ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!
ಭಯೋತ್ವಾದಕರನ್ನ ಹುಟ್ಟು ಹಾಕಿ ಅವರ ನೆರಳಲ್ಲೇ ಬೇಳೆ ಬೇಯಿಸಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿ ಪ್ರಸಾರ ನಿರ್ಬಂಧಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ಫೆ.17): ಭಯೋತ್ವಾದಕರನ್ನ ಮಟ್ಟ ಹಾಕದೇ ಭಾರತದೊಳಗೆ ನುಸುಳಲು ಅವಕಾಶ ಮಾಡಿಕೊಡುತ್ತಿರುವ ಪಾಕಿಸ್ತಾನಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಿದೆ. ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ವಾದ ಸಂಘಟನೆ ಭಾರತದ 40ಕ್ಕೂ ಹೆಚ್ಚು CRPF ಯೋಧರನ್ನ ಬಲಿಪಡೆದಿತ್ತು. ಪುಲ್ವಾಮ ದಾಳಿಯಿಂದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಗೆ ಆರ್ಥಿಕ ಹೊಡೆತ ಬಿದ್ದಿದೆ.
ಇದನ್ನೂ ಓದಿ: ಧೋನಿ ಸಿಕ್ಸರ್ ನೋಡಿ ಸಂಭ್ರಮಿಸುತ್ತಿದ್ದಾತ ಸೂಸೈಡ್ ಬಾಂಬರ್ ಹೇಗಾದ?
ಪಾಕಿಸ್ತಾನ ಸೂಪರ್ ಲೀಗ್(PSL)ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದರ ಅಧಿಕೃತ ಪ್ರಸಾರವನ್ನ ಡಿಸ್ಪೋರ್ಟ್ ಮಾಡುತ್ತಿದೆ. ಇದೀಗ ಪುಲ್ವಾಮ ದಾಳಿಯಿಂದಾಗಿ ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧಿಸಲಾಗಿದೆ. ಯೋಧರು ಹುತಾತ್ಮರಾಗಿದ್ದಾರೆ. ಇಡೀ ಭಾರತವೇ ಶೋಕಸಾಗರಲ್ಲಿ ಮುಳುಗಿದೆ. ಇದೀಗ ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿ ಪ್ರಸಾರವನ್ನ ಭಾರತದಲ್ಲಿ ನಿರ್ಬಂಧಿಸುತ್ತಿದ್ದೇವೆ ಎಂದು ಡಿ ಸ್ಪೋರ್ಟ್ ವಾಹಿನಿ ಹೇಳಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!
ಭಾರತದಲ್ಲಿ ಪ್ರಸಾರ ನಿರ್ಬಂಧಿಸುವುದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆರ್ಥಿಕ ನಷ್ಟವಾಗಲಿದೆ. ಕಾರಣ ಪಾಕಿಸ್ತಾನ ಸೂಪರ್ ಲೀಗ್ ಏಷ್ಯಾದಲ್ಲಿ ಪ್ರಸಾರವಾಗಲಿದೆ ಅನ್ನೋ ಕಾರಣದಿಂದ ಹಲವು ಏಷ್ಯಾ ಕಂಪೆನಿಗಳು ಜಾಹೀರಾತು ನೀಡಿದೆ. ಇದೀಗ ಭಾರತದಲ್ಲಿ ಪ್ರಸಾರ ನಿರ್ಬಂಧವಾಗಿರೋದು ಜಾಹೀರಾತಿಗೆ ಹೊಡೆತ ಬೀಳಲಿದೆ. ಇದು ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಲಿದೆ.
ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!
2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಭಯೋತ್ವಾದಕ ದಾಳಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ನಿಂತುಹೋಗಿದೆ. ಇದರಿಂದ ಪಾಕ್ ಕ್ರಿಕೆಟ್ ಮಂಡಳಿ ನಷ್ಟಕ್ಕೆ ಗುರಿಯಾಗಿತ್ತು. ಕಳೆದರಡು ವರ್ಷದಿಂದ ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಆಯೋಜಿಸೋ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಪುಲ್ವಾಮ ದಾಳಿಯಿಂದ ಪಾಕಿಸ್ತಾನ ಕ್ರಿಕೆಟ್ ಮತ್ತೆ ಕತ್ತಲಲ್ಲಿ ಮುಳುಗಲಿದೆ.