ವಿಶ್ವಕ್ಕೇ ನಂಬರ್ 1 ಆಗುತ್ತೇನೆ ಅಂದುಕೊಂಡಿರಲಿಲ್ಲ: ಚಿರಾಗ್ ಶೆಟ್ಟಿ
ಶನಿವಾರ ನಿಪ್ಪೊನ್ ಪೇಂಟ್ ಬ್ಯಾಡ್ಮಿಂಟನ್ ಕಪ್ ಅಂಗವಾಗಿ ಆಯೋಜಿಸಲಾಗಿದ್ದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆಂಗಳೂರಿಗೆ 2010ರ ವೇಳೆ ಮೊದಲ ಬಾರಿ ಬಂದಿದ್ದೆ. ಶಿಬಿರಕ್ಕಾಗಿ ಆಗಾಗ ಇಲ್ಲಿಗೆ ಬರುತ್ತಿರುತ್ತೇನೆ. ನಗರದೊಂದಿಗೆ ನನಗೆ ವಿಶೇಷ ಪ್ರೀತಿಯಿದೆ ಎಂದರು.
ಬೆಂಗಳೂರು(ಫೆ.04): ಬ್ಯಾಡ್ಮಿಂಟನ್ ಮೇಲೆ ಬಾಲ್ಯದಲ್ಲೇ ವಿಶೇಷ ಒಲವು ಇತ್ತು. ಅದಕ್ಕಾಗಿಯೇ ಎಲ್ಲರಂತೆ ನಾನೂ ಬ್ಯಾಡ್ಮಿಂಟನ್ ಆಡುತ್ತಿದ್ದೆ. ಆದರೆ ಅದರಲ್ಲೇ ಚಾಂಪಿಯನ್, ವಿಶ್ವ ನಂ.1 ಆಗುತ್ತೇನೆ ಎಂದುಕೊಂಡಿರಲಿಲ್ಲ ಎಂದು ಭಾರತದ ತಾರಾ ಶಟ್ಲರ್ ಚಿರಾಗ್ ಶೆಟ್ಟಿ ಹೇಳಿದ್ದಾರೆ.
ಶನಿವಾರ ನಿಪ್ಪೊನ್ ಪೇಂಟ್ ಬ್ಯಾಡ್ಮಿಂಟನ್ ಕಪ್ ಅಂಗವಾಗಿ ಆಯೋಜಿಸಲಾಗಿದ್ದ ‘ಮೀಟ್ ಆ್ಯಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬೆಂಗಳೂರಿಗೆ 2010ರ ವೇಳೆ ಮೊದಲ ಬಾರಿ ಬಂದಿದ್ದೆ. ಶಿಬಿರಕ್ಕಾಗಿ ಆಗಾಗ ಇಲ್ಲಿಗೆ ಬರುತ್ತಿರುತ್ತೇನೆ. ನಗರದೊಂದಿಗೆ ನನಗೆ ವಿಶೇಷ ಪ್ರೀತಿಯಿದೆ ಎಂದರು.
ಈ ವೇಳೆ ಯುವ ಬ್ಯಾಡ್ಮಿಂಟನ್ ಪಟುಗಳೊಂದಿಗೆ ಸಂವಹನ ನಡೆಸಿದರು. ಅಲ್ಲದೆ ಟೂರ್ನಿ ವಿಜೇತರಿಗೆ ಟ್ರೋಫಿ ವಿತರಿಸಿದರು. ಕಾರ್ಯಕ್ರಮದಲ್ಲಿ ನಿಪ್ಪೊನ್ ಪೇಂಟ್ ಮುಖ್ಯಸ್ಥ ಮಹೇಶ್ ಆನಂದ್ ಸೇರಿ ಹಲವರು ಉಪಸ್ಥಿತರಿದ್ದರು.
