ಮುಂಬೈ(ಫೆ.17): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ವಾದಕ ದಾಳಿಯಲ್ಲಿ 40 CRPF ಯೋಧರು ಹುತಾತ್ಮರಾಗಿದ್ದಾರೆ. ಇಡೀ ಭಾರತವೇ ಶೋಕಸಾಗರಲ್ಲಿ ಮುಳುಗಿದೆ. ಹುತಾತ್ಮ ಯೋಧರ ಪಾರ್ಥೀವ ಶರೀರ ಮುಂದೆ ಕುಟುಂಬದ ಆಕ್ರಂದನ ಭಾರತೀಯರನ್ನ ಮತ್ತಷ್ಟು ನೋವಿಗೆ ತಳ್ಳಿದೆ.  ಇದೀಗ ಭಯೋತ್ವಾದಕರ ಮೂಲಕ ಪಾಕಿಸ್ತಾನಕ್ಕೆ ಭಾರತ ಒಂದೊಂದೇ ಪೆಟ್ಟು ನೀಡುತ್ತಿದೆ.

ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!

ಮುಂಬೈನ ಬ್ರೇಬೋರ್ನ್ ಕ್ರೀಡಾಂಗದಲ್ಲಿರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(CCI) ಕೂಡ ದಾಳಿಯನ್ನ ತೀವ್ರವಾಗಿ ಖಂಡಿಸಿದೆ. ಇಷ್ಟೇ ಅಲ್ಲ ದಾಳಿಯ ವಿರುದ್ಧ ಪ್ರತಿಭಟನೆ ಸೂಚಕವಾಗಿ CCI ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನ ಮಾಜಿ ನಾಯಕ, ಸದ್ಯ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಪರದೆ ಹಾಕಿ ಮುಚ್ಚಲಾಗಿದೆ.

 

 

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!

CCI ಕ್ಲಬ್ ರೆಸ್ಟೋರೆಂಟ್‌ನಲ್ಲಿ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಬ್ರಿಯಾನ್ ಲಾರಾ ಸೇರಿದಂತೆ ಮಾಜಿ ಹಾಗೂ ಹಾಲಿ ದಿಗ್ಗಜ ಕ್ರಿಕೆಟಿಗರ ಫೋಟೋಗಳನ್ನ ಹಾಕಲಾಗಿದೆ. ಇದರಲ್ಲಿ ಕಪಿಲ್ ದೇವ್ ಫೋಟೋ ಸನಿಹದಲ್ಲೇ ಪಾಕಿಸ್ತಾನ ಮಾಜಿ ನಾಯಕ, 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಫೋಟೋ ಕೂಡ ಇದೆ. ಆದರೆ ಪುಲ್ವಾಮ ದಾಳಿಯಿಂದಾಗಿ ಇದೀಗ CCI ರೆಸ್ಟೋರೆಂಟ್ ಫೋಟೋಗೆ ಪರದೆ ಹಾಕಿ ಮುಚ್ಚಲಾಗಿದೆ.  

ಇದನ್ನೂ ಓದಿ: ಪುಲ್ವಾಮ ದಾಳಿ : ಉಗ್ರರ ಕೃತ್ಯ ಖಂಡಿಸಿದ ಸೆಹ್ವಾಗ್-ಗಂಭೀರ್!

ಈ ಫೋಟೋವನ್ನ ಎತ್ತಂಗಡಿ ಮಾಡೋ ಕುರಿತು ಈಗಲೇ ಏನೂ ಹೇಳುವುದಿಲ್ಲ. ಆದರೆ ಈ ಫೋಟೋ ಇಲ್ಲಿ ಶಾಶ್ವತವಾಗಿ ಇರೋ ಯಾವುದೇ ಲಕ್ಷಣಗಳಿಲ್ಲ ಎಂದು CCI ಅಧ್ಯಕ್ಷ ಪ್ರೇಮಾಲ್ ಉದಾನಿ ಹೇಳಿದ್ದಾರೆ. ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ಇಮ್ರಾನ್ ಖಾನ್ 1987 ಹಾಗೂ 1989 ರಲ್ಲಿ 2 ಬಾರಿ ಆಡಿದ್ದಾರೆ.