಳಿಕ ಆದಿಲ್ ದಾರ್ ಮನೆಯಿಂದ ಕಾಣೆಯಾದ ಬಳಿಕ ಜೈಶ್-ಇ-ಮೊಹಮ್ಮದ್ ಸಂಘಟನೆ ಸೇರಿಕೊಂಡು  ಭಯೋತ್ವಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ಆದರೆ ಮಗ ಭಯೋತ್ವಾದಕ ಸಂಘಟನೆ ಸೇರಿರುವುದು ಪುಲ್ವಾಮ ದಾಳಿಯ  ಬಳಿಕವಷ್ಟೇ ತಿಳಿದಿದೆ ಎಂದು ದಾರ್ ತಂದೆ ಹೇಳಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಸೇನೆ ಕಾರ್ಯಚರಣೆ ಅಗತ್ಯ. ಆದರೆ ಸೇನೆ ಹಿಂಸೆ ನೀಡಿತು, ಪ್ರಶ್ನೆ ಮಾಡಿತು ಅನ್ನೋ ಕಾರಣಕ್ಕೆ ಭಯೋತ್ವಾದಕನಾದ ಅನ್ನೋದು ಒಪ್ಪುವ ಮಾತಲ್ಲ. ಇಷ್ಟೇ ಅಲ್ಲ, ಆದಿಲ್ ದಾರ್‌ನನ್ನ ಸಮರ್ಥಿಸಿಕೊಳ್ಳುವ ಪ್ರತಿಯೊಬ್ಬರು ಕೂಡ ಭಯೋತ್ವಾದಕರೇ ಅನ್ನೋದು ಕಟು ಸತ್ಯ.

Follow Us:
Download App:
  • android
  • ios