ಥಾಯ್ಲೆಂಡ್ ಮಾಸ್ಟರ್ಸ್: ಆಶ್ಮಿತಾ ಸವಾಲು ಅಂತ್ಯ
ಬ್ಯಾಂಕಾಕ್: ಭಾರತದ ಯುವ ಶಟ್ಲರ್ ಅಶ್ಮಿತಾ ಚಾಲಿಹಾ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 24 ವರ್ಷದ ಆಶ್ಮಿತಾ, ವಿಶ್ವ ನಂ.17 ಸ್ಥಳೀಯ ಆಟಗಾರ ಸುಪನಿದಾ ಕೇಟ್ಥಾಂಗ್ ವಿರುದ್ಧ 13-21, 12-21 ಗೇಮ್‌ಗಳಲ್ಲಿ ಪರಭಾವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
Ranji Trophy: ರೈಲ್ವೇಸ್ ಎದುರು ರಾಜ್ಯಕ್ಕೆ ಇನ್ನಿಂಗ್ಸ್ ಮುನ್ನಡೆ
ಟೆನಿಸ್: ಪಾಕ್ ವಿರುದ್ಧ ಭಾರತಕ್ಕೆ 2-0 ಮುನ್ನಡೆ
ಇಸ್ಲಾಮಾಬಾದ್: ಡೇವಿಸ್ ಕಪ್ ವಿಶ್ವ ಗುಂಪು-1ರ ಪ್ಲೇ-ಆಫ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಮೊದಲ ದಿನವಾದ ಶನಿವಾರ ನಡೆದ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತೀಯ ಟೆನಿಸಿಗರು ಜಯಭೇರಿ ಬಾರಿಸಿದರು.
ಮೊದಲ ಮುಖಾಮುಖಿಯಲ್ಲಿ ರಾಮ್‌ಕುಮಾರ್ ರಾಮನಾಥನ್ 6-7, 7-6, 6-0 ಸೆಟ್‌ಗಳಲ್ಲಿ ಪಾಕಿಸ್ತಾನದ ಅನುಭವಿ ಆಟಗಾರ ಐಸಾಮ್-ಉಲ್ ಹಕ್ ಖುರೇಷಿ ವಿರುದ್ಧ ಗೆದ್ದರು.ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ರಾಮ್‌ಗೆ ಆರಂಭದಲ್ಲಿ ಕಷ್ಟವಾದರೂ, ಪಂದ್ಯ ಸಾಗಿದಂತೆ ತಮ್ಮ ಆಟದ ಹಿಡಿತ ಕಂಡುಕೊಂಡರು. 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾದರೂ, ಸೆಟ್ ತಮ್ಮದಾಗಿಸಿಕೊಂಡ ರಾಮ್, 3ನೇ ಸೆಟ್‌ನಲ್ಲಿ ಖುರೇಷಿಗೆ ಒಂದೂ ಗೇಮ್ ಬಿಟ್ಟುಕೊಡಲಿಲ್ಲ. 43 ವರ್ಷದ ಖುರೇಷಿ, 3ನೇ ಸೆಟ್ ವೇಳೆಗೆ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿ ಸುಲಭವಾಗಿ ಸೋಲೊಪ್ಪಿಕೊಂಡರು. 2ನೇ ಮುಖಾಮುಖಿಯಲ್ಲಿ ಶ್ರೀರಾಮ್ ಬಾಲಾಜಿ 7-5, 6-3 ಸೆಟ್‌ಗಳಲ್ಲಿ 44 ವರ್ಷದ ಅಕೀಲ್ ಖಾನ್ ವಿರುದ್ಧ ಜಯಿಸಿದರು.
ಇಂದು ನಾಳೆ ಭಾರತ vs ಪಾಕಿಸ್ತಾನ ಡೇವಿಸ್ ಕಪ್ ಟೆನಿಸ್ ಪಂದ್ಯ
ಭಾನುವಾರ ಡಬಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿದ್ದು, ಭಾರತ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಈ ಮುಖಾಮುಖಿ ಗೆದ್ದು ವಿಶ್ವ ಗುಂಪು-1ರಲ್ಲೇ ಉಳಿಯುವುದು ಭಾರತದ ಗುರಿಯಾಗಿದೆ.
ಕಬಡ್ಡಿ: ಯುಪಿ, ಡೆಲ್ಲಿಗೆ ಜಯ
ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಶನಿವಾರ ಯುಪಿ ಯೋಧಾಸ್, ದಬಾಂಗ್ ಡೆಲ್ಲಿ ತಂಡಗಳು ಜಯಗಳಿಸಿದವು. ಯೋಧಾಸ್ ತಂಡ ಯು ಮುಂಬಾ ವಿರುದ್ಧ 39-23ರಲ್ಲಿ ಗೆದ್ದರೆ, ಡೆಲ್ಲಿಯು ತೆಲುಗು ಟೈಟಾನ್ಸ್ ವಿರುದ್ಧ 44-33 ಅಂಕಗಳಿಂದ ಜಯಭೇರಿ ಬಾರಿಸಿತು.
ಇಂದಿನ ಪಂದ್ಯ:
ಬೆಂಗಳೂರು-ಮುಂಬಾ, ರಾತ್ರಿ 8ಕ್ಕೆ
ಗುಜರಾತ್-ತಲೈವಾಸ್, ರಾತ್ರಿ 9ಕ್ಕ