ಆರಂಭದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿ, ಮೊದಲಾರ್ಧಕ್ಕೆ 18-10 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಬಳಿಕ ಪುಟಿದೆದ್ದ ಪುಣೆ ಕೊನೆ ಕ್ಷಣದಲ್ಲಿ ಚುರುಕಿನ ರೈಡ್‌, ಬಲಿಷ್ಠ ಡಿಫೆನ್ಸ್‌ ಮೂಲಕ ಸತತ ಅಂಕ ಸಂಪಾದಿಸಿ ಸೋಲು ತಪ್ಪಿಸಿಕೊಂಡಿತು.

ನವದೆಹಲಿ(ಫೆ.06): 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟನ್‌ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಸೋಮವಾರ ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 30-30 ಅಂಕಗಳಿಂದ ಟೈ ಸಾಧಿಸಿದ ಪುಣೇರಿ ತಂಡ, ಟೂರ್ನಿಯ 2ನೇ ತಂಡವಾಗಿ ಪ್ಲೇ-ಆಫ್‌ಗೇರಿತು. ಜೈಪುರ ಪ್ಲೇ-ಆಫ್‌ಗೇರಿದ ಮೊದಲ ತಂಡ. ಪುಣೆ 17 ಪಂದ್ಯಗಳಲ್ಲಿ 12 ಜಯದೊಂದಿಗೆ 71 ಅಂಕ ಸಂಪಾದಿಸಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಡೆಲ್ಲಿ 19 ಪಂದ್ಯಗಳಲ್ಲಿ 11 ಗೆಲುವಿನೊಂದಿಗೆ 68 ಅಂಕಗಳಿಸಿ 3ನೇ ಸ್ಥಾನದಲ್ಲಿದೆ.

ಆರಂಭದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿ, ಮೊದಲಾರ್ಧಕ್ಕೆ 18-10 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಬಳಿಕ ಪುಟಿದೆದ್ದ ಪುಣೆ ಕೊನೆ ಕ್ಷಣದಲ್ಲಿ ಚುರುಕಿನ ರೈಡ್‌, ಬಲಿಷ್ಠ ಡಿಫೆನ್ಸ್‌ ಮೂಲಕ ಸತತ ಅಂಕ ಸಂಪಾದಿಸಿ ಸೋಲು ತಪ್ಪಿಸಿಕೊಂಡಿತು.

ಸಾಕ್ಷಿ ಧೋನಿ ಕುರಿತು ಬೆನ್‌ ಡಕೆಟ್‌ ಮಾಡಿದ್ದ 11 ವರ್ಷದ ಹಿಂದಿನ ಟ್ವೀಟ್‌ ವೈರಲ್‌!

ಸೋಮವಾರದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 36-33 ಅಂಕಗಳಿಂದ ಗೆಲುವು ಸಾಧಿಸಿತು.

ಇಂದಿನ ಪಂದ್ಯ: ತಮಿಳ್‌ ತಲೈವಾಸ್‌-ಯುಪಿ ಯೋಧಾಸ್‌, ರಾತ್ರಿ 8ಕ್ಕೆ

ಪ್ಯಾರಾ ಶೂಟಿಂಗ್‌ ವಿಶ್ವಕಪ್‌ ಭಾರತದಿಂದ ಸ್ಥಳಾಂತರ?

ನವದೆಹಲಿ: ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದು, ಇದರಿಂದಾಗಿ ಮುಂದಿನ ತಿಂಗಳು ಆಯೋಜನೆಗೊಳ್ಳಬೇಕಿದ್ದ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ ಭಾರತದಿಂದ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ. ವಿಶ್ವಕಪ್‌ ನವದೆಹಲಿಯಲ್ಲಿ ಮಾ.6ರಿಂದ 15ರ ವರೆಗೆ ನಿಗದಿಯಾಗಿದೆ. 52 ದೇಶಗಳ 500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ ಪ್ಯಾರಾಲಿಂಪಿಕ್‌ ಸಮಿತಿಯನ್ನೇ ಸಚಿವಾಲಯ ಅಮಾನತುಗೊಳಿಸಿದ್ದರಿಂದ ಕೂಟ ಬೇರೆಡೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದೆ.

ವಿಶ್ವಕ್ಕೇ ನಂಬರ್‌ 1 ಆಗುತ್ತೇನೆ ಅಂದುಕೊಂಡಿರಲಿಲ್ಲ: ಚಿರಾಗ್‌ ಶೆಟ್ಟಿ

ಪ್ಯಾರಾ ಅಥ್ಲೀಟ್ಸ್‌ಗೆ ಸನ್ಮಾನ

ಜಾಗತಿಕ ಮಟ್ಟದ ಕೂಟಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಪ್ಯಾರಾ ಅಥ್ಲೀಟ್‌ಗಳಾದ ರಕ್ಷಿತಾ ರಾಜು, ಶರತ್‌ ಮಾಕನಹಳ್ಳಿ, ಮನಿಶಾ ರಾಮದಾಸ್‌ರನ್ನು ಪ್ರಸಿದ್ಧ ಉಡುಪು ತಯಾರಕ ಕಂಪನಿ ಬ್ಲಾಕ್‌ಬೆರ್ರೀಸ್‌ ವತಿಯಿಂದ ಸೋಮವಾರ ಬೆಂಗಳೂರಿನ ಇಂದಿರಾ ನಗರದಲ್ಲಿರುವ ಮಳಿಗೆಯಲ್ಲಿ ಸನ್ಮಾನಿಸಲಾಯಿತು. ಬ್ಲಾಕ್‌ಬೆರ್ರೀಸ್‌ ವ್ಯವಸ್ಥಾಪಕ ಅಭಿಷೇಕ್‌ ಮಿಶ್ರಾ, ಪ್ಯಾರಾ ಅಥ್ಲೆಟಿಕ್ಸ್ ಕೋಚ್‌ ಸತ್ಯನಾರಾಯಣ ಉಪಸ್ಥಿತರಿದ್ದರು.